ಉಗ್ರವತಾರ ಸಿನಿಮಾವನ್ನು ಗುರುಮೂರ್ತಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸುಮನ್, ಅಜಯ್, ಪವಿತ್ರಾ ಲೋಕೇಶ್, ಕಾಕ್ರೋಷ್ ಸುಧಿ, ರೂಪ ರಾಯಪ್ಪ, ಲಕ್ಷ ಶೆಟ್ಟಿ ಮುಂತಾದವರು ತಾರಾಗಣದಲ್ಲಿದ್ದಾರೆ. ರಾಧಾಕೃಷ್ಣ ಬಸ್ರೂರು ಸಂಗೀತ, ವೀಣಾ ನಂದಕುಮಾರ್ ಛಾಯಗ್ರಹಣ ಹಾಗೂ ವೆಂಕಿ ಯುಡಿವಿ ಸಂಕಲನ ಚಿತ್ರಕ್ಕಿದೆ. ಎಸ್‌ಜಿ ಸತೀಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.