ದ ರೂಲರ್ಸ್ ಸಿನಿಮಾವನ್ನು ಉದಯ್ ಭಾಸ್ಕರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಿಶಾಲ್ ಕುಮಾರ್ ಬಿಜಿ ನಾಯಕನಾಗಿ ಹಾಗೂ ರಿತು ಅನಘ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಕೆ.ಎಂ ಸಂದೇಶ್, ಪುನೀತ್ ರಾಜ್ ಮುಂತಾದವರು ತಾರಾಗಣದಲ್ಲಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಹಾಗೂ ಹೋರಾಟ ಮನೋಭಾವನೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.