»   » ತೆಲುಗು ಚಿತ್ರ ಪ್ರಚಾರ ಮಾಡಿದ 'ಬಿಗ್ ಬಾಸ್' ಆಶಿತಾ ವಿರುದ್ಧ ಮಹಾಸಮರ

ತೆಲುಗು ಚಿತ್ರ ಪ್ರಚಾರ ಮಾಡಿದ 'ಬಿಗ್ ಬಾಸ್' ಆಶಿತಾ ವಿರುದ್ಧ ಮಹಾಸಮರ

Posted By:
Subscribe to Filmibeat Kannada
ಆಶಿತಾ ಚಂದ್ರಪ್ಪಾಗೆ ಮಂಗಳಾರತಿ ಮಾಡಿದ ಕನ್ನಡಿಗರು | FIlmibeat Kannada

'ನೀಲಿ' ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ಆಶಿತಾ, ಬಿಗ್ ಬಾಸ್ ಕನ್ನಡ 5 ಕಾರ್ಯಕ್ರಮಕ್ಕೆ ಹೋಗಿ ಮತ್ತಷ್ಟು ಜನಪ್ರಿಯವಾಗಿದ್ದರು. ಬಿಗ್ ಮನೆಯಿಂದ ಹೊರಬಂದ ನಂತರ ಆಶಿತಾ, ಎಲ್ಲೋದ್ರು, ಏನ್ ಮಾಡ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ.

ಆದ್ರೀಗ, ಫೇಸ್ ಬುಕ್ ನಲ್ಲಿ ತೆಲುಗು ಚಿತ್ರದ ಪೋಸ್ಟರ್ ಹಾಕಿಕೊಳ್ಳುವ ಮೂಲಕ ಕನ್ನಡ ಸಿನಿಮಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆಶಿತಾ ಅವರ ಈ ಪೋಸ್ಟನ್ನ ಖಂಡಿಸಿ ನೆಟ್ಟಿಗರು ನಟಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ತದ ನಂತರ ಕಾಮೆಂಟ್ ಮಾಡೋರಿಗೆ ತಿರುಗೇಟು ನೀಡಿದ ಆಶಿತಾ, ತಮ್ಮ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ. ಹೊಸದೊಂದು ಪೋಸ್ಟ್ ಹಾಕುವ ಮೂಲಕ ಬೈಯುತ್ತಿರುವ ಮಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗಿದ್ರೆ, ಆಶಿತಾ ತಮ್ಮ ಫೇಸ್ ಬುಕ್ ನಲ್ಲಿ ಯಾವ ಚಿತ್ರದ ಪೋಸ್ಟರ್ ಹಾಕಿಕೊಂಡಿದ್ದರು. ನಂತರ ಸ್ಪಷ್ಟನೆ ಕೊಟ್ಟಿದ್ದೇನು ಎಂದು ತಿಳಿಯಲು ಮುಂದೆ ಓದಿ.....

ಪವನ್ ಕಲ್ಯಾಣ್ ಸಿನಿಮಾ

ತೆಲುಗು ನಟ ಪವನ್ ಕಲ್ಯಾಣ್ ಅಭಿನಯದ 'ಅಜ್ಞಾತವಾಸಿ' ಚಿತ್ರದ ಪೋಸ್ಟರ್ ಹಾಕಿರುವ ಆಶಿತಾ, ''ಸಿನಿಮಾ ನಾಳೆ ಬಿಡುಗಡೆಯಾಗ್ತಿದೆ. ಕಾಯುವುದಕ್ಕೆ ಆಗ್ತಿಲ್ಲ'' ಎಂದು ಸ್ಟೇಟಸ್ ಹಾಕಿದ್ದರು.

ರೊಚ್ಚಿಗೆದ್ದ ನೆಟ್ಟಿಗರು

ತೆಲುಗು ಚಿತ್ರದ ಬಗ್ಗೆ ಈ ರೀತಿ ಸ್ಟೇಟಸ್ ಹಾಕಿದ ಆಶಿತಾ ಅವರ ನಡೆಯನ್ನ ನೆಟ್ಟಿಗರು ವಿರೋಧಿಸಿರು. ಬಾಯಿಗೆ ಬಂದ ಹಾಗೆ ಬೈಯುವುದಕ್ಕೆ ಆರಂಭಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಕನ್ನಡದ ಚಿತ್ರಗಳು ಕಾಣಿಸಲಿಲ್ಲ

ಕನ್ನಡದಲ್ಲಿ 'ಟಗರು', 'ಕುರುಕ್ಷೇತ್ರ', 'ದಿ ವಿಲನ್' ಅಂತಹ ಚಿತ್ರಗಳು ಸಿದ್ದವಾಗುತ್ತಿದೆ. ಈ ಚಿತ್ರಗಳ ಬಗ್ಗೆ ಯಾವುದೇ ಪೋಸ್ಟ್ ಹಾಕಿಲ್ಲ. ಆದ್ರೆ, ಪರಭಾಷೆ ಚಿತ್ರಗಳಿಗೆ ಮಾತ್ರ ಇಷ್ಟೊಂದು ಪ್ರಾಮುಖ್ಯತೆ ಕೊಡ್ತಿರಾ ಎಂದು ಗರಂ ಆಗಿದ್ದಾರೆ. ಇತ್ತೀಚೆಗಷ್ಟೇ ಯಶ್ ಅಭಿನಯದ 'ಕೆ.ಜಿ.ಎಫ್' ಚಿತ್ರದ ಟೀಸರ್ ರಿಲೀಸ್ ಆಯ್ತು. ಆಗಲೂ ಕನ್ನಡ ಸಿನಿಮಾ ಕಾಣಿಸಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ತಿರುಗೇಟು ನೀಡಿದ ಆಶಿತಾ

ಆಶಿತಾ ಅವರ ಮೊದಲ ಪೋಸ್ಟ್ ಗೆ ಕಾಮೆಂಟ್ ಮಾಡಿದವರಿಗೆ ಹೊಸದೊಂದು ಪೋಸ್ಟ್ ಹಾಕಿ ತಿರುಗೇಟು ನೀಡಿದರು. ''ಸಿನಿಮಾಗೆ ಭಾಷೆಯ ಗಡಿಯಿಲ್ಲ. ನಾನು ಸಿನಿಮಾ ಬೇಕಾದರೂ ನೋಡ್ತಿನಿ. ಯಾವ ಸಿನಿಮಾದ ಬಗ್ಗೆಯಾದ್ರೂ ಪೋಸ್ಟ್ ಮಾಡ್ತಿನಿ. ಅದು ನನ್ನ ವೈಯಕ್ತಿಕ. ಒಂದು ಹೆಣ್ಣಿಗೆ ಹೇಗೆ ಗೌರವ ನೀಡಬೇಕು ಎನ್ನುವುದು ಗಮನವಿರಲಿ. ನನ್ನ ಕನ್ನಡ ಸಿನಿಮಾಗಳ ಬಗ್ಗೆ ಗೌರವ ನೀಡುವುದು ನನಗೆ ಗೊತ್ತಿದೆ. ಅದನ್ನ ಯಾರೂ ಹೇಳಬೇಕಿಲ್ಲ'' ಎಂದು ಎರಡನೇ ಪೋಸ್ಟ್ ನಲ್ಲಿ ಹೇಳಿದರು.

ಕನ್ನಡ ಸಿನಿಮಾಗೆ ನೀವೆಷ್ಟು ಕಾಮೆಂಟ್ ಮಾಡಿದ್ದೀರಾ?

'Rambo-2' ಚಿತ್ರದ ಹಾಡನ್ನ ಪೋಸ್ಟ್ ಮಾಡಿದ್ದೆ. ಆದ್ರೆ, ಅದಕ್ಕೆ ಕೆವಲ 7 ಕಾಮೆಂಟ್ ಮಾತ್ರ ಮಾಡಿದ್ದೀರಾ. ಅದೇ ಪವನ್ ಕಲ್ಯಾಣ್ ಸ್ಟೇಟಸ್ ಗೆ 57 ಕಾಮೆಂಟ್. ಇಲ್ಲಿ ಗೊತ್ತಾಗ್ತಿದೆ, ನೀವು ಕನ್ನಡ ಚಿತ್ರಗಳಿಗೆ ಕೊಡ್ತಿರೋ ಗೌರವ ಏನು ಎಂಬುದು. ಹಾಗೆ, ಬಿಗ್ ಬಾಸ್ ನಲ್ಲಿ ಪ್ರಸಾರವಾಗುವುದು 1 ಗಂಟೆ ಮಾತ್ರ. ಅದರಿಂದ ನಮ್ಮ ವ್ಯಕ್ತಿತ್ವವನ್ನ ಅಳೆಯುವುದು ಸರಿಯಲ್ಲ ಎಂದು ಹರಿಹಾಯ್ದಿದ್ದಾರೆ.

'ಚಕ್ರವರ್ತಿ' ವಿಡಿಯೋ ಶೇರ್

ಇಷ್ಟೆಲ್ಲಾ ಆದ್ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾ ಜನವರಿ 14 ರಂದು ಉದಯ ಟಿವಿಯಲ್ಲಿ ಪ್ರಸಾರವಾಗ್ತಿದೆ. ಈ ಪ್ರೋಮೋವನ್ನ ಆಶಿತಾ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಹೀಗಿದ್ದರೂ, ಕಾಮೆಂಟಿಗರು ಮಾತ್ರ ಆಶಿತಾ ಅವರಿಗೆ ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ.

English summary
Ashita Chandrappa who is a serial actress & also was Bigg Boss Kannada Season 5 contestant. After Ashita Chandrappa gets eliminated from Bigg House, she becomes active on Facebook which led her into trouble.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X