For Quick Alerts
  ALLOW NOTIFICATIONS  
  For Daily Alerts

  ಬೋಲ್ಡ್ ಆಗಿ ನಟಿಸಲ್ಲ ಅಂತ ನಾನು ಸ್ಟೇಟ್‌ಮೆಂಟ್ ಕೊಟ್ಟಿದ್ದೆ: ಜನ ಒಮ್ಮೆ ಹೇಳಿದ ಮೇಲೆ ಮುಗೀತು!

  |

  ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ರಚಿತಾ ರಾಮ್. ಸೂಪರ್ ಸ್ಟಾರ್‌ಗಳ ಜೊತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಚಾಲೆಂಜಿಂಗ್‌ ರೋಲ್‌ನಲ್ಲೂ ನಟಿಸಿ ಭೇಷ್ ಅನ್ನಿಸಿಕೊಂಡಿದ್ದಾರೆ. "ಇನ್ನು ಮುಂದೆ ನಾನು ಬೋಲ್ಡ್ ಆಗಿ ನಟಿಸಲ್ಲ" ಅಂತ ರಚ್ಚು ಹೇಳಿಕೆ ನೀಡಿದ್ದರು. ಹಾಗಾಗಿ 'ಮಾನ್ಸೂನ್ ರಾಗ' ಚಿತ್ರದಲ್ಲಿ ಅವರು ಹೇಗೆ ಕಾಣಿಸಿಕೊಂಡಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

  ಇದೇ ಮೊದಲ ಬಾರಿಗೆ ಡಾಲಿ ಧನಂಜಯ್‌ ಹಾಗೂ ರಚಿತಾ ಒಟ್ಟಿಗೆ ನಟಿಸಿದ್ದಾರೆ. ಖಡಕ್‌ ರೋಲ್‌ಗಳಲ್ಲಿ ಅಬ್ಬರಿಸುತ್ತಿರುವ ಡಾಲಿ ಈ ಚಿತ್ರದಲ್ಲಿ ಅದಕ್ಕೆ ತದ್ವರುದ್ಧ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಅಂಡರ್‌ವರ್ಲ್ಡ್ ವ್ಯಕ್ತಿ ವೇಶ್ಯೆಯೊಬ್ಬಳನ್ನು ಪ್ರೀತಿಸುವ ಕಥೆ ಇದೆ ಅನ್ನುವುದು ಸ್ಯಾಂಪಲ್‌ಗಳಲ್ಲಿ ಗೊತ್ತಾಗ್ತಿದೆ. ಪ್ರತಿ ದೃಶ್ಯವನ್ನು ಕಣ್ಣಿಗೆ ಹಬ್ಬ ಎನ್ನುವಂತೆ ಕಟ್ಟಿಕೊಟ್ಟಿದ್ದಾರೆ. ವೇಶ್ಯೆಯ ಪಾತ್ರದಲ್ಲಿ ರಚಿತಾ ರಾಮ್ ಬಹಳ ಬ್ಯೂಟಿಫುಲ್ ಆಗಿ ಮಿಂಚಿದ್ದಾರೆ.

  ನಾನು ಸ್ವಲ್ಪ ಸ್ಕಿನ್ ಶೋ ಮಾಡಿದ್ರೂ ಜನ ಒಪ್ಪಲ್ಲ: ಇಲ್ಲಿ ಸೆಕ್ಸ್ ವರ್ಕರ್ ಹಾಟ್ & ಬೋಲ್ಡ್ ಅಲ್ಲ, ಬ್ಯೂಟಿಫುಲ್!ನಾನು ಸ್ವಲ್ಪ ಸ್ಕಿನ್ ಶೋ ಮಾಡಿದ್ರೂ ಜನ ಒಪ್ಪಲ್ಲ: ಇಲ್ಲಿ ಸೆಕ್ಸ್ ವರ್ಕರ್ ಹಾಟ್ & ಬೋಲ್ಡ್ ಅಲ್ಲ, ಬ್ಯೂಟಿಫುಲ್!

  ಗುರು ಕಶ್ಯಪ್ ಸಂಭಾಷಣೆ, ನವೀನ್ . ಜಿ ಪೂಜಾರಿ ಛಾಯಾಗ್ರಹಣ 'ಮಾನ್ಸೂನ್ ರಾಗ' ಚಿತ್ರಕ್ಕಿದೆ. 'ಪುಷ್ಪಕ ವಿಮಾನ' ಸಿನಿಮಾ ನಿರ್ಮಿಸಿದ್ದ ವಿಖ್ಯಾತ್ ಈ ಚಿತ್ರಕ್ಕೂ ಬಂಡವಾಳ ಹಾಕಿದ್ದಾರೆ. ಈ ಚಿತ್ರದಲ್ಲಿ ತಮ್ಮ ಪಾತ್ರ "ಹಾಟ್ ಅಲ್ಲ, ಬೋಲ್ಡ್ ಅಲ್ಲ, ಬಹಳ ಬ್ಯೂಟಿಫುಲ್" ಎಂದು ಫಿಲ್ಮಿಬೀಟ್ ಜೊತೆ ನಟಿ ರಚಿತಾ ರಾಮ್ ಹಂಚಿಕೊಂಡಿದ್ದಾರೆ.

  ಬೋಲ್ಡ್ ಆಗಿ ನಟಿಸಲ್ಲ ಎನ್ನುವ ಸ್ಟೇಟ್‌ಮೆಂಟ್

  ಬೋಲ್ಡ್ ಆಗಿ ನಟಿಸಲ್ಲ ಎನ್ನುವ ಸ್ಟೇಟ್‌ಮೆಂಟ್

  "ನಾನು ಬೋಲ್ಡ್ ಆಗಿ ಕಾಣಿಸಿಕೊಳ್ಳಲ್ಲ ಅಂತ ಒಂದು ಸ್ಟೇಟ್‌ಮೆಂಟ್ ಕೊಟ್ಟಿದ್ದೆ. ಈ ಬಗ್ಗೆ ಸಂದರ್ಶನದಲ್ಲೂ ನನಗೆ ಪ್ರಶ್ನೆ ಎದುರಾಗಿತ್ತು. ನಾನು ಆ ರೀತಿ ಹೇಳಿದ ಮೇಲೂ ಒಂದೆರಡು ಸಿನಿಮಾಗಳಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೇನೆ. ಆದರೆ ಅಶ್ಲೀಲವಾಗಿ ಕಾಣಿಸಿಕೊಂಡಿಲ್ಲ. ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದೀನಿ. ಸೆಕ್ಸ್‌ ವರ್ಕರ್ ಅನ್ನುವುದು ಆಕೆಯ ವೃತ್ತಿ. ಆ ಪಾತ್ರಕ್ಕೆ ಹೇಗೆ ಬೇಕಾದರೂ ಸೀರೆ ಸುತ್ತಿಕೊಳ್ಳಬಹುದು. ಆದರೆ ಆಕೆ ಆ ತರ ಅಲ್ಲ. ಲಾಯರ್, ಡಾಕ್ಟರ್ ವೃತ್ತಿಗಳ ರೀತಿ ಅದು ಒಂದು ವೃತ್ತಿ. ಆದರೆ ಇಲ್ಲಿ ಅವಳು ಅಶ್ಲೀಲವಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ತುಂಬಾ ಮೆಚ್ಯೂರ್ಡ್ ಆಗಿ, ಗಂಭೀರವಾಗಿ ಇರುತ್ತಾಳೆ. ಮೈತುಂಬಾ ಸೀರೆ ಉಟ್ಟು, ಜಡೆ ಹಾಕಿಕೊಂಡಿರುವ ಹುಡುಗಿ. ಇದು ನನಗೆ ಬಹಳ ವಿಶೇಷ ಅನ್ನಿಸ್ತು. ಜನ ನನ್ ಪಾತ್ರ ಇಷ್ಟಪಡುತ್ತಾರೆ ಅನ್ನುವ ನಿರೀಕ್ಷೆ ಇದೆ."

  ಕೆಂಪು ಸೀರೆಯಲ್ಲಿ ಮದುಮಗಳಂತೆ ಮಿಂಚಿದ ನಟಿ ರಚಿತಾ ರಾಮ್!ಕೆಂಪು ಸೀರೆಯಲ್ಲಿ ಮದುಮಗಳಂತೆ ಮಿಂಚಿದ ನಟಿ ರಚಿತಾ ರಾಮ್!

  ನನಗೆ ಭಯ ಖಂಡಿತ ಇಲ್ಲ

  ನನಗೆ ಭಯ ಖಂಡಿತ ಇಲ್ಲ

  'ಮಾನ್ಸೂನ್ ರಾಗ' ಸಿನಿಮಾ ರಿಲೀಸ್ ಡೇಟ್ ಹತ್ತಿರ ಬರ್ತಿದೆ. ಈ ಬಗ್ಗೆ ಭಯ ಇದ್ಯಾ ಎನ್ನುವ ಪ್ರಶ್ನೆಗೆ "ಭಯ ಖಂಡಿತ ಇಲ್ಲ. ನಾಲ್ಕೈದು ವರ್ಷಗಳ ಹಿಂದೆ ಭಯ ಇತ್ತು. ಈಗ ಇಲ್ಲ. ಯಾಕೆಂದರೆ ನಾನು ಮಾಡಿರುವ ಪಾತ್ರದ ಬಗ್ಗೆ ನನಗೆ ತುಂಬಾ ಕಾನ್ಫಿಡೆನ್ಸ್ ಇದೆ. ತುಂಬಾ ಒಳ್ಳೆ ಪಾತ್ರ ಮಾಡಿದ್ದೀನಿ. ಯಾಕಂದರೆ ಅಷ್ಟು ಚೆನ್ನಾಗಿ ಪ್ರಸೆಂಟ್ ಮಾಡಿದ್ದೀವಿ ನಾವು. ಜನ ಒಮ್ಮೆ ಹೇಳಿದ ಮೇಲೆ ಮುಗೀತು. ಅದಕ್ಕೆ ವಿರುದ್ಧವಾಗಿ ನಾನು ಹೋಗುವುದಿಲ್ಲ. ಹಾಗಂತ ಬೋಲ್ಡ್ ಪಾತ್ರ ಮಾಡೋದೆ ಇಲ್ಲ ಅಂತ ಅಲ್ಲ. ಆದರೆ ಅದನ್ನು ಹೇಗೆ ಮಾಡಬೇಕೋ ಹಾಗೆ ಮಾಡಬೇಕು."

  ಬರೀ ಕಣ್ಣಿನಲ್ಲೇ ಹೆಚ್ಚು ಅಭಿನಯಿಸಿದ್ದೇವೆ

  ಬರೀ ಕಣ್ಣಿನಲ್ಲೇ ಹೆಚ್ಚು ಅಭಿನಯಿಸಿದ್ದೇವೆ

  "ಕೆಲವೊಂದು ಪಾತ್ರಗಳನ್ನು ಬಹಳ ನ್ಯಾಚುರಲ್‌ ಆಗಿ ಮಾಡಬೇಕು. 60-70 ದಶಕದ ಪಾತ್ರ ಅಂದರೆ ಆಕ್ಷನ್ ಕಮ್ಮಿ, ಭಾವನೆಗಳನ್ನು ವ್ಯಕ್ತಪಡಿಸೋದು ಜಾಸ್ತಿ. ಬರೀ ಕಣ್ಣಲ್ಲೇ ಎಲ್ಲವನ್ನು ದಾಟಿಸಬೇಕು. ಈ ಸಿನಿಮಾದಲ್ಲಿ ಅದನ್ನೇ ಮಾಡಿದ್ದೀವಿ. ಅಂದರೆ ಈಗಿನ ಸಿನಿಮಾಗಳಲ್ಲಿ ಮಾಡುವಂತೆ ಜೋರು ಅಭಿನಯ ಇರಲ್ಲ. ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದು ಜಾಸ್ತಿ. ಟ್ರೈಲರ್‌ನಲ್ಲಿ ಧನಂಜಯ ಹಾಗೂ ನನ್ನನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ."

  ರವಿಮಾಮನೊಂದಿಗೆ ರಚಿತಾ ರಾಮ್ ಮಸ್ತ್ ಡ್ಯಾನ್ಸ್‌, ನೋಡುಗರು ಫಿದಾ!ರವಿಮಾಮನೊಂದಿಗೆ ರಚಿತಾ ರಾಮ್ ಮಸ್ತ್ ಡ್ಯಾನ್ಸ್‌, ನೋಡುಗರು ಫಿದಾ!

  ನಾನು ಧನಂಜಯ್‌ನ ಬಹಳ ರೇಗಿಸ್ತಿದ್ದೆ

  ನಾನು ಧನಂಜಯ್‌ನ ಬಹಳ ರೇಗಿಸ್ತಿದ್ದೆ

  ನಾನು ಧನಂಜಯಗೆ ಹೇಳುತ್ತಿರುತ್ತೀನಿ. ಮತ್ತೊಂದು ಸಿನಿಮಾ ಒಟ್ಟಿಗೆ ಮಾಡೋಣ ಅಂತ. ಟೀಸರ್, ಟ್ರೈಲರ್ ನೋಡಿ ನಮ್ಮ ಜೋಡಿಗೆ ಒಳ್ಳೆ ರೆಸ್ಪಾನ್ಸ್‌ ಸಿಕ್ತಿದೆ. ಇಬ್ಬರು ಒಟ್ಟಿಗೆ ಫ್ರೇಮ್‌ ಅಲ್ಲಿ ಇದ್ದಾಗ ಸೆಟ್‌ನಲ್ಲಿ ದೃಷ್ಟಿ ತೆಗೆದಿದ್ದಾರೆ. ಎಷ್ಟು ಚೆನ್ನಾಗಿ ಕಾಣಿಸ್ತಿದ್ದೀರಾ ಅಂತ. ನಾವು ಒಂದೇ ಮಾನಿಟರ್ ಮಾಡ್ತಿದ್ದದ್ದು. ನಿಜವಾಗಿ ಹೇಳ್ತೀನಿ. ಕಣ್ಣಲ್ಲಿ ಕಣ್ಣಿಟ್ಟು ನಟಿಸಿದ್ದೀವಿ. ನಾನು ಧನುಗೆ ಕೇಳ್ತಿದ್ದೆ, ನೀನು ಒಂದು ವೇಳೆ ಡಾಲಿ ಆಗಿ ಇದ್ದಿದ್ರೆ, ನಿನ್ನ ಪಕ್ಕ ಒಬ್ಬ ಸೆಕ್ಸ್ ವರ್ಕರ್ ಇದ್ದಿದ್ರೆ ಹೇಗಿರುತ್ತಿತ್ತು ಅಂತ. ಅಯ್ಯೋ ಅದು ಬೇರೆ ತರನೇ ಇರ್ತಿತಮ್ಮ, ಡಾಲಿ ದೊಡ್ಡ ರಾಕ್ಷಸ, ಅವನ ಸಹವಾಸ ಬೇಡ ಎನ್ನುತ್ತಿದ್ದರು. ನಾನು ಈ ವಿಚಾರವಾಗಿ ತುಂಬಾ ರೇಗಿಸುತ್ತಿದ್ದೆ. ಧನಂಜಯ್ ಜೊತೆ ಕೆಲಸ ಮಾಡಿದ್ದು ಬಹಳ ಖುಷಿ ಇದೆ. ಬಹಳ ಅದ್ಭುತ ಕಲಾವಿದ. ಎಲ್ಲಕ್ಕಿಂತ ಮುಖ್ಯವಾಗಿ ತುಂಬಾ ಒಳ್ಳೆಯ ವ್ಯಕ್ತಿ." ಎಂದು ನಟಿ ರಚಿತಾ ರಾಮ್ ವಿವರಿಸಿದ್ದಾರೆ. ಶುಕ್ರವಾರ 'ಮಾನ್ಸೂನ್ ರಾಗ' ಸಿನಿಮಾ ರಿಲೀಸ್ ಆಗ್ತಿದೆ.

  English summary
  Rachita Ram on doing bold characters on screen and the type of roles she looks forward to do.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X