Don't Miss!
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'Everything Is Possible' ಅಂತಿದ್ದಾರೆ ದಿಯಾ ನಟಿ ಖುಷಿ ರವಿ!
ದಿಯಾ ಸಿನಿಮಾ ಅಂದಾಕ್ಷಣ ಮೊದಲು ನೆನಪಾಗೋದೇ ದಿಯಾ ಪಾತ್ರ. ದಿಯಾ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಮಡ ನಟಿ ಖುಷಿ ರವಿ ಈಗ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಿಯಾ ಸಿನಿಮಾದಿಂದ ಖ್ಯಾತಿ ಪಡೆದ ಖುಷಿ ರವಿ ಈಗ ಕಿರು ಚಿತ್ರದಲ್ಲೂ ನಟಿಸಿದ್ದಾರೆ. ಎಂ.ಕೆ ಮಠ ನಟನೆಯ 'ಎವೆರಿಥಿಂಗ್ ಈಸ್ ಪಾಸಿಬಲ್ ' ಎನ್ನುವ ಕಿರುಚಿತ್ರ ಮಾಡಿದ್ದಾರೆ.
ರಂಗಭೂಮಿ ಕಲಾವಿದರಾಗಿ, ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವದ ಜೊತೆಗೆ ದೇವರನಾಡಲ್ಲಿ ಎಂಬ ಸಿನಿಮಾದಲ್ಲಿಯೂ ನಟಿಸಿರುವ ಜೀವನದಿ ಸೀರಿಯಲ್ ನಟ ಇಕ್ಷ್ವಾಕು ರಾಮ್ ಸಾರಥ್ಯದಲ್ಲಿ ಮತ್ತೊಂದು ಕಿರುಚಿತ್ರ ಬಿಡುಗಡೆಯಾಗಿದೆ. ಈ ಹಿಂದೆ ರಹಸ್ತ ಎಂಬ ಕಿರುಚಿತ್ರ ಮಾಡಿದ್ದ ಇಕ್ಷ್ವಾಕು ರಾಮ್ ಈಗ 'ಎವೆರಿಥಿಂಗ್ ಈಸ್ ಪಾಸಿಬಲ್' ಎಂಬ ಕ್ಯಾಚಿ ಟೈಟಲ್ ನಡಿ ಸೈನ್ಸ್ ಫಿಕ್ಷನ್ ಕಿರುಚಿತ್ರ ಮಾಡಿದ್ದಾರೆ.
ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ಹಾಗೂ ಎಂಕೆ ಮಠ ನಟನೆಯ 'ಎವೆರಿಥಿಂಗ್ ಈಸ್ ಪಾಸಿಬಲ್' ಸೈನ್ಸ್ ಫಿಕ್ಷನ್ ಕಿರುಚಿತ್ರ. ಈ ರೀತಿಯ ಪ್ರಯೋಗ ಹೊಸದು ಎನಿಸುತ್ತದೆ. ಇನ್ನು ಕಲಾವಿದರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಈ ಕಿರುಚಿತ್ರದ ಲಾಂಚಿಂಗ್ ಕಾರ್ಯಕ್ರಮ ಕೂಡ ಜರುಗಿದೆ. ನಾಯಕಿ ಖುಷಿ ರವಿ ಮಾತಾನಾಡಿ, ಸೈನ್ಸ್ ಫಿಕ್ಷನ್ ಜಾನರ್ ಸಿನಿಮಾವಿದು. ಸೆಕೆಂಡ್ ಲಾಕ್ ಡೌನ್ ಟೈಮ್‌ನಲ್ಲಿ ಬಂದು ನಿರ್ದೇಶಕರು ಕಥೆ ಹೇಳಿದರು. ಇದೊಂದು ಶಾರ್ಟ್ ಮೂವೀ. ತುಂಬಾ ಅದ್ಭುತ ಕಾನ್ಸೆಪ್ಟ್ ಇದು. ಇವತ್ತಿನಿಂದ ನಮ್ಮ ಫ್ಲಿಕ್ಸ್ ಹಾಗೂ ಪ್ರೈಮ್ ವಿಡಿಯೋದಲ್ಲಿ ಶಾರ್ಟ್ ಮೂವೀ ಸ್ಟ್ರೀಮ್ ಆಗ್ತಿದೆ. ಪ್ರತಿಯೊಬ್ಬರು ನೋಡಿ ಬೆಂಬಲ ಕೊಡಿ ಎಂದರು.
ಪಿಎಂಕೆ ಪ್ರೊಡಕ್ಷನ್ ನಡಿ ನಿರ್ಮಾಣವಾಗಿರುವ 'ಎವೆರಿಥಿಂಗ್ ಈಸ್ ಪಾಸಿಬಲ್' ಕಿರುಚಿತ್ರಕ್ಕೆ ಪೂರ್ಣಿಮಾ ಮನೋಜ್, ಯಶ್ವಿಕ್ ನಿರ್ಮಾಣ ಮಾಡಿದ್ದು, ಎರಿಕ್ ವಿಜೆ ಛಾಯಾಗ್ರಾಹಣ ಜೊತೆಗೆ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದು, ಸ್ವಾಮಿನಾಥನ್ ಆರ್ ಕೆ ಸಂಗೀತ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಸಿನಿಮಾಕ್ಕಿದ್ದು, ನಮ್ಮ ಫ್ಲಿಕ್ಸ್, ಅಮೇಜಾನ್, ಒಟಿಟಿಯಲ್ಲಿ ರಿಲೀಸ್ ಆಗಿದೆ.
ಈ ಮೂಲಕ ಕನ್ನಡದ ಕಿರು ಚಿತ್ರಗಳಿಗೂ ಓಟಿಟಿಯಲ್ಲಿ ಬೇಡಿಕೆ ಬಂದಿದೆ. ಇನ್ನು ಸಿನಿಮಗಳಲ್ಲೂ ಬ್ಯುಸಿ ಇರುವ ಖುಷಿ ರವಿ ಈಗ ಕಿರು ಚಿತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ.