For Quick Alerts
  ALLOW NOTIFICATIONS  
  For Daily Alerts

  'ಹೆಬ್ಬುಲಿ'ಯಲ್ಲಿ ಅಮಲಾ ಮಾಡಲಿರುವ ಪಾತ್ರ ಏನಿರಬಹುದು?

  By Suneetha
  |

  ಕಿಚ್ಚ ಸುದೀಪ್ ಅವರ 'ಹೆಬ್ಬುಲಿ' ಚಿತ್ರಕ್ಕೆ ನಾಯಕಿಯಾಗಿ ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಅವರು ಬರಬಹುದು ಅನ್ನೋದರ ಬಗ್ಗೆ ನಾವು ನಿಮಗೆ ಫಿಲ್ಮಿಬೀಟಲ್ಲಿ ಸಣ್ಣ ಕ್ಲ್ಯೂ ಕೊಟ್ಟಿದ್ವಿ ಅಲ್ವಾ?.

  ಇದೀಗ ಅಮಲಾ ಅವರು ಕನ್ನಡಕ್ಕೆ ಬರುವ ಸುದ್ದಿ ಪಕ್ಕಾ ಆಗಿದ್ದು, ಸುದೀಪ್ ಅವರ ಜೊತೆ ಡ್ಯುಯೆಟ್ ಹಾಡೋದು ಗ್ಯಾರೆಂಟಿ ಅಂತ ಖುದ್ದು ಲವ್ಲಿ ಗರ್ಲ್ ಅಮಲಾ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಖಚಿತಪಡಿಸಿದ್ದಾರೆ.[ಕಿಚ್ಚ ಸುದೀಪ್ ರ 'ಹೆಬ್ಬುಲಿ'ಗೆ ನಾಯಕಿ ಇವರೇನಾ?]

  ಅಂದಹಾಗೆ ಕೇರಳ ಮೂಲದ ಕ್ರಿಶ್ಚಿಯನ್ ನಟಿ ಅಮಲಾ ಪೌಲ್ ಅವರು 'ನೀಲತಾಮರ' ಎಂಬ ಮಲಾಯಾಳಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ಅವರು ಗುರುತಿಸಿಕೊಂಡಿದ್ದು, ಹಾಗೂ ಅವರಿಗೆ ಬ್ರೇಕ್ ಕೊಟ್ಟ ಸಿನಿಮಾ ತಮಿಳಿನ 'ಮೈನಾ' ಚಿತ್ರ.

  ಇನ್ನು ಅಮಲಾ ಪೌಲ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಡಬೇಕೆಂದು ಹಲವು ದಿನಗಳಿಂದ ಕನಸು ಕಟ್ಟಿಕೊಂಡಿದ್ದರು. ಆ ಕನಸು ಇದೀಗ ನೆರವೇರುತ್ತಿದೆ. ಅಲ್ಲದೆ ದಕ್ಷಿಣ ಭಾರತದಲ್ಲೂ ಹೆಸರು ಮಾಡಿರುವ ಒಬ್ಬ ಸ್ಟಾರ್ ನಟರೊಟ್ಟಿಗೆ ಅಭಿನಯಿಸುವ ಛಾನ್ಸ್ ಸಿಕ್ಕಿದೆ ಅಂದ್ರೆ ಕೇಳಬೇಕೆ?. ಅಂತೂ ಅಮಲಾ ಅವರು ಫುಲ್ ಖುಷ್ ಆಗಿ ಬಿಟ್ಟಿದ್ದಾರೆ.[ಆರಂಭಿಕ ಹಂತದಲ್ಲೇ ರೆಕಾರ್ಡ್ ಬ್ರೇಕ್ ಮಾಡ್ತಾರಾ ಕಿಚ್ಚ ಸುದೀಪ್]

  ಅಷ್ಟಕ್ಕೂ ನಟಿ ಅಮಲಾ ಪೌಲ್ ಅವರು ಹೆಬ್ಬುಲಿಯಲ್ಲಿ ಯಾವ ತರ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಕುತೂಹಲ ನಿಮಗಿದ್ದರೆ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ಅಮಲಾ ಕನ್ನಡಕ್ಕೆ ಬರೋದು ಪಕ್ಕಾ

  ಅಮಲಾ ಕನ್ನಡಕ್ಕೆ ಬರೋದು ಪಕ್ಕಾ

  ಕಿಚ್ಚ ಸುದೀಪ್ ಅವರ ಜೊತೆ 'ಹೆಬ್ಬುಲಿ' ಚಿತ್ರದಲ್ಲಿ ನಟಿ ಅಮಲಾ ಪೌಲ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ಅನ್ನೋದು ಪಕ್ಕಾ ಆಗಿದೆ. ನಿನ್ನೆಯಷ್ಟೇ ಅಮಲಾ ಅವರು 'ಹೆಬ್ಬುಲಿ' ಚಿತ್ರಕ್ಕೆ ಅಧೀಕೃತವಾಗಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.[ಫೋಟೋ ಆಲ್ಬಂ: ತಮಿಳು ಸ್ಟಾರ್ ಕ್ರಿಕೆಟ್ ಲೀಗ್ ನಲ್ಲಿ ಕಿಚ್ಚ-ಶಿವಣ್ಣ ಭಾಗಿ]

  ಅಮಲಾ ರೋಲ್ ಬಗ್ಗೆ ಕುತೂಹಲ

  ಅಮಲಾ ರೋಲ್ ಬಗ್ಗೆ ಕುತೂಹಲ

  ಅಮಲಾ ಅವರು ಕನ್ನಡಕ್ಕೆ ಬರುತ್ತಾರೆ ಅನ್ನೋ ಸುದ್ದಿ ಪಕ್ಕಾ ಆಗುತ್ತಿದ್ದಂತೆ, ಅವರು ಈ ಚಿತ್ರದಲ್ಲಿ ಯಾವ ಪಾತ್ರ ವಹಿಸಬಹುದು ಅನ್ನೋ ಕುತೂಹಲ ಅವರ ಅಭಿಮಾನಿಗಳಲ್ಲಿ ಏರ್ಪಟ್ಟಿದೆ.

  ಅಮಲಾ ಅವರ ಪಾತ್ರ ಏನು?

  ಅಮಲಾ ಅವರ ಪಾತ್ರ ಏನು?

  ನೋಡಲು ಬಬ್ಲಿ ಬಬ್ಲಿ ಲುಕ್ ಹೊಂದಿರುವ ಪೌಲ್ ಅವರು 'ಹೆಬ್ಬುಲಿ' ಚಿತ್ರದಲ್ಲಿ ಕೂಡ ಅವರು ಬಬ್ಲಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಜೊತೆಗೆ ನಾಯಕ ಕಿಚ್ಚ ಸುದೀಪ್ ಅವರಿಗೆ ವಿಪರೀತ ಕೀಟಲೆ ಕೊಡುವ ಪಾತ್ರದಲ್ಲಿ ಮಿಂಚಲಿದ್ದಾರೆ.

  ಪ್ರಶಸ್ತಿ ವಿಜೇತ ನಟಿ

  ಪ್ರಶಸ್ತಿ ವಿಜೇತ ನಟಿ

  ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅಮಲಾ ಅವರು ಮೂರು ಭಾಷೆಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಭಿನ್ನವಾಗಿ ಮಿಂಚಿದ್ದಾರೆ. ಜೊತೆಗೆ ಇವರು ತಮ್ಮ ನಟನೆಗೆ ಉತ್ತಮ ನಟಿ ಅಂತ ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ.

  ಕಮಾಂಡರ್ ಸುದೀಪ್

  ಕಮಾಂಡರ್ ಸುದೀಪ್

  ಇದೇ ಮೊದಲ ಬಾರಿಗೆ ಕಮಾಂಡರ್ ಪಾತ್ರದಲ್ಲಿ ಮಿಂಚಲಿರುವ ಕಿಚ್ಚ ಸುದೀಪ್ ಅವರಿಗೆ ಅಣ್ಣನಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಮಿಂಚಿದ್ದಾರೆ. 'ಮುಂಗಾರು ಮಳೆ' ಖ್ಯಾತಿಯ ಎಸ್.ಕೃಷ್ಣ ಅವರು ಮೊಟ್ಟ ಮೊದಲ ಬಾರಿಗೆ ಈ ಸ್ಟಾರ್ ನಟರಿಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.

  English summary
  Actress Amala Paul will make her Sandalwood debut opposite Kiccha Sudeep in 'Hebbuli' and the same has been confirmed by 'Gajakesari' fame director S Krishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X