»   » ಆರಂಭಿಕ ಹಂತದಲ್ಲೇ ರೆಕಾರ್ಡ್ ಬ್ರೇಕ್ ಮಾಡ್ತಾರಾ ಕಿಚ್ಚ ಸುದೀಪ್

ಆರಂಭಿಕ ಹಂತದಲ್ಲೇ ರೆಕಾರ್ಡ್ ಬ್ರೇಕ್ ಮಾಡ್ತಾರಾ ಕಿಚ್ಚ ಸುದೀಪ್

Posted By:
Subscribe to Filmibeat Kannada

ಸುಮಾರು ಒಂದೂವರೆ ವರ್ಷದ ಹಿಂದೆ ಸಿನಿಮಾ ಘೋಷಣೆಯಾಗಿ ಜೊತೆಗೆ ಸೆಟ್ಟೇರಿದ್ದರೂ ಕೂಡ ಶೂಟಿಂಗ್ ಆರಂಭವಾಗದೇ, ಶಾಂತಿಯುತವಾಗಿ ಕಾದು ಕುಳಿತಿದ್ದ 'ಗಜಕೇಸರಿ' ಖ್ಯಾತಿಯ ನಿರ್ದೇಶಕ ಎಸ್.ಕೃಷ್ಣ ಅವರಿಗೆ ಕಿಚ್ಚ ಸುದೀಪ್ ಅವರ ಕಡೆಯಿಂದ ಸಂತಸದ ಸುದ್ದಿ ಸಿಕ್ಕಿದೆ.

ಹೌದು ಕೆ.ಎಸ್ ರವಿಕುಮಾರ್ ಅವರ 'ಮುಡಿಂಜ ಇವನ ಪುಡಿ' ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿರುವ ಸುದೀಪ್ ಅವರು ಕೊನೆಗೂ ಕೃಷ್ಣ ಅವರಿಗೆ ಚಿತ್ರೀಕರಣಕ್ಕೆ ಸಮಯ ನೀಡಿದ್ದಾರೆ. ಏಪ್ರಿಲ್ 20 ರಿಂದ 'ಹೆಬ್ಬುಲಿ' ಚಿತ್ರದ ಶೂಟಿಂಗ್ ಭರ್ಜರಿಯಾಗಿ ಆರಂಭವಾಗಲಿದೆ.[ಕಿಚ್ಚನ 'ಹೆಬ್ಬುಲಿ'ಗೆ, ದೇವಿಶ್ರೀ ಬದಲು ಅರ್ಜುನ್ ಜನ್ಯ ಮ್ಯೂಸಿಕ್]


Actor Sudeep Will Shoot 130 Days Non-stop For Hebbuli

ಅಂದಹಾಗೆ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ನಿರ್ದೇಶಕರಾಗಿ ಭಡ್ತಿ ಹೊಂದಿರುವ ಛಾಯಾಗ್ರಾಹಕ ಎಸ್.ಕೃಷ್ಣ ಅವರು 'ಹೆಬ್ಬುಲಿ' ಸಿನಿಮಾವನ್ನು ಒಂದೇ ಹಂತದಲ್ಲಿ ಚಿತ್ರೀಕರಣ ಮಾಡಿ ಮುಗಿಸಲಿದ್ದಾರಂತೆ. ಸತತ 130 ದಿನಗಳಲ್ಲಿ ಒಂದೇ ಸಮನೆ ಚಿತ್ರೀಕರಣ ನಡೆಯಲಿದೆ. ಅಂತೂ ಕಿಚ್ಚ ಸುದೀಪ್ ಅವರು ಆರಂಭಿಕ ಹಂತದಲ್ಲೇ ದಾಖಲೆ ಸೃಷ್ಟಿಸುತ್ತಿದ್ದಾರೆ.


ಇನ್ನು ಈ ಚಿತ್ರದ ಬಜೆಟ್ ಎಷ್ಟು ಗೊತ್ತಾ ಬರೋಬ್ಬರಿ 25 ರಿಂದ 30 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ, ಮೈಸೂರು, ಹೈದರಾಬಾದ್, ಬಳ್ಳಾರಿ, ಬೆಂಗಳೂರು, ಐಸ್ ಲ್ಯಾಂಡ್ ಮತ್ತು ನಾರ್ವೆ ಮುಂತಾದೆಡೆಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.[ಸ್ಯಾಂಡಲ್ ವುಡ್ ನ 'ಹೆಬ್ಬುಲಿ'ಯಾಗಿ ಕಿಚ್ಚ ಸುದೀಪ್]


'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್ ಅವರು ಹಿಂದೆಂದೂ ಕಂಡಿರದ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂವರು ಖಳನಾಯಕರಾದ ರವಿಶಂಕರ್, ಸಂಪತ್ ರಾಜ್ ಮತ್ತು ಕಬೀರ್ ದುಹಾನ್ ಸಿಂಗ್ ಮುಂತಾದವರು ಮಿಂಚುತ್ತಿದ್ದಾರೆ. ಹಾಗು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ' ಎಂದು ನಿರ್ದೇಶಕ ಎಸ್.ಕೃಷ್ಣ ಅವರು ನುಡಿಯುತ್ತಾರೆ.


ಸದ್ಯಕ್ಕೆ ನಾಯಕಿಯರ ಹುಡುಕಾಟದಲ್ಲಿರುವ ಎಸ್.ಕೃಷ್ಣ ಅವರು ಕಿಚ್ಚ ಸುದೀಪ್ ಮತ್ತು ರವಿಚಂದ್ರನ್ ಅವರಿಗೆ ನಾಯಕಿಯರ ಶೋಧದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಡೇಟ್ ಹೊಂದಾಣಿಕೆ ಮೇರೆಗೆ ನಾಯಕಿ ನಟಿಯರ ಆಯ್ಕೆ ಬಗ್ಗೆ ಮಾತು-ಕತೆಗಳು ನಡೆಯುತ್ತಿವೆ' ಎನ್ನುತ್ತಾರೆ ನಿರ್ದೇಶಕ ಕೃಷ್ಣ. ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಈ ವಿಡಿಯೋ ನೋಡಿ..ಅಂತೂ 'ಗಜಕೇಸರಿ' [ಚಿತ್ರ ವಿಮರ್ಶೆ: ರಾಕಿಂಗ್ ಸ್ಟಾರ್ ಯಶ್ 'ಗಜಕೇಸರಿ'] ಚಿತ್ರ ಮಾಡಿ ಯಶಸ್ವಿಯಾಗಿರುವ ನಿರ್ದೇಶಕ ಎಸ್.ಕೃಷ್ಣ ಅವರು ಇದೀಗ ಸುದೀಪ್ ಅವರ ಜೊತೆಗೂಡಿ 'ಹೆಬ್ಬುಲಿ' ಸಿನಿಮಾ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಅವರ ಸ್ಟೈಲಿಷ್ ಪಿಕ್ ನೋಡಲು ಸ್ಲೈಡ್ಸ್ ನೋಡಿ...


-
-
-
-
-
-
-
-
-
-
-
-
-
-
-
-
English summary
Kannada Actor Sudeep's most awaited and anticipated movie, Hebbuli, will go on floors from April 20th. The movie is directed by 'Gajakesari' fame Director Krishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada