ಯುವರತ್ನ ಕಥೆ

  ರಾಜಕುಮಾರ ಚಿತ್ರದ ನಂತರ ಮತ್ತೊಮ್ಮೆ ಹಿಟ್ ಕಾಂಬಿನೇಶನ್ ಪುನೀತ್ ರಾಜಕುಮಾರ್, ಸಂತೋಷ್ ಆನಂದರಾಮ್ ಮತ್ತು ವಿಜಯ ಕಿರಗಂದೂರು ಒಂದುಗೂಡಿದ್ದು `ಅಭಿ' ಚಿತ್ರದ ನಂತರ ಪುನೀತ್ ಈ ಚಿತ್ರದಲ್ಲಿ ಕಾಲೇಜು ಯುವಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಚಿತ್ರದಲ್ಲಿ ನಾಯಕಿಯಾಗಿ ಸಯ್ಯೇಶಾ ಸೈಗಲ್ ನಟಿಸಿದ್ದರೆ, ಖಳನಾಯಕರ ಪಾತ್ರದಲ್ಲಿ ಡಾಲಿ ಧನಂಜಯ, ವಸಿಷ್ಠ ಸಿಂಹ,ಜಾನ್ ಕೊಕ್ಕೆನ್ ಮತ್ತು ಅರುಣಗೌಡ ನಟಿಸಲಿದ್ದಾರೆ.ಈ ಚಿತ್ರದಲ್ಲಿ ಧೂದ್ ಪೇಡಾ ದಿಗಂತ್ ಬೆಂಗಳೂರಿನ ಜಿಲ್ಲಾಧಿಕಾರಿ ಪಾತ್ರ ಮಾಡಲಿದ್ದಾರೆ. ದಸರಾಗೆ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಯುವರತ್ನ ಚಿತ್ರದ ಎಲ್ಲಾ ಕಲಾವಿದರು

  ಯುವರತ್ನ ಸಿನಿಮಾದಲ್ಲಿ ಶಿಕ್ಷಣ ಮಾಫಿಯಾದ ಬಗ್ಗೆ ಹೇಳಲಾಗಿದೆಯಂತೆ. ಇಂದಿನ ಶಿಕ್ಷಣ ಪದ್ದತಿ ಹೇಗೆ ಹದಕೆಡುತ್ತಿದೆ. ಶಿಕ್ಷಣ ವ್ಯವಸ್ಥೆ ದೊಡ್ಡ ದೊಡ್ಡವರ ಬಳಿ ಸಿಲುಕಿಕೊಂಡು ಹೇಗೆ ಹಾಳಾಗುತ್ತಿದೆ, ಉನ್ನತ ಶಿಕ್ಷಣ ಸಾಮಾನ್ಯ ಜನರಿಗೆ ಕೈಗೆಟುಕದ ಸ್ಥಿತಿಯಲ್ಲಿದೆ. ಇದರ ವಿರುದ್ಧ ಚಿತ್ರದ ನಾಯಕ ಅಂದ್ರೆ ಪವರ್ ಸ್ಟಾರ್ ಹೋರಾಡುವ ಕಥೆ ಯುವರತ್ನ ಚಿತ್ರದಲ್ಲಿ ಇದೆಯಂತೆ.

  ಚಿತ್ರವಿಶೇಷ
  1.ನವೆಂಬರ್ 1 ರಂದು ಪನೀತ್ ಅಭಿಮಾನಿಯೊಬ್ಬರಿಂದ ಚಿತ್ರದ ಟೈಟಲ್ ಬಿಡುಗಡೆಯಾಯಿತು.ಇದು ಪುನೀತ್ ಅಭಿನಯದ 29 ನೇ ಚಿತ್ರ. ಚಿತ್ರದ ಟೈಟಲ್‌ನ್ನು ಬೆಂಗಳೂರಿನ ಕಾವೇರಿ ಮಂದಿರದಲ್ಲಿ ಬಿಡುಗಡೆ ಮಾಡಲಾಯಿತು.

  2.ಚಿತ್ರದ ಮುಹೂರ್ತ ಡಿಸೆಂಬರ್ 12,2018 ರಂದು ಬೆಂಗಳೂರಿನ ಶ್ರೀ ಪಂಚಮುಖಿ ಗಣಪತಿ ಸನ್ನಿಧಿಯಲ್ಲಿ ನೇರವೇರಿತು.

  3.ಅಭಿ ಚಿತ್ರವಾದ 16 ವರ್ಷಗಳ ನಂತರ ಮತ್ತೆ ಪುನೀತ್ ಈ ಚಿತ್ರದಲ್ಲಿ ಕಾಲೇಜು ವಿಧ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  4.ಚಿತ್ರದ ಶೂಟಿಂಗ್ ಫೆಬ್ರವರಿ 14,2019 ರಂದು ಆರಂಭವಾಯಿತು.

  5.ಫೆಬ್ರವರಿ 19 ರಂದು ಚಿತ್ರದ ಮೊದಲ ಶೂಟಿಂಗ್ ಮುಕ್ತಾಯವಾಯಿತು. ಕರ್ನಾಟಕದ ಧಾರವಾಡದಲ್ಲಿ ಕೆಲಭಾಗಗಳನ್ನು ಚಿತ್ರಿಸಲಾಯಿತು.ಒಟ್ಟಿನಲ್ಲಿ ಹತ್ತು ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

  5. ಕಾಲೇಜು ದೃಶ್ಯದ ಚಿತ್ರೀಕರಣಕ್ಕಾಗಿ ಸಾಕಷ್ಟು ಜನರನ್ನು ಅಡಿಷನ್ ಮಾಡಿ 400 ಜನರನ್ನು ಆಯ್ಕೆ ಮಾಡಿಕೊಂಡಿತು.

  6.ರಾಧಿಕಾ ಶರತಕುಮಾರ್  ಈ ಚಿತ್ರದ ಮೂಲಕ ಹಲವು ವರ್ಷಗಳ ನಂತರ  ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಮೊದಲು 90 ರ ದಶಕದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಜೊತೆ ನಾಯಕಿಯಾಗಿ ಎರಡು ಚಿತ್ರಗಳಲ್ಲಿ ನಟಿಸಿದ್ದರು.

  7.  ದಸರಾಗೆ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.

   

  **Note:Hey! Would you like to share the story of the movie ಯುವರತ್ನ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X