ಶಿವರುದ್ರಯ್ಯನಿಗೆ (ರಾಘವೇಂದ್ರ ರಾಜಕುಮಾರ್) ಮಗಳು ನಮನಾ (ಅನುಪಮಾ ಪರಮೇಶ್ವರನ್) ಅಂದ್ರೆ ಪಂಚಪ್ರಾಣ. ನಮನಾ ಒಬ್ಬ ಖಡಕ್ ಪತ್ರಕರ್ತೆ. ಶಿವರುದ್ರಯ್ಯ ಪ್ರತಿದಿನ ರಾತ್ರಿ ಒಂದೇ ಕನಸು ಕಾಣುತ್ತಿರುತ್ತಾನೆ. ಆ ಕನಸಿನಲ್ಲಿ ತನ್ನ ಮಗಳು ನಮನಾ ಒಂದು ಆಕ್ಸಿಡೆಂಟ್ ನಿಂದ ಸಾಯುವುದನ್ನು ನೋಡುತ್ತಿರುತ್ತಾನೆ.ಇದರಿಂದ ಶಿವರುದ್ರಯ್ಯ ದಿನಗಳದಂತೆ ತೀವ್ರ ವ್ಯಾಕುಲಕ್ಕೆ ಒಳಗಾಗುತ್ತಾನೆ.
ಈ ಸಮಸ್ಯೆ ನಿವಾರಣೆಗಾಗಿ ಪ್ರಯತ್ನಪಟ್ಟರೂ ಈ ದುಸ್ವಪ್ನ ಬೆಳೆಯುತ್ತಾ ಹೋಗುತ್ತದೆ. ನಂತರ ಇದು ಯಾವ ಹಂತಕ್ಕೆ ಹೋಗುತ್ತದೆ ಅಂದರೆ, ಶಿವರುದ್ರಯ್ಯನಿಗೆ ಸ್ವಪ್ನಗಳು ಮತ್ತು ವಾಸ್ತವದ ಅಂತರವೇ ತಿಳಿಯದಾಗುತ್ತದೆ. ಈ ಹಾದಿಯಲ್ಲಿ ವಿಜಯನಗರ ಕಾಲದ ಒಂದು ಘಟನೆಯು ಬಿಚ್ಚಿಕೊಳ್ಳುತ್ತದೆ. ಅದಕ್ಕೂ ಈ ಘಟನೆಗಳಿಗೂ ಏನು ಸಂಬಂಧ..ಶಿವರುದ್ರಯ್ಯ ಈ ಸಮಸ್ಯೆಯಿಂದ ಹೇಗೆ ಹೊರಬರುತ್ತಾನೆ ಎನ್ನುವುದು ಚಿತ್ರದ ಕಥೆ.
ರಾಘವೇಂದ್ರ ರಾಜಕುಮಾರ್, ರೋಹಿತ್ ಮತ್ತು ಅನುಪಮಾ ಗೌಡ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ `ತ್ರಯಂಬಕಂ' ಎಂಬ ಚಿತ್ರವನ್ನು ದಯಾಳ್ ಪದ್ಮನಾಭನ್ ನಿರ್ದೇಶಿಸಿದ್ದಾರೆ.ಚಿತ್ರದ ಕಥೆ `ನವಪಾಷಾಣ ಲಿಂಗ'ದ ಸುತ್ತ ಸುತ್ತುತ್ತದೆ.
ನಿಗೂಡ ಕಥಾ ಹಂದರದ ಚಿತ್ರಗಳ ನಿರ್ದೇಶನದಲ್ಲಿ ಮುಂದಿರುವ ದಯಾಳ್ ಪದ್ಮನಾಭನ್ `ಆ ಕರಾಳ ರಾತ್ರಿ' ಚಿತ್ರದ ನಂತರ ಮತ್ತೊಂದು ಮಿಸ್ಟರಿ ಚಿತ್ರವನ್ನು ನಿರ್ದೇಶಿಸಿದ್ದಾರೆ.ಚಿತ್ರದ ಟ್ರೇಲರ್‌ನ್ನು ಪುನೀತ್ ರಾಜಕುಮಾರ್ ಫೆಬ್ರವರಿ 23, 2019 ರಂದು ಬಿಡುಗಡೆ ಮಾಡಿದರು. ಚಿತ್ರವನ್ನು ಫ್ಯೂಚರ್ ಎಂಟರಟೇನ್‌ಮೆಂಟ್ ಫಿಲ್ಮಂಸ್‌ನವರು ನಿರ್ಮಾಣ ಮಾಡಿದ್ದಾರೆ.