bredcrumb

ಅಂಬಿ ಮೊಮ್ಮಗನ ನಾಮಕರಣ ಫೋಟೊಗಳು ವೈರಲ್

By Umesh M
| Published: Monday, March 31, 2025, 19:16 [IST]

ಅಂಬರೀಶ್ ಪುತ್ರ ಅಭಿಷೇಕ್ ಹಾಗೂ ಪತ್ನಿ ಅವಿವಾ ಇತ್ತೀಚೆಗೆ ಪೋಷಕರಾಗಿ ಬಡ್ತಿ ಪಡೆದಿದ್ದರು. ಕಳೆದ ವರ್ಷ ನವೆಂಬರ್ 12ರಂದು ಅವಿವಾಗೆ ಗಂಡು ಮಗು ಜನಿಸಿತ್ತು. ಮಾರ್ಚ್ 16ರಂದು ಖಾಸಗಿ ಹೋಟೆಲ್‌ನಲ್ಲಿ ನಾಮಕರಣ ಶಾಸ್ತ್ರ ನಡೆದಿತ್ತು. ಸುಮಲತಾ ಮೊಮ್ಮಗನಿಗೆ 'ರಾಣಾ ಅಮರ್ ಅಂಬರೀಶ್' ಎಂದು ಹೆಸರಿಟ್ಟಿದ್ದಾರೆ. ಚಿತ್ರರಂಗದ ತಾರೆಯರು, ಆಪ್ತರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಸದ್ಯ ಆ ನಾಮಕರಣ ಸಮಾರಂಭದ ಫೋಟೊಗಳು ವೈರಲ್ ಆಗುತ್ತಿದೆ.

Abhishek Ambareesh's son's Naming Ceremony: Adorable Photos
1/5

ನಾಲ್ಕು ತಿಂಗಳ ಹಿಂದೆ ಸುಮಲತಾ ಅಂಬರೀಶ್ ಅಜ್ಜಿ ಆಗಿದ್ದರು. ಪುತ್ರ ಅಭಿಷೇಕ್ ಹಾಗೂ ಅವಿವಾ ದಂಪತಿ ಗಂಡು ಮಗು ಜನಿಸಿತ್ತು. ಇತ್ತೀಚೆಗೆ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿ ಅಂಬಿ ಮೊಮ್ಮಗನ ನಾಮಕರಣ ನಡೆದಿತ್ತು.
Abhishek Ambareesh's son's Naming Ceremony: Adorable Photos
2/5

ಕುಟುಂಬಸ್ಥರು, ಸಂಬಂಧಿಕರು, ಹಿತೈಷಿಗಳು, ರಾಜಕೀಯ ಹಾಗೂ ಸಿನಿಮಾರಂಗದ ಹಲವರು ಅಭಿಷೇಕ್ ಅಂಬರೀಶ್ ಮಗನ ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ರಾಣಾ ಅಮರ್ ಅಂಬರೀಶ್ ಎಂದು ಮಗನಿಗೆ ಅಭಿ ಹೆಸರಿಟ್ಟಿದ್ದಾರೆ.
Abhishek Ambareesh's son's Naming Ceremony: Adorable Photos
3/5

ಅಪ್ಪನ ಹೆಸರನ್ನು ಸೇರಿಸಿ ಮಗನಿಗೆ ಅಭಿ ಹೆಸರಿಟ್ಟು ಖುಷಿಪಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಬಿಳಿ ಬಣ್ಣದ ಶೆರ್ವಾಣಿ ಧರಿಸಿ ಅಭಿಷೇಕ್ ಮಿಂಚಿದ್ದರು. ಅವಿವಾ ಸೀರೆ ಉಟ್ಟು ಕಂಗೊಳಿಸಿದ್ದರು. ಬಹಳ ಶಾಸ್ತ್ರೋಕ್ತವಾಗಿ ಕಾರ್ಯಕ್ರಮ ನಡೆಯಿತು.
Abhishek Ambareesh's son's Naming Ceremony: Adorable Photos
4/5

ಸುದೀಪ್ ಸೇರಿ ಚಿತ್ರರಂಗದ ತಾರೆಯರು ಕಾರ್ಯಕ್ರಮದಲ್ಲಿ ಭಾಗಿ ಆಗಿ ಅಂಬಿ ಮೊಮ್ಮಗನಿಗೆ ಆಶೀರ್ವದಿಸಿದರು. ಆದರೆ ಅಂಬಿ ಕುಟುಂಬಕ್ಕೆ ಬಹಳ ಆಪ್ತರಾಗಿದ್ದ ದರ್ಶನ್ ಹಾಗೂ ಯಶ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
Abhishek Ambareesh's son's Naming Ceremony: Adorable Photos
5/5

ಅಭಿ ಮಗನಿಗಾಗಿ ವಿಶೇಷವಾದ ತೊಟ್ಟಿಲನ್ನು ಕೂಡ ಸಿದ್ಧಪಡಿಸಲಾಗಿತ್ತು. ನಾಮಕರಣ ಫೋಟೊಗಳು ಹೊರಬಂದರೂ ಮಗುವಿನ ಮುಖವನ್ನು ಇನ್ನು ರಿವೀಲ್ ಮಾಡಿಲ್ಲ. ರಾಣಾ ಅಮರ್ ಅಂಬರೀಶ್‌ನನ್ನು ನೋಡಲು ಅಂಬಿ ಅಭಿಮಾನಿಗಳು ಕಾಯುತ್ತಿದ್ದಾರೆ.
X