ತಾರಿಣಿ ಸಿನಿಮಾವನ್ನು
ಸಿದ್ದು ಪೂರ್ಣಚಂದ್ರ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ
ಮಮತಾ ರಾಹುತ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ರೋಹಿತ್ ಆರ್ ರಂಗಸ್ವಾಮಿ, ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ಸುಬ್ಬಲಕ್ಷ್ಮೀ ಉಪಧ್ಯಾಯ, ಬೇಬಿ ನಿಶಿತಾ ಮುಂತಾದವರು ನಟಿಸಿದ್ದಾರೆ. ಅನಂತ್ ಆರ್ಯನ್ ಸಂಗೀತ ಹಾಗೂ ರಾಜು ಹೆಮ್ಮಿಗೆಪುರ ಛಾಯಾಗ್ರಹಣ ಚಿತ್ರಕ್ಕಿದೆ. ನಟಿ ಮಮತಾ ರಾಹುತ್ ಪತಿ
ಸುರೇಶ್ ಕೋಟ್ಯಾನ್ ಚಿತ್ರಾಪು ಅವರು ಶ್ರೀಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಕಥೆ: ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗು. ಈ ಕುರಿತು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತೆ. ಹೀಗಿದ್ದರೂ ಕೂಡ ಹೆಣ್ಣ ಭ್ರೂಣ ಹತ್ಯೆ ನಿರ್ನಾಮವಾಗಿಲ್ಲ. ತಾರಿಣಿ ಸಿನಿಮಾದಲ್ಲಿ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಸಂದೇಶ ಸಾರಲಾಗಿದೆ.
ಬಿಡುಗಡೆ:ತಾರಿಣಿ ಸಿನಿಮಾ ಮಾರ್ಚ್ 29ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.