ಶಿವರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ಉಡುಂಬಾ ಚಿತ್ರದಲ್ಲಿ ನಾಯಕನಾಗಿ ಪವನ್ ಶೂರ್ಯ ಮತ್ತು ನಾಯಕಿಯಾಗಿ ಚೀರಶ್ರೀ ಆಂಚನ್ ಅಭಿನಯಿಸಿದ್ದಾರೆ. ಹನುಮಂತ ರಾವ್ ಮತ್ತು ವೆಂಕಟ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ವಿನೀತ್ ರಾಜ್ ಮೆನನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಮೀನು ಹಿಡಿಯುವ ಹುಡುಗ ಶಿವು ಪ್ರೀತಿಯ ಸಾಗರದಲ್ಲಿ ಬೀಳುತ್ತಾನೆ. ಲವ್ ಎಂದ ಮೇಲೆ ನೋವು ಇದ್ದದ್ದೆ. ಶಿವು ಪ್ರೀತಿ ಮಾಡಿದ ಹುಡುಗಿ ಗೀತಾ ಏಪ್ರಿಲ್ ಫೂಲ್ ಮಾಡುತ್ತಾಳೆ. ಇತ್ತ ಊರಿನ ಗೌಡನ ಮಗ ಕೂಡ ಅದೇ ಹುಡುಗಿ ಮೇಲೆ ಕಣ್ಣು ಹಾಕುತ್ತಾನೆ. ಹೀಗಿರುವ ಶಿವು ಜೀವನದಲ್ಲಿ ಒಂದು ಅವನ ಹಿಂದಿನ ಫ್ಲ್ಯಾಶ್ ಬ್ಯಾಕ್ ಒಂದು ತಿರುವು ನೀಡುತ್ತದೆ.