twitter
    For Quick Alerts
    ALLOW NOTIFICATIONS  
    For Daily Alerts

    KGf 2: ಕನ್ನಡ ಚಿತ್ರರಂಗಕ್ಕೆ ಹೊಸ ಚಾಲೆಂಜ್, ಬದಲಾಗುತ್ತಾ ಸ್ಟಾರ್ ನಟರ ಹಾದಿ!

    |

    'ಕೆಜಿಎಫ್ 2' ಚಿತ್ರ ಥಿಯೇಟರ್ ನಲ್ಲಿ ರಿಲೀಸ್ ಆಗಿ ಬಿಗ್ ಓಪನಿಂಗ್ ಪಡೆದುಕೊಂಡಿದೆ. ಚಿತ್ರ ನೋಡಿದವರೆಲ್ಲಾ, ಯಶ್ ಮತ್ತು ಪ್ರಶಾಂತ್ ನೀಲ್ ಗೆ ಜೈ ಕಾರ ಹಾಕುತ್ತಿದ್ದಾರೆ. ಇದು ವರ್ಲ್ಡ್‌ ಕ್ಲಾಸ್ ಚಿತ್ರ ಎಂದು ಜನ ಹಾಡಿ ಹೊಗಳುತ್ತಿದ್ದಾರೆ. ಹಿಂದಿ, ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ದಾಖಲೆ ಬರೆದಿದೆ ಕೆಜಿಎಫ್ 2.

    ಏಪ್ರಿಲ್ 14ರಂದು ಬಹುನಿರೀಕ್ಷಿತ ಚಲನಚಿತ್ರ 'ಕೆಜಿಎಫ್ ಚಾಪಕ್ಟರ್ 2' ಅದ್ಧೂರಿಯಾಗಿ ಬಿಡುಗಡೆಯಾಗಿದೆ. 'ಕೆಜಿಎಫ್ 2' ಬಹು ಭಾಷೆಗಳಲ್ಲಿ ತೆರೆಗೆ ಬಂದಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಸದ್ಯ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಇದೆ 'KGF 2'.

    Boss Title: ದರ್ಶನ್, ಯಶ್ ಇಬ್ಬರಲ್ಲಿ 'ಬಾಸ್' ಯಾರು? ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚರ್ಚೆ!Boss Title: ದರ್ಶನ್, ಯಶ್ ಇಬ್ಬರಲ್ಲಿ 'ಬಾಸ್' ಯಾರು? ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚರ್ಚೆ!

    'ಕೆಜಿಫ್ 2' ವಿಶೇಷವಾಗಿ ಗಮನ ಸೆಳೆದಿದ್ದು ಹಿಂದಿಯಲ್ಲಿ. ಈ ಚಿತ್ರ ಉತ್ತರ ಭಾರತದಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಡಲಿದೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಇತ್ತು. ಹಿಂದಿ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ದಾಖಲೆ ಮೇಲೆ ಎಲ್ಲರ ಕಣ್ಣಿತ್ತು. ಇದ್ದ ನಿರೀಕ್ಷೆಗಳನ್ನು ಈಗ ಈ ಚಿತ್ರ ನಿಜ ಮಾಡಿದೆ.

    ಹಾಗೆ ನೋಡಿದರೆ 'ಕೆಜಿಎಫ್ 2' ಚಿತ್ರ ಕೇವಲ ಒಂದು ಸಿನಿಮಾ ಆಗಿಲ್ಲ ಉಳಿದಿಲ್ಲ. ಕನ್ನಡ ಚಿತ್ರರಂಗದ ಪಾಲಿಗೆ ಇತಿಹಾಸವಾಗಿದೆ. ಈ ಇತಿಹಾಸವನ್ನು ಉಳಿಡಸಿಕೊಂಡು ಹೋಗುವ ಜವಾಬ್ದಾರಿ ಈಗ ಕನ್ನಡ ಚಿತ್ರರಂಗ ಮತ್ತು ಚಿತ್ರಗಳ ಮೇಲೆ ಇದೆ. 'ಕೆಜಿಎಫ್ 2' ಚಿತ್ರವನ್ನು ವರ್ಲ್ಡ್ ಕ್ಲಾಸ್ ಸಿನಿಮಾ ಅಂತ ಕರೆಯಲಾಗುತ್ತಿದೆ.

    ಡಾ.ರಾಜ್ ಕಾಲದಲ್ಲಿ ಹಲವು ಇತಿಹಾಸ!

    ಡಾ.ರಾಜ್ ಕಾಲದಲ್ಲಿ ಹಲವು ಇತಿಹಾಸ!

    ಕನ್ನಡದವರೇ ಎಷ್ಟೋ ಮಂದಿ, ಎಷ್ಟೋ ಸಲ ಕನ್ನಡದ ಚಿತ್ರಗಳನ್ನು ನೋಡಿ ಮೂಗು ಮುರಿದಿದ್ದಾರೆ. ವರ ನಟ ಡಾ.ರಾಜ್‌ ಕುಮಾರ್‌ ಕಾಲದಲ್ಲಿ ಕನ್ನಡ ಚಿತ್ರರಂಗ ಹಲವು ಇತಿಹಾಸಗಳಿಗೆ ಸಾಕ್ಷಿ ಆಗಿದೆ. ಆದರೆ ಬರುಬರುತ್ತಾ ಅದ್ಯಾಕೋ ಚಿತ್ರಗಲ ಕ್ವಾಲಿಟಿ, ಕತೆಯ ಕ್ವಾಲಿಟಿ ಕೂಡ ಅಷ್ಟಕಷ್ಟೇ ಆಗಿ ಬಿಟ್ಟಿತ್ತು. ಹಾಗಾಗ ಒಂದೊಂದು ಚಿತ್ರಗಳು ಹಿಟ್ ಲಿಸ್ಟ್ ಸೇರುತ್ತಿದ್ದವು, ಹಿಟ್ ಲಿಸ್ಟ್ ಸೇರುವುದರ ಜೊತೆಗೆ ಪ್ರೇಕ್ಷಕರ ಮನ ಗೆಲ್ಲುವುದು ಕೂಡ ಅಷ್ಟೇ ಮುಖ್ಯ.

    ಆದರೆ ಅದು ಎಲ್ಲಾ ಚಿತ್ರಗಳಿಂದಲೂ ಸಾಧ್ಯವಾಗುತ್ತಾ ಇರಲಿಲ್ಲ.

    ಮುಂಗಾರು ಮಳೆಯಿಂದ ಹುಟ್ಟಿತ್ತು ಇತಿಹಾಸ!

    ಮುಂಗಾರು ಮಳೆಯಿಂದ ಹುಟ್ಟಿತ್ತು ಇತಿಹಾಸ!

    ಕನ್ನಡ ಚಿತ್ರಗಳಲ್ಲಿ ಅದೇ ಕ್ಲೀಷೆಯನ್ನು ಕಂಡು ಬೇಸತ್ತು ಹೋಗಿದ್ದರು ಪ್ರೇಕ್ಷಕರು. ಆಗ 'ಮುಂಗಾರು ಮಳೆ' ಎನ್ನುವ ಚಿತ್ರ ಮತ್ತೊಂದು ಉದಾಹರಣೆ ಸೆಟ್ ಮಾಡಿತು. ನಂತರ ಇದೆ ಹಾದಿಯಲ್ಲಿ ಹತ್ತಾರು ಸಿನಿಮಾ ಬಂದು ಬೀಗಿದ್ದು ಇದೆ. ಆದರೆ ಬಳಿಕ ಹೊಸಬರು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದ ಹಾಗೆ 'ರಂಗಿತರಂಗ'ದಂತಹ ಒಂದಷ್ಟು ಹೊಸ ಪ್ರಯತ್ನಗಳು ಕೂಡ ನಡೆದಿವೆ. ಆದರೆ ಅದು ಕನ್ನಡಕ್ಕೆ ಮಾತ್ರ ಸೀಮಿತವಾಗಿ ಬಿಟ್ಟಿತು.

    ಇದು ಕೆಜಿಎಫ್ ಯುಗ!

    ಇದು ಕೆಜಿಎಫ್ ಯುಗ!

    ಈಗ ಬಂದಿರುವ ಕನ್ನಡದ ಕೆಜಿಎಫ್ ಚಿತ್ರ ಇತಿಹಾಸ ಬರೆದಯುವುದರ ಮೂಲಕ ಮಾದರಿ ಆಗಿದೆ ಎನ್ನಬಹುದು. ಪರಭಾಷಿಗರು ಯಾವುದೇ ಅಡೆ ತಡೆ ಇಲ್ಲದೆ ಕನ್ನಡದ ಚಿತ್ರವನ್ನು ಹಾಡಿ ಹೊಗಳುತ್ತಿದ್ದಾರೆ. ಕೆಜಿಎಫ್ ಒಂದು ಉತ್ತಮ ಸಿನಿಮಾ ಎನ್ನುತ್ತಿದ್ದಾರೆ. ಇನ್ನು ವಿಶ್ವವೇ ಕನ್ನಡದ ಈ ಚಿತ್ರದ ಕಡೆಗೆ ತಿರುಗಿ ನೋಡುತ್ತಾ ಇದೆ. ಕೆಜಿಎಫ್ ಸಿನಿಮಾ ಎಲ್ಲೆಲ್ಲೂ ಹೆಸರು ಮಾಡಿ ಬಿಟ್ಟಿತು. ಸಿನಿಮಾ ಚೆನ್ನಾಗಿದೆಯಾ? ಚಿತ್ರದಲ್ಲಿ ಏನಿದೆ, ಏನಿಲ್ಲ ಎನ್ನುವುದನ್ನು ಅಳೆಯುದಕ್ಕಿಂತ, ಚಿತ್ರ ಜನರನ್ನು ಎಷ್ಟರ ಮಟ್ಟಿಗೆ ತಲುಪಿದೆ ಎನ್ನುವುದು ಮುಖ್ಯ. ಕೆಜಿಎಫ್ 2 ವಿಶ್ವದ ಪ್ರೇಕ್ಷಕರನ್ನು ತಲುಪಿದ್ದು ಆಗಿದೆ.

    ಕನ್ನಡದ ನಟರು ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರಾ?

    ಕನ್ನಡದ ನಟರು ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರಾ?

    ಕೆಜಿಎಫ್ ಬರೆದ ದಾಖಲೆ ಕನ್ನಡದ ಇತರೆ ಸಿನಿಮಾಗಳೆ ಸವಾಲೆ ಸರಿ. ಅಂದರೆ ಈ ಮಟ್ಟಿಗೆ ಕನ್ನಡದ ಒಂದು ಸಿನಿಮಾ ರೀಚ್ ಆಗಿದೆ ಅಂದರೆ, ಬೇರೆ ಚಿತ್ರಗಳಿಗೆ ಇದು ಸುಲಭದ ಮಾರ್ಗವೆ. ಈಗಲಾದರೂ ಕೆಲವರು ಅನುಸರಿಸುತ್ತಾ ಇರುವ ಹಳೇ ಸೂತ್ರಗಳನ್ನು ಬಿಟ್ಟು ಹೊಸ ಮಾರ್ಗದಲ್ಲಿ ಯೋಚಿಸುವ ಅನಿವಾರ್ಯತೆ ಎದುರಾಗಿದೆ. ಇನ್ನು ಕನ್ನಡ ಚಿತ್ರಗಳಿಕೆ ಬಾಲಿವುಡ್‌ನಲ್ಲಿ ಮಾರ್ಕೆಟ್ ತೆರೆದಿದೆ. ಕನ್ನಡದ ಒಂದು ಸಿನಿಮಾ ಹಿಂದಿ ಅಥವಾ ಬೇರೆ ಭಾಷೆಗೆ ಡಬ್ ಆಗಿ ರಿಲೀಸ್ ಆಗುತ್ತದೆ ಎಂದರೆ ಎಲ್ಲರೂ ಹಾಗೆ ತಳ್ಳಿ ಹಾಕದೆ. ಒಂದು ಕ್ಷಣ ಚಿತ್ರದ ಬಗ್ಗೆ ಯೋಚಿಸುವ ಸ್ಥಿತಿ ಈಗ ಸೃಷ್ಟಿಯಾಗಿದೆ.

    English summary
    KGF Chapter 2 Set New Challenge For Kannada Film Industry And Star Heroes, Know More
    Sunday, April 17, 2022, 9:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X