ತೆಲುಗು ನಿರ್ದೇಶಕ ನಾಗೇಶ್ ನಾರದಾಸಿ ನಿರ್ದೇಶಿಸಿರುವ ಸಾಹಸ ಪ್ರಧಾನ ಪ್ರೇಮ ಚಿತ್ರದಲ್ಲಿ ವಿದ್ಯಾಭರಣ್ ನಾಯಕನಾಗಿ ನಟಿಸಿದ್ದಾರೆ. ಡೈನಾಮಿಕ್ ಸ್ಟಾರ್ ದೇವಾರಾಜ್,ಜೈ ಜಗದೀಶ್, ವಿನಯ ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಕಥೆ
ವಿರಾಜ್ (ವಿದ್ಯಾಭರಣ್) ಮತ್ತು ನಂದಿನಿ (ಶಿರಿನ) ಇವರಿಬ್ಬರ ಪ್ರೇಮ ಮತ್ತು ಅದಕ್ಕೆ ಬರುವ ಅಡ್ಡಿ-ಆತಂಕಗಳನ್ನು ಈ ಜೋಡಿ ಎದುರಿಸುವ ಪರಿಯೇ ಚಿತ್ರದ ಕಥೆ. ಅಜ್ಜಿ ಮತ್ತು ತಾತನೊಂದಿಗೆ ವಾಸಿಸುವ ವಿರಾಜ್ ಯಾರಿಗೆ ಕಷ್ಟ ಬಂದರೂ ಸಹಾಯ ಮಾಡುವ ಉದಾರಿ. ಇದೇ ಪರೋಪಕಾರಿ ಗುಣವನ್ನು ಹೊಂದಿರುವ ನಂದಿನಿ ಮತ್ತು ವಿರಾಜ್ ನಡುವೆ ಪ್ರೇಮ ಅರುಳುತ್ತದೆ. ಎರಡು ಕಡೆಯಿಂದ ಇವರಿಬ್ಬರ ಮದುವೆಗೆ ಅಂಕಿತ ಬೀಳುತ್ತದೆ. ಆದರೆ ನಿಶ್ಚಿತಾರ್ಥ ಸಂದರ್ಭದಲ್ಲಿ ನಡೆಯುವ ಪ್ರಮಾದದಿಂದ ನಿಶ್ಚಿತಾರ್ಥವೇ ಮುರಿದು ಬೀಳುತ್ತದೆ. ನಂತರ ತಮ್ಮ ಬದುಕಿನಲ್ಲಿ ಮುಂದುವರೆಯುವ ಈ ಜೋಡಿ ಮತ್ತೇ ಒಂದಾಗುತ್ತಾ ? ಇಲ್ಲವಾ? ಎಂಬುದೇ ಚಿತ್ರದ ಕಥೆ.