ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 19ನೇ ಸಿನಿಮಾಗೆ 'ಟಾಕ್ಸಿಕ್' ಎಂದು ಹೆಸರಿಟಲಾಗಿದೆ. ಈ ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದು, ಕೆವಿನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಟೈಟಲ್: ಇಡೀ ದೇಶವೇ ಕಾಯುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾದ ಟೈಟಲ್ 2023ರ ಡಿಸೆಂಬರ್ 8ರಂದು ರಿವೀಲ್ ಆಯಿತು.
ಮೂಹೂರ್ತ ಸಮಾರಂಭ: ಟಾಕ್ಸಿಕ್ ಸಿನಿಮಾ ಮುಹೂರ್ತ ಸಮಾರಂಭ 2024ರ ಆಗಸ್ಟ್ 8ರಂದು ನೆರವೇರಿತು. ರಾಕಿಂಗ್ ಸ್ಟಾರ್ ಹುಟ್ಟಿದ್ದು 8ನೇ ತಾರೀಖು. ಹೀಗಾಗಿ, 8 ತಿಂಗಳ 8ರಂದು 'ಟಾಕ್ಸಿಕ್' ಚಿತ್ರಕ್ಕೆ ಪೂಜೆ ಮಾಡಿ ಚಾಲನೆ ಕೊಟ್ಟಿದ್ದಾರೆ. ಬೆಂಗಳುರಿನ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಚಿತ್ರೀಕರಣಕ್ಕಾಗಿ ಭಾರೀ ಸೆಟ್ ನಿರ್ಮಾಣವಾಗಿದೆ. ಅಲ್ಲೇ ಮೊದಲ ಹಂತದ ಚಿತ್ರೀಕರಣ ಆರಂಭವಾಗುವ ನಿರೀಕ್ಷೆಯಿದೆ. ಇನ್ನು ಚಿತ್ರದಲ್ಲಿ 60, 70ರ ದಶಕದ ಕಥೆ ಹೇಳಲಾಗುತ್ತಿದೆ.
ಬಿಡುಗಡೆ: ಟಾಕ್ಸಿಕ್ ಸಿನಿಮಾ 2026ರ ಮಾರ್ಚ್ 19ರಂದು ಬಿಡುಗಡೆಯಾಗಲಿದೆ..