'ವಿಐಪಿ' ಸಿನಿಮಾವನ್ನು ಬ್ರಹ್ಮ ಅವರು ನಿರ್ದೇಶನ ಮಾಡಿದ್ದಾರೆ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾವಾಗಿದ್ದು, ವಸಿಷ್ಠ ಸಿಂಹ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ 'ವಿಐಪಿ' ಅಭಿಮಾನಿಗಳು ವಸಿಷ್ಠ ಸಿಂಹಗೆ 'ರಾಯಲ್ ಸ್ಟಾರ್' ಎಂಬ ಬಿರುದು ನೀಡಿದ್ದಾರೆ. ಈ ಸಿನಿಮಾ ಮೂಲಕ ರಾಯಲ್ ಸ್ಟಾರ್ ವಸಿಷ್ಠ ಸಿಂಹ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರಕ್ಕೆ ಮೋಹನ್ ಕುಮಾರ್ 'ವಿಐಪಿ' ಕಥೆ ಬರೆದಿದ್ದಾರೆ. ರಾಜೀವ್ ಗಣೇಶನ್ ಚಿತ್ರಕಥೆ ಬರೆದು ಛಾಯಾಗ್ರಾಹಣವನ್ನೂ ಮಾಡುತ್ತಿದ್ದಾರೆ. ಹರ್ಷವರ್ಧನ್ ರಾಜ್ ಮ್ಯೂಸಿಕ್, ಸತೀಶ್ ಚಂದ್ರಯ್ಯ ಎಡಿಟಿಂಗ್ ಹಾಗೂ ಕೆಜಿಎಫ್ ಖ್ಯಾತಿಯ ವಿಕ್ರಮ್ ಮೋರ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಇದು ಕಲಾಸೃಷ್ಠಿ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೊದಲ ಚಿತ್ರ.