»   » ಹೊಸ ಚಿತ್ರಕ್ಕೆ ಸಹಿ ಹಾಕಿದ ಚಿಂಗಾರಿ ಬೆಡಗಿ ದೀಪಿಕಾ

ಹೊಸ ಚಿತ್ರಕ್ಕೆ ಸಹಿ ಹಾಕಿದ ಚಿಂಗಾರಿ ಬೆಡಗಿ ದೀಪಿಕಾ

Posted By:
Subscribe to Filmibeat Kannada

ಬಿಗ್‌ಬಾಸ್ ಶೋಗೆ ಹೋಗಲು ಚಿತ್ರವೊಂದನ್ನು ಕಳೆದುಕೊಂಡಿದ್ದ ದೀಪಿಕಾ ಕಾಮಯ್ಯ ಈ ವರ್ಷ ಬ್ಯುಸಿಯಾಗಲಿದ್ದಾರೆ. 'ಉಗ್ರಾಕ್ಷ' ಎಂಬ ಚಿತ್ರವನ್ನು ಕೆಲವು ದಿನಗಳ ಹಿಂದೆ ಒಪ್ಪಿಕೊಂಡಿದ್ದ ದೀಪಿಕಾ ಸದ್ದಿಲ್ಲದೇ 'ಸಖತ್ ಲವ್' ಎಂಬ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.

ದೀಪಿಕಾ ಕಾಮಯ್ಯ ನಾಯಕಿಯಾಗಿ ನಟಿಸುತ್ತಿರುವ ಹೊಸ ಚಿತ್ರದ ಹೆಸರು 'ಸಖತ್ ಲವ್'. ಸಂದೀಪ್ ಶೆಟ್ಟಿ ಎನ್ನುವವರು ಈ ಚಿತ್ರದ ನಿರ್ಮಾಪಕರು. ನಾಯಕ, ನಿರ್ದೇಶಕ, ತಂತ್ರಜ್ಞರು ಮುಂತಾದ ವಿವರಗಳು ಇನ್ನೂ ಲಭ್ಯವಾಗಿಲ್ಲ.

Deepika Kamaiah

ಮೊನ್ನೆಮೊನ್ನೆ ತಾನೇ 'ಉಗ್ರಾಕ್ಷ' ಎಂಬ ಚಿತ್ರದ ಫೋಟೋ ಶೂಟ್ ಮುಗಿಸಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ದೀಪಿಕಾ ಕಾಮಯ್ಯ, ಉಗ್ರಾಕ್ಷ ನಂತರ 'ಸಖತ್ ಲವ್' ತಂಡವನ್ನು ಸೇರಿಕೊಳ್ಳಲಿದ್ದಾರೆ. ಅಷ್ಟುಹೊತ್ತಿಗೆ ತಂಡದ ಸಂಪೂರ್ಣ ಮಾಹಿತಿಯೂ ಲಭ್ಯವಾಗಬಹುದು.

ದೀಪಿಕಾ ಅಭಿಯನದ 'ನೀನೇ ಬರಿ ನೀನೇ' ಚಿತ್ರ ಇನ್ನೂ ಬಿಡುಗಡೆಯಾಗಬೇಕಿದೆ. ಇದರ ಜೊತೆಗೆ 'ಉಗ್ರಾಕ್ಷ' ಮತ್ತು 'ಸಖತ್ ಲವ್' ಚಿತ್ರವನ್ನು ಅವರು ಒಪ್ಪಿಕೊಂಡಿದ್ದಾರೆ. ಆ ಮೂಲಕ 2015ರಲ್ಲಿ ತಾವು ಬ್ಯುಸಿ ಇರುತ್ತೇನೆ ಎಂದು ವರ್ಷದ ಆರಂಭದಲ್ಲಿಯೇ ದೀಪಿಕಾ ಹೇಳಿದ್ದಾರೆ.

ಅಂದಹಾಗೆ ದೀಪಿಕಾ ಕಾಮಯ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಮೊದಲು 'ಚಿಂಗಾರಿ' ಚಿತ್ರದಲ್ಲಿ ನಟಿಸಿದರು. ನಂತರ ಗಣೇಶ್ ಜೊತೆ 'ಆಟೋ ರಾಜ' ಚಿತ್ರದಲ್ಲಿ ನಟಿಸಿದರು. 'ಕೋಲಾರ' ಚಿತ್ರದ ಆಫರ್ ಅವರ ಕೈಗೆ ಬಂದಿತ್ತು. ಆದರೆ, ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಹೋಗಲು ಆ ಅವಕಾಶವನ್ನು ಕೈ ಚೆಲ್ಲಿದ್ದರು.

English summary
Kannada actress Deepika Kamaiah signed for new film 'Sakath Love'. Deepika now busy in 'Ugraksha' movie after that she will join Sakath Love team.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada