X
ಯುವರತ್ನ

ಯುವರತ್ನ

Family | 01 Apr 2021 | U/A | 161 Mins
Kannada

2.5 /5 Users

3.5 /5 Filmibeat

ಯುವರತ್ನ ಕಥೆ

ರಾಜಕುಮಾರ ಚಿತ್ರದ ನಂತರ ಮತ್ತೊಮ್ಮೆ ಹಿಟ್ ಕಾಂಬಿನೇಶನ್ ಪುನೀತ್ ರಾಜಕುಮಾರ್, ಸಂತೋಷ್ ಆನಂದರಾಮ್ ಮತ್ತು ವಿಜಯ ಕಿರಗಂದೂರು ಒಂದುಗೂಡಿದ್ದು `ಅಭಿ' ಚಿತ್ರದ ನಂತರ ಪುನೀತ್ ಈ ಚಿತ್ರದಲ್ಲಿ ಕಾಲೇಜು ಯುವಕನಾಗಿ  ಕಾಣಿಸಿಕೊಂಡಿದ್ದಾರೆ. .ಚಿತ್ರದಲ್ಲಿ ನಾಯಕಿಯಾಗಿ ಸಯ್ಯೇಶಾ ಸೈಗಲ್ ನಟಿಸಿದ್ದರೆ, ಖಳನಾಯಕರ ಪಾತ್ರದಲ್ಲಿ ಡಾಲಿ ಧನಂಜಯ, ವಸಿಷ್ಠ ಸಿಂಹ,ಜಾನ್ ಕೊಕ್ಕೆನ್ ಮತ್ತು ಅರುಣಗೌಡ ನಟಿಸಿದ್ದಾರೆ.ಈ ಚಿತ್ರದಲ್ಲಿ ಧೂದ್ ಪೇಡಾ ದಿಗಂತ್ ಬೆಂಗಳೂರಿನ ಜಿಲ್ಲಾಧಿಕಾರಿ  ಪಾತ್ರದಲ್ಲಿದ್ದಾರೆ. .  ಯುವರತ್ನ ಚಿತ್ರದ ಎಲ್ಲಾ ಕಲಾವಿದರು ಕಥೆ:  ಸರ್ಕಾರಿ ಅನುದಾನಿತ ಕಾಲೇಜು ಆರ್.ಕೆ.ವಿಶ್ವವಿದ್ಯಾನಿಲಯ ತನ್ನ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುತ್ತದೆ. ಆದರೆ ಕೆಲ ಘಟನೆಗಳಿಂದ ಕಾಲೇಜನ್ನು ಅನಿರ್ದಿಷ್ಟ ಅವಧಿಗೆ ಮುಚ್ಚಲಾಗುತ್ತದೆ. ಕಾಲೇಜು ರೀ ಓಪನ್ ಗಾಗಿ ನೆಡೆಯುವ ಹೋರಾಟಗಳು ಮತ್ತು ಕಾಲೇಜು ಮತ್ತೆ ಆರಂಭವಾಗುತ್ತದಾ ಎಂಬುದು ಚಿತ್ರದ ಕಥೆ.  ಯುವರತ್ನ ಸಿನಿಮಾದಲ್ಲಿ ಶಿಕ್ಷಣ ಮಾಫಿಯಾದ ಬಗ್ಗೆ ಹೇಳಲಾಗಿದೆ. ಇಂದಿನ ಶಿಕ್ಷಣ ಪದ್ದತಿ ಹೇಗೆ ಹದಗೆಡುತ್ತಿದೆ. ಶಿಕ್ಷಣ ವ್ಯವಸ್ಥೆ ದೊಡ್ಡ ದೊಡ್ಡವರ ಬಳಿ ಸಿಲುಕಿಕೊಂಡು ಹೇಗೆ ಹಾಳಾಗುತ್ತಿದೆ, ಉನ್ನತ ಶಿಕ್ಷಣ ಸಾಮಾನ್ಯ ಜನರಿಗೆ ಕೈಗೆಟುಕದ ಸ್ಥಿತಿಯಲ್ಲಿದೆ. ಇದರ ವಿರುದ್ಧ ಚಿತ್ರದ ನಾಯಕ ಹೋರಾಡುವ ಕಥೆ ಯುವರತ್ನ ಚಿತ್ರದಲ್ಲಿದೆ. ಸರ್ಕಾರಿ ಶಾಲೆ-ಕಾಲೇಜುಗಳನ್ನು ಉಳಿಸಬೇಕು ಎಂದು ಹೋರಾಡುವ ಪ್ರಾಂಶುಪಾಲ, ಅವರಿಗೆ ಸಾಥ್ ನೀಡುವ ಹಳೆಯ ವಿದ್ಯಾರ್ಥಿಗಳು. ಪ್ರಾಂಶುಪಾಲನ ಹೋರಾಟವನ್ನು ಹತ್ತಿಕ್ಕಬ್ಬೇಕು, ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಹಾಳು ಮಾಡಿ ಕಾಲೇಜು ಮುಚ್ಚಿಸಬೇಕು ಎಂದು ಟೊಂಕಕಟ್ಟಿ ನಿಂತಿರುವ ಖಳ ಪಡೆ. ಸರ್ಕಾರಿ ಕಾಲೇಜು ಉಳಿಸಲು ತನ್ನ ಶಕ್ತಿ-ಯುಕ್ತಿ ಎಲ್ಲವನ್ನೂ ಬಳಸಿ ಹೋರಾಡುವ ನಾಯಕ. ಇವು ಕತೆಯ ಮುಖ್ಯ ಮೂರು ಬಿಂದುಗಳು. ಚಿತ್ರವಿಶೇಷ 1.ನವೆಂಬರ್ 1 ರಂದು ಪನೀತ್ ಅಭಿಮಾನಿಯೊಬ್ಬರಿಂದ ಚಿತ್ರದ ಟೈಟಲ್ ಬಿಡುಗಡೆಯಾಯಿತು.ಇದು ಪುನೀತ್ ಅಭಿನಯದ 29 ನೇ ಚಿತ್ರ. ಚಿತ್ರದ ಟೈಟಲ್‌ನ್ನು ಬೆಂಗಳೂರಿನ ಕಾವೇರಿ ಮಂದಿರದಲ್ಲಿ ಬಿಡುಗಡೆ ಮಾಡಲಾಯಿತು. 2.ಚಿತ್ರದ ಮುಹೂರ್ತ ಡಿಸೆಂಬರ್ 12,2018 ರಂದು ಬೆಂಗಳೂರಿನ ಶ್ರೀ ಪಂಚಮುಖಿ ಗಣಪತಿ ಸನ್ನಿಧಿಯಲ್ಲಿ ನೇರವೇರಿತು. 3.ಅಭಿ ಚಿತ್ರವಾದ 16 ವರ್ಷಗಳ ನಂತರ ಮತ್ತೆ ಪುನೀತ್ ಈ ಚಿತ್ರದಲ್ಲಿ ಕಾಲೇಜು ವಿಧ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 4.ಚಿತ್ರದ ಶೂಟಿಂಗ್ ಫೆಬ್ರವರಿ 14,2019 ರಂದು ಆರಂಭವಾಯಿತು. 5.ಫೆಬ್ರವರಿ 19 ರಂದು ಚಿತ್ರದ ಮೊದಲ ಶೂಟಿಂಗ್ ಮುಕ್ತಾಯವಾಯಿತು. ಕರ್ನಾಟಕದ ಧಾರವಾಡದಲ್ಲಿ ಕೆಲಭಾಗಗಳನ್ನು ಚಿತ್ರಿಸಲಾಯಿತು.ಒಟ್ಟಿನಲ್ಲಿ ಹತ್ತು ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. 5. ಕಾಲೇಜು ದೃಶ್ಯದ ಚಿತ್ರೀಕರಣಕ್ಕಾಗಿ ಸಾಕಷ್ಟು ಜನರನ್ನು ಅಡಿಷನ್ ಮಾಡಿ 400 ಜನರನ್ನು ಆಯ್ಕೆ ಮಾಡಿಕೊಂಡಿತು. 6.ರಾಧಿಕಾ ಶರತಕುಮಾರ್  ಈ ಚಿತ್ರದ ಮೂಲಕ ಹಲವು ವರ್ಷಗಳ ನಂತರ  ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಮೊದಲು 90 ರ ದಶಕದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಜೊತೆ ನಾಯಕಿಯಾಗಿ ಎರಡು ಚಿತ್ರಗಳಲ್ಲಿ ನಟಿಸಿದ್ದರು.  
Read More

ಯುವರತ್ನ ಕಲಾವಿದರು ಮತ್ತು ಸಿಬ್ಬಂದಿ

ಯುವರತ್ನ ಕ್ರೂ ಮಾಹಿತಿ

ನಿರ್ದೇಶಕ ಸಂತೋಷ್ ಆನಂದರಾಮ್
ಕಥೆ ಸಂತೋಷ್ ಆನಂದರಾಮ್
ಸಿನಿಮಾಟೋಗ್ರಫಿ ವೆಂಕಟೇಶ್ ಅಂಗುರಾಜ್
ಸಂಪಾದಕ NA
ಸಂಗೀತ ಥಮನ್ ಎಸ್
ನಿರ್ಮಾಪಕ ವಿಜಯ್ ಕಿರಗಂದುರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಯುವರತ್ನ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮಿಬೀಟ್
ಒಟ್ಟಾರೆಯಾಗಿ ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಸಿನಿಮಾದ ಮೂಲಕ ಸಾಮಾಜಿಕ ಸಂದೇಶವನ್ನು ನೀಡುವ ಭಾರವನ್ನು ಹೆಗಲ ಮೇಲೆ ಹೊತ್ತು ಸಂದೇಶವನ್ನೂ ಪೂರ್ಣ ತಲುಪಿಸಲಾಗದೆ 'ಸಂದೇಶಭರಿತ ಕಮರ್ಶಿಯಲ್ ಸಿನಿಮಾ' ಮಾಡುವ ಒತ್ತಡಕ್ಕೆ ಸಿಕ್ಕು ಹೆಣಗಾಡಿದ್ದಾರೆ ಎನ್ನಿಸುತ್ತದೆ. ಪುನೀತ್ ಅವರ 'ಸ್ಟಾರ್‌ ಪ್ರಭೆ' ಸಿನಿಮಾದ ಓರೆ-ಕೋರೆಗಳನ್ನು ಮರೆಮಾಚಲಿದೆ.

ಯುವರತ್ನ ಟ್ರೇಲರ್

Video Thumbnail

ಯುವರತ್ನ ಪಾಟ್ಲುಗಳು

ಯುವರತ್ನ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಯುವರತ್ನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+