Just In
Don't Miss!
- Sports
ಶ್ರೀಲಂಕಾದಿಂದಲೇ ಟೀಮ್ ಇಂಡಿಯಾಗೆ ಎಚ್ಚರಿಕೆ ರವಾನಿಸಿದ ಜೋ ರೂಟ್
- News
ಕೇಂದ್ರ ಬಜೆಟ್ 2021:ಬೆಂಗಳೂರಿನ ನಿರೀಕ್ಷೆಗಳೇನು?
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒಂದಿನಾ ಹೃತಿಕ್ ಸೆಟ್ ಗೆ ಬರದಿದ್ದರೆ, ನಿರ್ಮಾಪಕರಿಗೆ ಆಗೋ ಲಾಸ್ ಎಷ್ಟು.?
ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಅವರ ಬಹುನಿರೀಕ್ಷಿತ 'ಮೊಹೆಂಜೋದಾರೋ' ಚಿತ್ರ ಬಾಕ್ಸಾಫೀಸ್ ನಲ್ಲಿ ಅಷ್ಟಾಗಿ ಸದ್ದು ಮಾಡದಿದ್ದರೂ, ಎಲ್ಲವನ್ನು ಮರೆತು ತಮ್ಮ ಮುಂದಿನ ಚಿತ್ರ 'ಕಾಬಿಲ್' ಶೂಟಿಂಗ್ ನತ್ತ ಗಮನ ಹರಿಸಿದ್ದಾರೆ.
ಇದೀಗ ಹೊಸ ವಿಷ್ಯ ಏನು ಅಂದ್ರೆ, ಹೃತಿಕ್ ಅವರು ಕಾಬಿಲ್ ನಿರ್ದೇಶಕರನ್ನು ಸ್ವಲ್ಪ ಸತಾಯಿಸುತ್ತಿದ್ದಾರಂತೆ. ಹೃತಿಕ್ ಅವರ ಗೈರು ಹಾಜರಿಯಿಂದ 'ಕಾಬಿಲ್' ಚಿತ್ರದ ಸೆಟ್ ಅಲ್ಲೋಲ-ಕಲ್ಲೋಲ ಆಗಿದೆ, ಎಂದು ಬಿಟೌನ್ ನಲ್ಲಿ ಗುಲ್ಲೆದ್ದಿದೆ.[ಕ್ರಿಮಿನಲ್ ಕೇಸ್ ನಿಂದ ಕ್ಲೀನ್ ಚಿಟ್ ಪಡೆದ ಹೃತಿಕ್ ಮಾಜಿ ಪತ್ನಿ ಸುಸೇನ್]
ಅಂದಹಾಗೆ ಹೃತಿಕ್ ಅವರು ಸುಮ್ಮ-ಸುಮ್ಮನೆ ಗೈರು ಹಾಜರಾಗುತ್ತಿಲ್ಲ, ಅದಕ್ಕೂ ಒಂದು ಕಾರಣ ಇದೆ. ಇತ್ತೀಚೆಗೆ ಹೃತಿಕ್ ಅವರಿಗೆ ಜ್ವರ ಬಂದ ಕಾರಣ ಸೆಟ್ ಗೆ ಹಾಜರಾಗಿಲ್ಲ. ಆದ್ರೆ ಎಷ್ಟು ದಿನ ಅಂತ ಹೀಗೆ ಗೈರು ಹಾಜರಾಗೋದು ಅಂತಾರೆ ಚಿತ್ರತಂಡದವರು. ಇನ್ನು ಇವರ ಗೈರು ಹಾಜರಿಯಿಂದ 'ಕಾಬಿಲ್' ಚಿತ್ರತಂಡಕ್ಕೆ ದಿನವೊಂದಕ್ಕೆ ಸುಮಾರು 12 ಲಕ್ಷ ರೂಪಾಯಿ ಖರ್ಚಾಗುತ್ತಂತೆ.
ಜೊತೆಗೆ ಇತ್ತೀಚೆಗೆ ಹೃತಿಕ್ ರೋಷನ್ ಅವರು ಸ್ವಲ್ಪ ತಾಳ್ಮೆ ಕಳೆದುಕೊಂಡು, ಶೂಟಿಂಗ್ ಸೆಟ್ ನಲ್ಲಿ ಎಲ್ಲರ ಮೇಲೂ ಕೂಗಾಡುತ್ತಾರಂತೆ. ಹೃತಿಕ್ ಅವರ ಈ ವರ್ತನೆ 'ಕಾಬಿಲ್' ನಿರ್ಮಾಪಕರಿಗೆ ದೊಡ್ಡ ತಲೆನೋವಾಗಿದೆ.[ಮಧ್ಯರಾತ್ರಿ ರಾಕೇಶ್ ರೋಶನ್ ಮನೆಗೆ ಶಾರುಖ್ ಹೋಗಿದ್ದು ಯಾಕೆ?]
ಇನ್ನು ಹೃತಿಕ್ ಅವರನ್ನು ಫೋನ್ ಮೂಲಕ ಸಂಪರ್ಕಿಸಲು ಹೋದರೆ, ಆ ಕಡೆಯಿಂದ ರಿಂಗ್ ಆಗುತ್ತೆ ಹೊರತು ಯಾರು ಕರೆ ಸ್ವೀಕರಿಸುತ್ತಿಲ್ಲ, ಎಂದು ನಿರ್ದೇಶಕರು ಅಳಲು ತೋಡಿಕೊಳ್ಳುತ್ತಾರೆ.['ಮೊಹೆಂಜೋದಾರೋ' 4 ದಿನದ ಕಲೆಕ್ಷನ್ ರಿಪೋರ್ಟ್ ನಿಮಗಾಗಿ]
ಈ ಚಿತ್ರದಲ್ಲಿ ಹೃತಿಕ್ ರೋಷನ್ ಅವರಿಗೆ ನಾಯಕಿ ನಟಿಯಾಗಿ ಯಾಮಿ ಗೌತಮ್ ಅವರು ಕಾಣಿಸಿಕೊಂಡಿದ್ದಾರೆ.