ತವರಿಗೆ ಬಾ ತಂಗಿ ಚಿತ್ರದಲ್ಲಿ ಶಿವರಾಜ್ ಕುಮಾರ್,ಅನು ಪ್ರಭಾಕರ್, ರಾಧಿಕಾ ಕುಮಾರಸ್ವಾಮಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕೋಮಲ್ ಕುಮಾರ್, ಅವಿನಾಶ್ ಮುಂತಾದ ತಾರ ಬಳಗ ಚಿತ್ರದಲ್ಲಿದೆ. ಅಣ್ಣ-ತಂಗಿ ಬಾಂಧವ್ಯದ ಈ ಚಿತ್ರ ಬಾಕ್ಸಾಫೀಸಿನಲ್ಲಿ ಅಭೂತಪೂರ್ವ ಯಶಸ್ಸು ಕಂಡಿತು.
ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಸಂಯೋಜನೆಯಿದೆ.