ಶೀತಲ್ ಶೆಟ್ಟಿ ರಚಿಸಿ ನಿರ್ದೇಶನ ಮಾಡಿರುವ ವಿಂಡೋ ಸೀಟ್ ಚಿತ್ರದಲ್ಲಿ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದರೆ. ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಮಂಜುನಾಥ ಗೌಡ (ಜಾಕ್ ಮಂಜು) ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಯೋಗರಾಜ್ ಭಟ್ ಮತ್ತು ಕವಿರಾಜ್ ಸಾಹಿತ್ಯದಲ್ಲಿ ಮೂಡಿ ಬರುವ ಹಾಡುಗಳಿಗೆ ಅರ್ಜುನ ಜನ್ಯ ಸಂಗೀತ ನೀಡಿದ್ದಾರೆ.
ಕಥೆ
ರೋಮ್ಯಾಂಟಿಕ್ ರಘು ಒಂದು ನಿರ್ದಿಷ್ಟ ಕಾರಣಕ್ಕಾಗಿ ತಾನು ಓಡಾಡುವ ರೈಲಿನಲ್ಲಿ ವಿಂಡೋ ಸೀಟ್ ನಲ್ಲಿ ಕುಳಿತುಕೊಳ್ಳುವುದು ಅಂದರೆ ಇಷ್ಟ. ಈ ವಿಂಡೋ ಸೀಟ್ ನ ಪ್ರಯಾಣ ರಘು ಬಾಳಿನಲ್ಲಿ ಪ್ರೀತಿ ಮತ್ತು ನೋವು ತಂದು ಅವನನ್ನು ಭಯಂಕರ ರಹಸ್ಯಗಳತ್ತ ಕರೆದೊಯ್ಯುತ್ತದೆ.
ಬೆಳವಣಿಗೆ ಮತ್ತು ಬಿಡುಗಡೆ
ಚಿತ್ರದ ಮೊದಲ ಲುಕ್ ಟೀಸರ್ ಸೆಪ್ಟೆಂಬರ್ 24, 2020 ರಂದು ಬಿಡುಗಡೆಯಾಯಿತು. ಈ ಚಿತ್ರ ಜುಲೈ 1, 2022 ರಂದು ಬಿಡುಗಡೆಯಾಗಿದೆ.