ಮುಂಬೈನ ತಾಜ್ ಹೊಟೇಲ್ ಮತ್ತು ಬೆಂಗಳೂರಿನಲ್ಲಿ ನೆಡೆದ ಬಾಂಬ್ ಬ್ಲಾಸ್ಟ್ ಪ್ರಕರಣಗಳ ಪ್ರೇರಣೆಯಿಂದ ಪಿ.ಸಿ.ಶೇಖರ್ ನಿರ್ದೇಶಿಸಿದ ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.ಈ ಚಿತ್ರದ ಕಥೆಗೆ ಮಿಲಿಟರಿ ಅಧಿಕಾರಿಗಳು ಸಾಥ್ ನೀಡಿದ್ದಾರೆ.ಶೀರ್ಷಿಕೆ ಹೇಳುವಂತೆ ಇದು ಸಂಪೂರ್ಣವಾಗಿ ಟೆರರಿಸ್ಟ್ ಕಥೆ. ಮುಂಬೈ ಮತ್ತು ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರೇರಣೆಯಾಗಿ ತೆಗೆದುಕೊಂಡಿದ್ದಾರೆ ಹೊರತು ಅಲ್ಲಿನ ಕಥೆ ಬಳಸಿಕೊಂಡಿಲ್ಲ. ಟೆರರಿಸ್ಟ್ ಪ್ರಕ್ರಿಯೆಗಳು ಹೇಗೆ ಆಗುತ್ತೆ, ಅಮಾಯಕರನ್ನ ಹೇಗೆ ಬಲಿಪಶು ಮಾಡ್ತಾರೆ, ವಿದ್ಯಾವಂತರನ್ನ ಹೇಗೆ ಈ ಜಾಲಕ್ಕೆ ಸಿಲುಕಿಸಲಾಗುತ್ತೆ, ಅದನ್ನ ಭೇದಿಸಲು ಪೊಲೀಸರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನ ತುಂಬಾ ಇಂಟ್ರೆಸ್ಟಿಂಗ್ ಆಗಿ ತೋರಿಸಲಾಗಿದೆ. ಸಾಂಗ್ಸ್, ಡುಯೇಟ್, ಫೈಟ್, ಕಾಮಿಡಿ ಇದ್ಯಾವುದು ಚಿತ್ರಕ್ಕೆ ಅಡ್ಡಿಯಾಗಿಲ್ಲ. ಯಾಕಂದ್ರೆ, ಇದ್ಯಾವುದು ಈ ಕಥೆಗೆ ಬೇಕಾಗಿಲ್ಲ. ಅದನ್ನ ನಿರ್ದೇಶಕರು ಅರಿತು ಸಿನಿಮಾ ಮಾಡಿದ್ದಾರೆ.