bredcrumb

'ಕೃಷ್ಣಂ ಪ್ರಣಯ ಸಖಿ' ನಟಿ ಶರಣ್ಯ ಶೆಟ್ಟಿ ಶ್ರೀಲಂಕಾ ಪ್ರವಾಸ ಹೇಗಿದೆ ನೋಡಿ

By Umesh M
| Published: Thursday, May 1, 2025, 10:40 [IST]

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ನಾಯಕಿ ಶರಣ್ಯ ಶೆಟ್ಟಿ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ. ಶ್ರೀಲಂಕಾ ಸುಂದರ ತಾಣಗಳನ್ನು ಎಂಜಾಯ್ ಮಾಡುತ್ತಿರುವ ನಟಿ ಅಲ್ಲಿನ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲಿನ ದ್ವೀಪಗಳು, ದೇವಸ್ಥಾನಗಳು, ಐಶಾರಾಮಿ ರೆಸಾರ್ಟ್‌ಗಳು, ಸೂರ್ಯಾಸ್ತ, ಅಲ್ಲಿನ ರೆಸಾರ್ಟ್‌ಗಳ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.    

Sharanya Shetty Sri Lanka Travel Diaries
1/6

'ಕೃಷ್ಣಂ ಪ್ರಣಯ ಸಖಿ' ಮೂಲಕ ಶರಣ್ಯ ಶೆಟ್ಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಬಿಡುವು ಮಾಡಿಕೊಂಡು ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಸುಂದರ ತಾಣಗಳಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಸೂರ್ಯಾಸ್ತ, ಬೀಚ್ ಅಂತೆಲ್ಲಾ ಸುತ್ತಾಡುತ್ತಿದ್ದಾರೆ. ಶ್ರೀಲಂಕಾದ ನೇಚರ್ ಜೊತೆ ಎಂಜಾಯ್ ಮಾಡುತ್ತಿದ್ದಾರೆ.
Sharanya Shetty Sri Lanka Travel Diaries
2/6

ಶ್ರೀಲಂಕಾ ಅಂದ ಕೂಡಲೇ ನೆನಪಾಗುವುದು ಅಲ್ಲಿನ ಟೀ ಪ್ಲಾಂಟೇಷನ್‌ಗಳು. ಶ್ರೀಲಂಕಾಗೆ ಹೋದ್ಮೇಲೆ ಅಲ್ಲಿನ ಟೀ ಪ್ಲಾಂಟೇಷನ್‌ಗಳಿಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿನ ಹಸಿರಿನ ಸೌಂದರ್ಯವನ್ನು ಸವಿದಿದ್ದಾರೆ.
Sharanya Shetty Sri Lanka Travel Diaries
3/6

ಶ್ರೀಲಂಕಾದ ಕೆಲವು ತಾಣಗಳಿಗೂ ಭೇಟಿ ಕೊಟ್ಟಿದ್ದಾರೆ. ಅಲ್ಲಿನ ಐತಿಹಾಸಿಕ ಸ್ಥಳಗಳಿಗೆ ಭೇಟಿ ಕೊಟ್ಟಿದ್ದಾರೆ. ಸಿಗಿರಿಯಾ, ದಂಬುಲಾ ಕೇವ್ ಟೆಂಪಲ್, ಕ್ಯಾಂಡಿ ಎನ್ನುವ ನಗರಕ್ಕೂ ವಿಸಿಟ್ ಹಾಕಿದ್ದಾರೆ. ಅಲ್ಲಿನ ದ್ವೀಪಗಳಿಗೆ ಭೇಟಿ ಕೊಟ್ಟು ಸಂಸ್ಕೃತಿ ಹಾಗೂ ಕತೆಗಳನ್ನು ಕೇಳಿದ್ದಾರೆ.
Sharanya Shetty Sri Lanka Travel Diaries
4/6

ನಟಿ ಶರಣ್ಯ ಶೆಟ್ಟಿಯವರ ಶ್ರೀಲಂಕಾ ಪ್ರವಾಸ್ ಅಡ್ವೆಂಚರ್‌ನಿಂದ ಕೂಡಿರುವ ಹಾಗಿದೆ. ಈ ವೇಳೆ ಅವರು ಬಳಸಿರುವ ಔಟ್‌ಫಿಟ್, ವೈಬ್ರೆಂಟ್ ಪ್ರಿಂಟ್ಸ್ ಇರುವ ವಸ್ತ್ರಗಳು ಪರ್ಫೆಕ್ಟ್ ಟ್ರಾವೆಲ್ ಕಹಾನಿಯನ್ನು ಹೇಳುತ್ತಿದ್ದವು. ಹಾಗೇ ಬೀಚ್‌ನ ಮುಂದೆಯೇ ಡಿನ್ನರ್ ಮಾಡಿ ಎಂಜಾಯ್ ಮಾಡಿದ್ದಾರೆ. ಶರಣ್ಯ ಶೆಟ್ಟಿ ಶ್ರೀಲಂಕಾ ಟ್ರಿಪ್ ಗ್ಲಾಮರಸ್ ಹಾಗೂ ಅಡ್ವೆಂಚರ್ ಆಗಿತ್ತು ಎನ್ನಬಹುದು.
Sharanya Shetty Sri Lanka Travel Diaries
5/6

ಶರಣ್ಯ ಶೆಟ್ಟಿ ಶ್ರೀಲಂಕಾ ಐಷಾರಾಮಿ ರೆಸಾರ್ಟ್‌ಗಳಲ್ಲಿ ಉಳಿದುಕೊಂಡಿದ್ದರು. ಅಲ್ಲಿನ ಸ್ಟಾ, ಸ್ವಿಮ್ಮಿಂಗ್ ಪೂಲ್‌ಗಳು ಹಾಗೇ ಅಲ್ಲಿನ ಸ್ಪೆಷನ್ ಡಿಶ್‌ಗಳನ್ನು ಸವಿದಿದ್ದಾರೆ. ಶ್ರೀಲಂಕಾದ ಸ್ಪೆಷಲ್ ತಿನಿಸುಗಳನ್ನು ತಿಂದು ಎಂಜಾಯ್ ಮಾಡಿದ್ದಾರೆ.
Sharanya Shetty Sri Lanka Travel Diaries
6/6

ಶರಣ್ಯ ಶೆಟ್ಟಿ ಶ್ರೀಲಂಕಾ ಪ್ರವಾಸದ ಫೋಟೊಗಳನ್ನು ನೋಡುತ್ತಿದ್ದರೆ ಅವರು ಎಷ್ಟು ಎಂಜಾಯ್ ಮಾಡಿದ್ದಾರೆ ಅನ್ನೋದನ್ನು ನೋಡಬಹುದು. ಅವರ ಟ್ರಾವೆಲಿಂಗ್ ಫೋಟೊಗಳೆ ಎಲ್ಲವನ್ನು ಹೇಳುತ್ತಿವೆ. ಇನ್ನೂ ಶರಣ್ಯ ಶೆಟ್ಟಿ ಕನ್ನಡ ಸಿನಿಮಾ ಬಳಿಕ ತೆಲುಗು ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.
X