For Quick Alerts
  ALLOW NOTIFICATIONS  
  For Daily Alerts

  ನಿರ್ದೇಶನದೊಂದಿಗೆ ಹೊಸ ಕಾಯಕಕ್ಕೆ ಕೈ ಹಾಕಿದ ಜೋಗಿ ಪ್ರೇಮ್!

  |

  ಕನ್ನಡದ ನಿರ್ದೇಶಕ ಜೋಗಿ ಪ್ರೇಮ್ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ನಿರ್ದೇಶಕ ಪ್ರೇಮ್ ಎಂದ ಕೂಡಲೇ ಅವರ ಚಿತ್ರದಲ್ಲಿರು ತಾಯಿ ಬಗೆಗಿನ ಸೆಂಟಿಮೆಂಟ್ ನೆನಪಾಗುತ್ತವೆ. ಅಂತೆಯೇ ಪ್ರೇಮ್ ಅವರಿಗೆ ನಿಜ ಜೀವನದಲ್ಲೂ ತಾಯಿ ಅಂದರೆ ಅಪಾರ ಪ್ರೀತಿ, ಗೌರವ ಹೊಂದಿದ್ದಾರೆ. ಅದರೆ ಇತ್ತೀಚೆಗೆ ಪ್ರೇಮ್ ತಮ್ಮ ತಾಯಿ ಭಾಗ್ಯಮ್ಮರನ್ನು ಕಳೆದುಕೊಂಡಿದ್ದಾರೆ.

  ಅಮ್ಮನ ನೆನಪಿನಲ್ಲಿ ಹುಟ್ಟೂರಾದ ಮದ್ದೂರು ಬಳಿಯಿರುವ ಬೆಸಗರಹಳ್ಳಿಯಲ್ಲಿ ತೋಟ ಮಾಡಿದ್ದಾರೆ. ಹತ್ತು ಎಕರೆಗೂ ಹೆಚ್ಚು ಕೃಷಿ ಜಮೀನು ಖರೀದಿಸಿ ಅದಕ್ಕೆ 'ಅಮ್ಮನ ತೋಟ' ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ಕೃಷಿ ಮತ್ತು ಹಸು ಸಾಕಾಣಿಕೆಗೆ ಮುಂದಾಗಿದ್ದಾರೆ. ಈ ಕೆಲಸದಲ್ಲಿ ತಾಯಿಯನ್ನು ಕಾಣುವ ಪ್ರಯತ್ನ ಮಾಡುತ್ತಿದ್ದಾರೆ ಜೋಗಿ ಪ್ರೇಮ್. ಈಗಾಗಲೇ ಹಲವು ದೇಶಿತಳಿಯ ಹಸುಗಳನ್ನು ಖರೀದಿ ಮಾಡಿದ್ದಾರೆ. ವಿಶೇಷ ಅಂದರೆ ಪ್ರೇಮ್ ಇತ್ತೀಚೆಗೆ ಹರಿಯಾಣದಲ್ಲಿರುವ ಕಾಮಧೇನು ಗೋಶಾಲೆಗೆ ಭೇಟಿ ನೀಡಿ ಬಂದಿದ್ದಾರೆ.

  ಅಲ್ಲಿಂದ ಸಾಯಿವಾಲ್ ತಳಿಯ ಹಸುಗಳನ್ನು ಖರೀದಿಸಿದ್ದಾರೆ. ಕಪ್ಪು ಬಣ್ಣದ ಹೋರಿಯನ್ನು ಕೂಡ ಖರೀದಿ ಮಾಡಿದ್ದಾರೆ. ಆ ಹೋರಿಗೆ ಭೈರವ ಎಂದು ನಾಮಕರಣ ಮಾಡಿದ್ದಾರೆ. ಈ ಹೋರಿಯ ಫೋಟೊವನ್ನು ಕೂಡ ಪ್ರೇಮ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಪ್ರೇಮ್ ಅವರ ತಾಯಿ ಭಾಗ್ಯಮ್ಮ ಅವರಿಗೆ ಹಸು ಸಾಕಣಿಕೆ ಅಂದ್ರೆ ತುಂಬಾ ಇಷ್ಟ ಇತ್ತಂತೆ. ಹಾಗಾಗಿ ತಾಯಿಯ ನೆನಪಲ್ಲಿ ಸ್ವಂತ ಬ್ರಾಂಡ್​ನ ಡೈರಿ ಫಾರ್ಮ್ ಮಾಡುವುದರ ಜೊತೆಗೆ ಹಸು ಸಾಕಾಣಿಕೆಗೆ ಸಜ್ಜಾಗಿದ್ದಾರೆ ಪ್ರೇಮ್. ಸ್ವಂತ ಡೇರಿ ಫಾರ್ಮ್ ಕಟ್ಟಿ ದೇಶಿ ಆಕಳಿನ ಹಾಲನ್ನು ಮಾರುಕಟ್ಟೆಗೆ ತರಲಿದ್ದಾರೆ.

  ಇದೇ ಫಾರ್ಮ್ ಹೌಸ್‌ನಲ್ಲಿ ಪ್ರೇಮ್ ಹಾಗು ರಕ್ಷಿತಾ ಇಬ್ಬರೂ ಆಗಾಗ ಕಾಲ ಕಳೆಯುತ್ತಾರೆ. ಬಿಡುವು ಸಿಕ್ಕಾಗಲೆಲ್ಲಾ ರಕ್ಷಿತಾ ಮತ್ತು ಪ್ರೇಮ್ ಹಳ್ಳಿಗೆ ಹೋಗುತ್ತಾರಂತೆ. ಇತ್ತೀಚೆಗೆ ಸಂಕ್ರಾಂತಿ ಹಬ್ಬವನ್ನೂ ಕೂಡ ಅವರು ಫಾರ್ಮ್ ಹೌಸ್‌ನಲ್ಲೇ ಆಚರಿಸಿದ್ದಾರೆ. ನಟಿ ರಕ್ಷಿತಾ ಅವರು ಆಗಾಗ ಅಲ್ಲಿನ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.

  Director Jogi Prem Start New Business

  ಇನ್ನು ನಿರ್ದೇಶಕ ಪ್ರೇಮ್ ಅವರ ಸಿನಿಮಾ ವಿಚಾರಕ್ಕೆ ಬಂದರೆ. ಸದ್ಯ 'ಏಕ್ ಲವ್‌ ಯಾ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದ ಹಾಡು ಮತ್ತು ಟ್ರೇಲರ್‌ಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಆದರೆ ಚಿತ್ರದ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದೆ. ಮುಂದಿನ ದಿನಾಂಕವನ್ನು ಚಿತ್ರ ತಂಡ ಶೀಘ್ರದಲ್ಲೇ ಪ್ರಕಟ ಮಾಡಲಿದೆ.

  English summary
  With Films Director Jogi Prem Start New Business,
  Friday, January 28, 2022, 17:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X