»   » ಕಿಚ್ಚನ ಜೊತೆ ಸಿಂಗಂ 2 ಧ್ವನಿಸುರಳಿ ಚಿತ್ರಗಳು

ಕಿಚ್ಚನ ಜೊತೆ ಸಿಂಗಂ 2 ಧ್ವನಿಸುರಳಿ ಚಿತ್ರಗಳು

Posted By:
Subscribe to Filmibeat Kannada

ತಮಿಳಿನ ಜನಪ್ರಿಯ ನಟ ಸೂರ್ಯ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಸಿಂಗಂ 2' ಆಡಿಯೋ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ಭಾನುವಾರ ಚೆನ್ನೈನ ಸೆಂಟ್ರಲ್ ಟ್ರೇಡ್ ಸೆಂಟರ್ ನಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕನ್ನಡದ ಕಿಚ್ಚ ಸುದೀಪ್ ಆಗಮಿಸಿ ಎಲ್ಲರ ಮನ ಸೂರೆಗೈದರು.

ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಕಿಚ್ಚ ಸುದೀಪ್ ಅವರಿಬ್ಬರಿಗೂ ಸಿಂಗಂ 2 ಧ್ವನಿಸುರಳಿ ಬಿಡುಗಡೆ ಸಮಾರಂಭಕ್ಕೆ ಆಹ್ವಾನ ಕಳಿಸಲಾಗಿತ್ತು. ಆದರೆ ಅಜಯ್ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಹೀಗಾಗಿ ಕಿಚ್ಚ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು.

ಕಿಚ್ಚ ಸುದೀಪ್, ಸೂರ್ಯ ತಮ್ಮ ಕಾರ್ತಿ, ಲಿಂಗುಸ್ವಾಮಿ ಅವರು ಧ್ವನಿಸುರಳಿಯನ್ನು ಸಿನಿ ರಸಿಕರಿಗೆ ಅರ್ಪಣೆ ಮಾಡಿದರು. ನಂತರ ಮಾಧ್ಯಮಗಳ ಮುಂದೆ ಸೂಪರ್ ಸ್ಟಾರ್ ಗಳು ತಮ್ಮ ಅನಿಸಿಕೆ ಹಂಚಿಕೊಂಡರು.

ಜಾದೂಗಾರರ ಕೈಲಿರುವ ಮಂತ್ರ ದಂಡ ಒಂದೇ ರೀತಿ ಇರುತ್ತದೆ ಆದರೆ, ಮ್ಯಾಜಿಕ್ ಟ್ರಿಕ್ ಭ್ರಮೆ ಎನಿಸಿದರೂ ಒಂದಕ್ಕಿಂತ ಇನ್ನೊಂದು ವಿಭಿನ್ನವಾಗಿರುತ್ತದೆ. ಅದೇ ರೀತಿ, ಸಿನಿಮಾ ಕೂಡಾ ಮ್ಯಾಜಿಕ್ ಟ್ರಿಕ್ ಇದ್ದಂತೆ. ಒಳ್ಳೆ ಸಿನಿಮಾ, ಕೆಟ್ಟ ಸಿನಿಮಾ ಎಂಬುದು ಪ್ರೇಕ್ಷಕರ ಅಭಿರುಚಿ ಮೇಲೆ ನಿರ್ಧಾರವಾಗಲಿದೆ ಎಂದು ನಟ ಸೂರ್ಯ ಹೇಳಿದರು.

ಸಮಾರಂಭದಲ್ಲಿ ಕಿಚ್ಚ ಸುದೀಪ್ ಓಡಾಡಿದ್ದು ನೋಡಿದರೆ ಸಿಂಗಂ -2 ಇಷ್ಟರಲ್ಲೇ ಕೆಂಪೇಗೌಡ-2 ಆಗಿ ಕನ್ನಡಕ್ಕೆ ಬರಲಿದೆಯೇ ಎಂಬ ಅನುಮಾನ ಹುಟ್ಟಿಸಿತು.. ಸೂರ್ಯ ಹಾಗೂ ಕಿಚ್ಚ ಇಬ್ಬರು ಲವಲವಿಕೆಯಿಂದ ವೇದಿಕೆಯಲ್ಲಿ ಕಂಡು ಬಂದರು. ಆಡಿಯೋ ಬಿಡುಗಡೆ ಕಾರ್ಯಕ್ರಮದ ಚಿತ್ರಗಳು ಇಲ್ಲಿದೆ

ಸಮಾರಂಭಕ್ಕೆ ಬಂದಿದ್ದ ಗಣ್ಯರು

ಅತಿಥಿ ಕಿಚ್ಚ ಸುದೀಪ್ ಅಲ್ಲದೆ ನಾಸರ್, ನಿರ್ದೇಶಕ ರಾಜೇಶ್, ಕಾರ್ತಿ, ಅರುಣ್ ವಿಜಯ್, ವಿವೇಕ್, ಸುಮಿತ್ರಾ, ದೇವಿ ಶ್ರೀ ಪ್ರಸಾದ್, ಧನಂಜಯ್ ಗೋವಿಂದ್, ವಿಜಯ್ ಕುಮಾರ್, ಸಂಚಿತಾ ಶೆಟ್ಟಿ, ಸಾಹಿತಿ ವಿವೇಕಾ ಮುಂತಾದ ಗಣ್ಯರು ಆಗಮಿಸಿದ್ದರು.

ಸೂರ್ಯ ಭರ್ಜರಿ ಎಂಟ್ರಿ

ಸಿಂಗಂ -2 ಜೊತೆಗೆ ಸಿಂಗಂ -3 ನಿರೀಕ್ಷೆಯನ್ನು ಕೂಡಾ ಪ್ರೇಕ್ಷಕರು ಇಟ್ಟುಕೊಳ್ಳಬಹುದು. ಮತ್ತೊಮ್ಮೆ ಖಾಕಿ ಧರಿಸಲು ನಾನಂತೂ ರೆಡಿ ಎಂದ ಸೂರ್ಯ, ವೇದಿಕೆಗೆ ಎಂಟ್ರಿ ಕೊಟ್ಟಿದ್ದು ಈ ರೀತಿ

ಕಿಚ್ಚ ಸುದೀಪ್ ಬಂದಿದ್ದು ಹೀಗೆ

ಸಿಂಗಂ ಚಿತ್ರ ಕನ್ನಡದಲ್ಲಿ ಕೆಂಪೇಗೌಡ ಹಾಗೂ ಹಿಂದಿಯಲ್ಲಿ ಸಿಂಗಂ ಆಗಿ ಭರ್ಜರಿಯಾಗಿ ಓಡಿದ್ದು ಎಲ್ಲರಿಗೂ ಗೊತ್ತೇ ಇದೆ. ಸಿಂಗಂ -2 ಆಡಿಯೋ ಬಂದ ಸುದೀಪ್ ಕಾಣಿಸಿದ್ದು ಹೀಗೆ

ಸಿಂಗಂ-ಕೆಂಪೇಗೌಡ

ಸುಮಾರು 8 ತಿಂಗಳುಗಳ ಕಾಲ ಈ ಚಿತ್ರಕ್ಕೆ ದುಡಿದಿದ್ದೇವೆ. ಚಿತ್ರ ಚೆನ್ನಾಗಿ ಬಂದಿದೆ. ಸಿಂಗಂ ಚಿತ್ರ ಕನ್ನಡ, ಹಿಂದಿಯಲ್ಲಿ ಅದ್ಭುತವಾಗಿ ಪ್ರತಿಕ್ರಿಯೆ ಪಡೆದಿರುವುದು ಖುಷಿ ಕೊಟ್ಟಿದೆ. ಸುದೀಪ್ ನಟನೆ ನನಗೆ ಇಷ್ಟವಾಯ್ತು ಎಂದು ಸೂರ್ಯ ಹೇಳಿದರು.

ಶುಭ ಹಾರೈಸಿದ ಕಿಚ್ಚ ಸುದೀಪ್

ಸಿಂಗಂ-2 ಚಿತ್ರಕ್ಕೆ ಶುಭ ಹಾರೈಸಿದ ಕಿಚ್ಚ ಸುದೀಪ್. ಸಿಂಗಂ 2 ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಜೊತೆಗೆ ಹಂಸಿಕಾ ಮೋತ್ವಾನಿ ಕೂಡಾ ಇದ್ದಾರೆ. ಸಂತಾನಂ ವಿವೇಕ್ ಕಾಮಿಡಿ ಟ್ರ್ಯಾಕ್ ಗೆ ಅಂಜಲಿ, ನಾಸರ್,ವಿಜಯ್ ಕುಮಾರ್ ಪ್ರಮುಖ ಪಾತ್ರಗಳಲಿದ್ದಾರೆ.

ಕೆಂಪೇಗೌಡ ಜೊತೆ ಸಿಂಗಂ-2

ಪ್ರಿನ್ಸ್ ಪಿಕ್ಚರ್ಸ್ ನಿರ್ಮಾಣದ ಸಿಂಗಂ-2 ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ತಮಿಳು ಹಾಗೂ ಕನ್ನಡದಲ್ಲಿ ಹಾಡುಗಳು ಕೂಡಾ ಜನಮನ ಗೆದ್ದಿತ್ತು.

ಯಾವ ಭಾಷೆಗಳಲ್ಲಿ ಬರುತ್ತಿದೆ?

ಸೂರ್ಯ ಅಭಿನಯದ ಸಿಂಗಂ-2 ಚಿತ್ರ ಜೂನ್.14ಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ. ತಮಿಳು ಹಾಗೂ ತೆಲುಗು ಆವೃತ್ತಿಯ ಚಿತ್ರ ಒಂದೇ ಬಾರಿಗೆ ತೆರೆಗೆ ಬರಲಿದೆ. ಕನ್ನಡಲ್ಲಿ ಕೆಂಪೇಗೌಡ -2 ನಿರ್ಮಾಣದ ಬಗ್ಗೆ ಈ ಹಿಂದೆ ಕೂಡಾ ಮಾತುಕತೆ ನಡೆದಿತ್ತು. ಅದರೆ, ಈ ಬಗ್ಗೆ ಸುದೀಪ್ ಇನ್ನೂ ಅಪ್ದೇಟ್ ನೀಡಿಲ್ಲ.

English summary
The much-hyped Singam 2 audio was launched on Sunday (June 2) at Chennai Trade Center. The event was supposed to be attended by Bollywood star Ajay Devgn and Kannada actor Sudeep of Naan Ee fame. But the former skipped the event due to some reasons.
Please Wait while comments are loading...