»   » ಶಾರುಖ್ ಖಾನ್‌, ಹೃತಿಕ್ ರೋಷನ್ ಬೀಟ್ ಮಾಡಿದ್ರು ಕಿಚ್ಚ ಸುದೀಪ್!

ಶಾರುಖ್ ಖಾನ್‌, ಹೃತಿಕ್ ರೋಷನ್ ಬೀಟ್ ಮಾಡಿದ್ರು ಕಿಚ್ಚ ಸುದೀಪ್!

Posted By:
Subscribe to Filmibeat Kannada

ಸುದೀಪ್‌ ರವರು ಖಡಕ್ ಆರ್ಮಿ ಅಧಿಕಾರಿ ಪಾತ್ರದಲ್ಲಿ ಕಾಣಸಿಕೊಂಡಿರೋ 'ಹೆಬ್ಬುಲಿ' ಚಿತ್ರ ಗಾಂಧಿನಗರದಲ್ಲಿ ಮಾತ್ರ ಸಖತ್ ಸೌಂಡ್‌ ಮಾಡುತ್ತಿದೆ ಎಂದು ತಿಳಿದು ಅಷ್ಟಕ್ಕೇ ಸುಮ್ಮನಾದ್ರೆ ಅದು ನಿಮ್ಮ ತಪ್ಪು ಕಲ್ಪನೆ. ಯಾಕಂದ್ರೆ ಈಗ 'ಹೆಬ್ಬುಲಿ' ಗಾಂಧಿನಗರದಲ್ಲಿ ಮಾತ್ರವಲ್ಲದೇ ಭಾರತದಾದ್ಯಂತ ಅತ್ಯಂತ ನಿರೀಕ್ಷಿತ ಸಿನಿಮಾ ಆಗಿದೆ.[ಆರಂಭಿಕ ಹಂತದಲ್ಲೇ ರೆಕಾರ್ಡ್ ಬ್ರೇಕ್ ಮಾಡ್ತಾರಾ ಕಿಚ್ಚ ಸುದೀಪ್]

ಹೌದು, ಭಾರತದಲ್ಲಿ ಸಿನಿ ಪ್ರಿಯರು ರಿಲೀಸ್ ಗಾಗಿ ಕಾಯುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳ ಪೈಕಿ 'ಹೆಬ್ಬುಲಿ' ಎಂದು ಹೆಚ್ಚು ಜನರು ವೋಟ್ ಮಾಡಿದ್ದಾರೆ. ಭಾರತೀಯ ಭಾಷಾವಾರು ಸಿನಿಮಾಗಳ ಪೈಕಿ ನಡೆಸಿದ್ದ ಪೋಲ್‌ ನಲ್ಲಿ ಕನ್ನಡಿಗರಿಗೆ ಒಂದು ಸಿಹಿ ಸುದ್ದಿ ದೊರೆತಿದೆ. ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರ, ಬಾಲಿವುಡ್ ಕಿಂಗ್ ಖಾನ್‌ 'ಶಾರುಕ್ ಅಭಿನಯದ 'ರಯೀಸ್' ಮತ್ತು 'ಕ್ರಿಷ್'' ಖ್ಯಾತಿಯ ನಟ 'ಹೃತಿಕ್ ರೋಷನ್‌' ಅಭಿನಯದ 'ಕಾಬಿಲ್' ಸಿನಿಮಾವನ್ನು ಹಿಂದಿಕ್ಕಿದೆ. ಇಂಡಿಯನ್ ಮೂವೀಸ್ ಡೇಟಾ ಬೇಸ್ ಚಾರ್ಟ್‌ನಲ್ಲಿ 'ಹೆಬ್ಬುಲಿ' ಟಾಪ್‌ ನಲ್ಲಿದೆ.['ಹೆಬ್ಬುಲಿ'ಯಲ್ಲಿ ಅಮಲಾ ಮಾಡಲಿರುವ ಪಾತ್ರ ಏನಿರಬಹುದು?]

chart

image:ksbfc

ಅತ್ಯಂತ ನಿರೀಕ್ಷಿತ ಭಾರತೀಯ ಸಿನಿಮಾಗಳ ಪೈಕಿ 'ಹೆಬ್ಬುಲಿ' ಐಎಂಡಿಬಿ(ಇಂಡಿಯನ್ ಮೂವೀಸ್ ಡೇಟಾ ಬೇಸ್) ನಲ್ಲಿ ಟಾಪ್ ನಲ್ಲಿದ್ದು, 'ಹೆಬ್ಬುಲಿ' ಎಷ್ಟು ಪಾಪುಲಾರಿಟಿ ಪಡೆದು ಕೊಂಡಿದೆ, ರಯೀಷ್, ಕಾಬಿಲ್ ಮತ್ತು ಇತರೆ ಸಿನಿಮಾಗಳು ಎಷ್ಟು ಪಾಪುಲಾರಿಟಿ ಪಡೆದುಕೊಂಡಿವೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.[ಕಿಚ್ಚನ 'ಹೆಬ್ಬುಲಿ'ಗೆ, ದೇವಿಶ್ರೀ ಬದಲು ಅರ್ಜುನ್ ಜನ್ಯ ಮ್ಯೂಸಿಕ್]

ಹೆಬ್ಬುಲಿ

ಭಾರತದಾದ್ಯಂತ ಸಿನಿ ಪ್ರಿಯರು ರಿಲೀಸ್ ಗಾಗಿ ಬಹು ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾ ಈಗ ಕನ್ನಡದ ಚಿತ್ರ. ಐಎಂಡಿಬಿ ರಿಯಲ್‌ ಟೈಮ್ ಪಾಪುಲಾರಿಟಿ ಪ್ರಕಾರ 'ಹೆಬ್ಬುಲಿ' ಸಿನಿಮಾ ಶೇ.25.8 ಅಂಕಗಳಿಸಿದೆ.[ದಾವಣಗೆರೆಯಲ್ಲಿ 'ಹೆಬ್ಬುಲಿ' ಆಡಿಯೋ ಲಾಂಚ್]

ರಯೀಸ್

ಬಾಲಿವುಡ್ ಕಿಂಗ್ ಖಾನ್ 'ಶಾರುಖ್ ಖಾನ್' ಹಾಗೂ 'ಮಹೀರಾ ಖಾನ್' ನಡುವಿನ ಕೆಮಿಸ್ಟ್ರಿ ಯೊಂದಿಗೆ ಮೂಡಿಬರುತ್ತಿರುವ 'ರಯೀಸ್' ಸಿನಿಮಾ ಶೇ.25.7 ಅಂಕವನ್ನು ಐಎಂಡಿಬಿ ರಿಯಲ್‌ ಟೈಮ್ ಪಾಪುಲಾರಿಟಿಯಲ್ಲಿ ಪಡೆದಿದೆ.[ಕಿಂಗ್ ಖಾನ್ ಶಾರುಖ್ 'ರಯೀಸ್' ಟ್ರೈಲರ್ ಸೂಪರ್ ಹಿಟ್ !]

ಸಿಂಗಂ 3

ಸೂರ್ಯ ತಮಿಳಿನ ಸೂಪರ್ ಹಿಟ್ ಸಿಂಗಂ ಸರಣಿಯ ಮೂರನೇ ಆವೃತ್ತಿ 'ಸಿಂಗಂ-3' ಚಿತ್ರ ಐಎಂಡಿಬಿ ಯ ಪ್ರಕಾರ ಅತ್ಯಂತ ನಿರೀಕ್ಷಿತ ಭಾರತೀಯ ಸಿನಿಮಾಗಳ ಪೈಕಿ ಮೂರನೇ ಸ್ಥಾನ ಪಡೆದಿದೆ. ಇದು ಶೇ.21.1 ಅಂಕವನ್ನು ರಿಯಲ್ ಟೈಪ್‌ ಪಾಪುಲಾರಿಟಿಯಲ್ಲಿ ಪಡೆದಿದೆ.[ಕಿಚ್ಚನ ಜೊತೆ ಸಿಂಗಂ 2 ಧ್ವನಿಸುರಳಿ ಚಿತ್ರಗಳು]

ಕಾಬಿಲ್

'ಕ್ರಿಷ್' ಖ್ಯಾತಿಯ ಹೃತಿಕ್ ರೋಷನ್‌ ಅವರ 2016 ರ ಬಹು ನಿರೀಕ್ಷಿತ 'ಮೊಹೆಂಜೋದಾರೋ' ಚಿತ್ರ ಬಾಕ್ಸಾಫೀಸ್‌ ನಲ್ಲಿ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಆದರೆ. ಹಾಗಂತ ತಲೆಕೆಡಿಸಿಕೊಳ್ಳದೇ ಹೃತಿಕ್ ತಮ್ಮ ಚಿತ್ರ 'ಕಾಬಿಲ್' ಶೂಟಿಂಗ್ ನಲ್ಲಿ ಈಗ ಬ್ಯುಸಿ ಆಗಿದ್ದಾರೆ. ಇವರ ಸಿನಿಮಾದಲ್ಲಿ 'ಯಾಮಿ ಗೌತಮ್' ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಕನ್ನಡದ 'ಹೆಬ್ಬಲಿ' ಚಿತ್ರಕ್ಕಿಂತ ನಿರೀಕ್ಷೆ ಕಡಿಮೆ ಹೊಂದಿರುವ 'ಕಾಬಿಲ್' ಐಎಂಡಿಬಿ ಪಾಪುಲಾರಿಟಿಯಲ್ಲಿ ಶೇ.10.5% ಅಂಕ ಗಳಿಸಿದೆ.[ಒಂದಿನಾ ಹೃತಿಕ್ ಸೆಟ್ ಗೆ ಬರದಿದ್ದರೆ, ನಿರ್ಮಾಪಕರಿಗೆ ಆಗೋ ಲಾಸ್ ಎಷ್ಟು.?]

ಓಕೆ ಜಾನು

ಶ್ರದ್ದಾ ಕಪೂರ್ ಹಾಗೂ ಆದಿತ್ಯ ರಾಯ್ ಅಭಿನಯದ 'ಓಕೆ ಜಾನು' ಸಿನಿಮಾ ಅತ್ಯಂತ ನಿರೀಕ್ಷಿತ ಭಾರತೀಯ ಸಿನಿಮಾಗಳ ಪೈಕಿ ಐದನೇ ಸ್ಥಾನದಲ್ಲಿದ್ದು ಶೇ.4.4 ಅಂಕಗಳಿಸಿದೆ.

English summary
Abhinaya Chakravarthy Kichcha Sudeep beats Shah Rukh Khan and Hrithik Roshan in Most Anticipated Indian Movies through his 'Hebbuli'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada