ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ವಿಜಯಶಾಂತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.ವಿನೋದ್ ರಾಜ್, ರವಿತೇಜಾ, ಕುಮಾರ ಗೋವಿಂದ್ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದರು.
ನವಪೀಳೀಗೆಯ ಯುವಕರನ್ನು ಹೇಗೆ ಬ್ರೇನ್ ವಾಷ್ ಮಾಡಿ ಉಗ್ರಗಾಮಿ ಚಟುವಟಿಕೆಗಳಲ್ಲಿ ಬಳಸಲಾಗುತ್ತದೆ ಎಂಬುದರ ಮೇಲೆ ಚಿತ್ರ ಬೆಳಕು ಚೆಲ್ಲುತ್ತದೆ. ಅಂಬರೀಶ್ ಮತ್ತು ವಿಜಯಶಾಂತಿ ಖಾಕಿಯಲ್ಲಿ ಮಿಂಚಿದರು.