For Quick Alerts
  ALLOW NOTIFICATIONS  
  For Daily Alerts

  KGF ಚಾಪ್ಟರ್‌ - 3ನಲ್ಲಿ ರೀನಾ ವಾಪಸ್ ಬರ್ತಾಳಾ? ಕೊನೆಗೂ ಪ್ರತಿಕ್ರಿಯೆ ನೀಡಿದ ಶ್ರೀನಿಧಿ ಶೆಟ್ಟಿ

  |

  ಪ್ರಶಾಂತ್ ನೀಲ್ ನಿರ್ದೇಶನದ KGF ಸರಣಿಯ 2 ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಚಾಪ್ಟರ್‌-2 ಕ್ಲೈಮ್ಯಾಕ್ಸ್‌ನಲ್ಲಿ ಚಮಕ್ ಕೊಟ್ಟಿದ್ದ ಟೀಂ ಚಾಪ್ಟರ್- 3 ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ. ಸರಣಿಯ ಮತ್ತೊಂದು ಸಿನಿಮಾ ಯಾವಾಗ ಬರುತ್ತೋ ಎಂದು ಸಿನಿರಸಿಕರು ಕಾಯುತ್ತಿದ್ದಾರೆ. ಮುಂದಿನ ಸೀಕ್ವೆಲ್‌ನಲ್ಲಿ ರಾಕಿ ಪತ್ನಿ ರೀನಾ ಪಾತ್ರ ಇರುತ್ತಾ? ಎನ್ನುವ ಪ್ರಶ್ನೆಗೆ ಶ್ರೀನಿಧಿ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

  ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ KGF ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಹಾಲಿವುಡ್ ಮಂದಿ ಕೂಡ ಇತ್ತ ತಿರುಗಿ ನೋಡುವಂತಾಗಿತ್ತು. ಫಸ್ಟ್ ಚಾಪ್ಟರ್ 250 ಕೋಟಿ ರೂ. ಬಾಚಿದ್ರೆ, ಸೆಕೆಂಡ್ ಚಾಪ್ಟರ್ 1200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿತ್ತು. ಹಾಗಾಗಿ ಚಾಪ್ಟರ್‌-3 ಬಗ್ಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಯಾವಾಗ ಮತ್ತೆ ನೀಲ್, ಯಶ್ ಒಂದಾಗ್ತಾರೆ ಎನ್ನುವುದು ಗೊತ್ತಿಲ್ಲ. ಆದರೆ ಅಭಿಮಾನಿಗಳು ತಮ್ಮದೇ ಕಲ್ಪನೆಯಲ್ಲಿ ಸಿನಿಮಾ ಕಥೆಯನ್ನು ಊಹಿಸಿಕೊಳ್ಳುತ್ತಿದ್ದಾರೆ. ಹಾಗಾದ್ರೆ, ಸಿನಿಮಾ ಕಥೆಯಲ್ಲಿ ರೀನಾ ಕೂಡ ಇರ್ತಾಳಾ ಎನ್ನುವುದು ಈಗ ಮಿಲಿಯನ್ ಡಾಲರ್ ಪ್ರಶ್ನೆ.

  ರಾಕಿ ಭಾಯ್ ಪ್ರಾಣ ಉಳಿಸ್ತಾನಾ 'ಸಲಾರ್'? ನೆಟ್ಟಿಗರೇ ಹೇಳಿದ ಕಥೆಯಲ್ಲಿ ಫುಲ್ ಥ್ರಿಲ್ಲಿಂಗ್!ರಾಕಿ ಭಾಯ್ ಪ್ರಾಣ ಉಳಿಸ್ತಾನಾ 'ಸಲಾರ್'? ನೆಟ್ಟಿಗರೇ ಹೇಳಿದ ಕಥೆಯಲ್ಲಿ ಫುಲ್ ಥ್ರಿಲ್ಲಿಂಗ್!

  ಇತ್ತೀಚೆಗೆ ಅಭಿಮಾನಿಯೊಬ್ಬರು KGF ಚಾಪ್ಟರ್‌ - 3 ಸಿನಿಮಾದಲ್ಲಿ ನೀವು ಇರ್ತೀರಾ? ನಾವು ಮತ್ತೆ ರೀನಾಳನ್ನು ನೋಡಬೇಕು ಕೇಳಿದ್ದಾರೆ. ಈ ಬಗ್ಗೆ ಬಹಳ ಉತ್ಸುಕರಾಗಿರುವ ನಟಿ ಶ್ರೀನಿಧಿ ಶೆಟ್ಟಿ "ನನಗೆ ಗೊತ್ತಿಲ್ಲ ಪ್ರಶಾಂತ್ ನೀಲ್‌ ಅವರನ್ನು ಕೇಳಬೇಕು" ಎಂದಿದ್ದಾರೆ.

   KGF- 3 ಚಿತ್ರದಲ್ಲಿ ರೀನಾ ವಾಪಸ್?

  KGF- 3 ಚಿತ್ರದಲ್ಲಿ ರೀನಾ ವಾಪಸ್?

  ಇತ್ತೀಚೆಗೆ ನಟಿ ಶ್ರೀನಿಧಿ ಶೆಟ್ಟಿ 'ಆಸ್ಕ್ ಮಿ ಎನಿಥಿಂಗ್' ಎಂದು ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಸಂಭಾಷಣೆ ನಡೆಸಿದ್ದಾರೆ. ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಇದೇ ವೇಳೆ ಒಬ್ಬರು ಮೆಸೇಜ್ ಮಾಡಿ ನಿಮ್ಮನ್ನು KGF- 3 ಚಿತ್ರದ ರೀನಾ ಪಾತ್ರದಲ್ಲಿ ನೋಡಬೇಕು ಸಾಧ್ಯಾನಾ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಶ್ರೀನಿಧಿ "ಹಃಹಃ ನನಗೆ ನಿಜಕ್ಕೂ ಉತ್ತರ ಗೊತ್ತಿಲ್ಲ. ನಾವು ಮುಖ್ಯವ್ಯಕ್ತಿಯನ್ನೇ ಕೇಳಬೇಕು. ಅಂದರೆ ಪ್ರಶಾಂತ್ ನೀಲ್ ಅವರನ್ನು ಕೇಳಿ ತಿಳ್ಕೋಬೇಕು" ಎಂದು ಪ್ರತಿಕ್ರಿಯಿಸಿದ್ದಾರೆ.

   ರೀನಾ ಆಗಿ ಶ್ರೀನಿಧಿ ಶೆಟ್ಟಿ ಮೋಡಿ

  ರೀನಾ ಆಗಿ ಶ್ರೀನಿಧಿ ಶೆಟ್ಟಿ ಮೋಡಿ

  KGF ಸರಣಿ ಸಿನಿಮಾಗಳನ್ನು ನೋಡಿದವರಿಗೆ ರೀನಾ ಪಾತ್ರದ ಬಗ್ಗೆ ಗೊತ್ತೇ ಇರುತ್ತದೆ. ಫಸ್ಟ್ ಚಾಪ್ಟರ್‌ನಲ್ಲಿ ಒಂದೆರಡು ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದ ಶ್ರೀನಿಧಿ ಶೆಟ್ಟಿ ಸೆಕೆಂಡ್ ಚಾಪ್ಟರ್‌ನಲ್ಲಿ ಬಹಳ ಹೊತ್ತು ತೆರೆಮೇಲೆ ಮಿಂದಿದ್ದರು. ತಾಯಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಹಠಕ್ಕೆ ಬಿದ್ದ ರಾಕಿಗೆ ತಾಯಿಯ ಅಗಲಿಕೆಯ ನಂತರ ಮತ್ತೊಬ್ಬ ತಾಯಿ ಆಗುವುದು ರೀನಾ. ಮೊದಲ ಪ್ರಯತ್ನ ಆದರೂ ಶ್ರೀನಿಧಿ ರೀನಾ ಪಾತ್ರಕ್ಕೆ ನ್ಯಾ ಒದಗಿಸಿದ್ದರು.

   KGF- 2ನಲ್ಲಿ ರೀನಾ ಪಾತ್ರ ಕೊನೆಯಾಗಿದೆ

  KGF- 2ನಲ್ಲಿ ರೀನಾ ಪಾತ್ರ ಕೊನೆಯಾಗಿದೆ

  ಮೊದಲ ಭಾಗದಲ್ಲಿ ರಾಕಿ ಎಂದರೆ ಕೆಂಡ ಕಾರುತ್ತಿದ್ದ ರೀನಾ, ನಿಧಾನವಾಗಿ ಆತನ ಒಳ್ಳೆ ಮನಸ್ಸಿಗೆ ಮಾರು ಹೋಗ್ತಾಳೆ. ಆತನನ್ನು ಪ್ರೀತಿಸಿ ಮದುವೆ ಕೂಡ ಆಗ್ತಾಳೆ. ಕ್ಲೈಮ್ಯಾಕ್ಸ್‌ ವೇಳೆಗೆ ರಾಕಿ ನಿನ್ನ ತಾಯಿ ಮತ್ತೆ ನನ್ನ ಹೊಟ್ಟೆಯಲ್ಲಿ ಮಗುವಾಗಿ ಹುಟ್ಟಿ ಬರ್ತಿದ್ದಾರೆ ಎಂದು ಹೇಳುವ ಸಮಯದಲ್ಲೇ ಎದುರಾಳಿಗಳ ಗುಂಡಿಗೆ ರೀನಾ ಬಲಿಯಾಗುತ್ತಾಳೆ. ಅಲ್ಲಿಗೆ ರೀನಾ ಪಾತ್ರ ಕೊನೆಯಾದಂತಾಗಿದೆ. ಹಾಗಾಗಿ ಒಂದು ವೇಳೆ ಮೂರನೇ ಭಾಗ ಸಿನಿಮಾ ಬಂದರೂ ರೀನಾ ಪಾತ್ರ ಇರುತ್ತಾ ಎನ್ನುವುದು ಅನುಮಾನ.

   ಮುಂದೆ ಯಾವ ಕಥೆ ಹೇಳ್ತಾರೆ ನೀಲ್?

  ಮುಂದೆ ಯಾವ ಕಥೆ ಹೇಳ್ತಾರೆ ನೀಲ್?

  ಚಾಪ್ಟರ್‌- 3 ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಥೆಯನ್ನು ಊಹಿಸುತ್ತಿದ್ದಾರೆ. ಎರಡನೇ ಭಾಗದಲ್ಲಿ 1978ರಿಂದ 80ರವರೆಗೆ ರಾಕಿ ಎಲ್ಲಿದ್ದ ಏನ್ ಮಾಡ್ತಿದ್ದ ಎನ್ನುವುದನ್ನು ತೋರಿಸಿಲ್ಲ. ಕಥೆಯನ್ನು ಮುಂದುವರೆಸಿದ್ದರೆ ಇದೇ ಕಥೆಯನ್ನು ಹೇಳುವು ಸಾಧ್ಯತೆ ಇದೆ ಎಂದು ಸಾಕಷ್ಟು ಜನ ಊಹಿಸುತ್ತಿದ್ದಾರೆ. ಕೆಲವರು ರಾಕಿ ಇನ್ನು ಸತ್ತಿಲ್ಲ. ಮತ್ತೆ ಎದ್ದು ಬರ್ತಾನೆ. ಭಾರತದಲ್ಲಿರುವ ಬಂಗಾರವನ್ನೆಲ್ಲಾ ಸಂಗ್ರಹಿಸಿದ ರಾಕಿ ಮುಂದೆ ಪ್ರಪಂಚದಲ್ಲಿರುವ ಬಂಗಾರವನ್ನು ದೋಚುತ್ತಾನೆ ಎಂದು ಕೆಲವರು ಹೇಳುತ್ತಾರೆ.

  English summary
  Actress Srinidhi shetty on her role in KGF chapter 3. Srinidhi Shetty, who played Rocky's love Reena also opened up about the third instalment of the series.
  Tuesday, October 11, 2022, 18:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X