ತೂತ್ ಕಾಸು ಸಿನಿಮಾವನ್ನು
ರವಿ ತೇಜಸ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ
ವರುಣ್ ದೇವಯ್ಯ ನಾಯಕನಾಗಿ ಹಾಗೂ
ಪ್ರೇರಣಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಶ್ರವಣ್ ಹಳ್ಳಿ, ವಿನೋದ್ ಆನಂದ್, ಪ್ರೀಶಾ ಪತ್ತೇಡ್, ರಾಕೇಶ್ ರಾವ್ ತಾರಾಗಣದಲ್ಲಿದ್ದಾರೆ. ಲೋಕಿ ತವಸ್ಯ ಸಂಗೀತ, ಗಣೇಶ್ ಕೆಳಮನೆ ಛಾಯಾಗ್ರಹಣ ಸಿನಿಮಾಗಿದೆ. ಕೆ ಚಿಕ್ಕೇಗೌಡ್ರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ: ತೂತ್ ಕಾಸು ಸಿನಿಮಾ 2024ರ ಮಾರ್ಚ್ 22ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.