By
Umesh M
| Published: Monday, April 28, 2025, 11:44 [IST]
ಬದುಕು ಹೀಗೆ ಎಂದು ಹೇಳಲು ಸಾಧ್ಯ ಇಲ್ಲ. ಯಾವತ್ತು ಏನು ಬೇಕಾದರೂ ಆಗಬಹುದು. ಇನ್ನು ಹುಟ್ಟು ಅನಿರೀಕ್ಷಿತ, ಸಾವು ಖಚಿತ. ಬದುಕಲು ಇಲ್ಲಿ ಅನೇಕರು ಹೋರಾಡುತ್ತಾರೆ. ಕೆಲವರು ಹೋರಾಡಿ ಗೆಲ್ಲುತ್ತಾರೆ. ಮತ್ತೂ ಕೆಲವರು ಸೋಲುತ್ತಾರೆ. ಸೋತು ಇನ್ನು ಕೆಲವರು ಆತ್ಮಹತ್ಯೆಗೆ ಶರಣಾಗುತ್ತಾರೆ. ಮಿಶಾ ಅಗರ್ವಾಲ್ ಕೂಡ ಹೀಗೆ ಆತ್ಮಹತ್ಯೆಗೆ ಶರಣಾದರಾ ಗೊತ್ತಿಲ್ಲ. ಆದರೆ ಇವರ ಸಾವು ಅನೇಕರಿಗೆ ದಿಗ್ಭ್ರಮೆ ಮೂಡಿಸಿದೆ.
1/5
ಬರ್ತ್ಡೇಗೂ 2 ದಿನ ಮೊದಲೇ ಕೊನೆಯುಸಿರೆಳೆದ ಖ್ಯಾತ ಕಂಟೆಂಟ್ ಕ್ರಿಯೇಟರ್ | Digital Creator Misha Agarwal Tragically Passes Away Just Days Before Her 25th Birthday - Filmibeat Kannada
/photo-gallery/digital-creator-misha-agarwal-tragically-passes-away-just-days-before-her-25th-birthday-fb102406.html
ಹೌದು, ಮಿಶಾ ಅಗರ್ವಾಲ್ ತಮ್ಮ 25ನೇ ಜನ್ಮದಿನವನ್ನು ಆಚರಿಸಿಕೊಳ್ಳುವ ಎರಡು ದಿನದ ಮೊದಲು ಇಹಲೋಕ ತ್ಯಜಿಸಿದ್ದಾರೆ. ಮಿಶಾ ಅಗರ್ವಾಲ್ ಅವರ ಅಕಾಲಿಕ ನಿಧನಕ್ಕೆ ಕಾರಣ ಇನ್ನೂ ಗೊತ್ತಾಗದಿದ್ದರೂ ಮೊನ್ನೆ ಶುಕ್ರವಾರ ರಾತ್ರಿ ಮಿಶಾ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಿಶಾ ಅಗಲಿಕೆಯ ಸುದ್ದಿಯನ್ನು ಹಂಚಿಕೊಳ್ಳಲಾಗಿದೆ.
2/5
ಬರ್ತ್ಡೇಗೂ 2 ದಿನ ಮೊದಲೇ ಕೊನೆಯುಸಿರೆಳೆದ ಖ್ಯಾತ ಕಂಟೆಂಟ್ ಕ್ರಿಯೇಟರ್ | Digital Creator Misha Agarwal Tragically Passes Away Just Days Before Her 25th Birthday - Filmibeat Kannada
/photo-gallery/digital-creator-misha-agarwal-tragically-passes-away-just-days-before-her-25th-birthday-fb102406.html#photos-1
ಮಿಶಾ ಅಗರ್ವಾಲ್ ಅವರ ನಿಧನದ ಸುದ್ದಿಯನ್ನು ನಾವು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತಿದ್ದೇವೆ, ನೀವು ಅವರಿಗೆ ಮತ್ತು ಅವರ ಕೆಲಸಕ್ಕೆ ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದು ಹೇಳಿರುವ ಅವರ ಕುಟುಂಬಸ್ಥರು ಈ ಅಪಾರವಾದ ನಷ್ಟವನ್ನು ನಿಭಾಯಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಅವಳನ್ನು ನಿಮ್ಮ ಮನದಲ್ಲಿ ನಿಮ್ಮ ಯೋಚನೆಯಲ್ಲಿ ಜೀವಂತವಾಗಿಡಿ ಎಂದು ಹೇಳಿದ್ದಾರೆ.
3/5
ಬರ್ತ್ಡೇಗೂ 2 ದಿನ ಮೊದಲೇ ಕೊನೆಯುಸಿರೆಳೆದ ಖ್ಯಾತ ಕಂಟೆಂಟ್ ಕ್ರಿಯೇಟರ್ | Digital Creator Misha Agarwal Tragically Passes Away Just Days Before Her 25th Birthday - Filmibeat Kannada
/photo-gallery/digital-creator-misha-agarwal-tragically-passes-away-just-days-before-her-25th-birthday-fb102406.html#photos-2
ಮಿಶಾ ಅವರ ಈ ಹಠಾತ್ ನಿಧನದ ಸುದ್ದಿ ಕೇಳಿ ಇವರ ಫಾಲೋವರ್ಸ್‌ಗಳು, ಅಭಿಮಾನಿಗಳು ಸದ್ಯ ಶಾಕ್ ಆಗಿದ್ದಾರೆ. ತಮ್ಮ ಮನದ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಆಕೆಯ ತಮಾಷೆಯ ವಿಡಿಯೋಗಳು ನಮ್ಮಲ್ಲಿ ನಗು ಮೂಡಿಸುತ್ತಿದ್ದವು ಎಂದು ಅನೇಕರು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇದು ಸುಳ್ಳು ಸುದ್ದಿ ಎನ್ನುತ್ತಿದ್ದಾರೆ.
4/5
ಬರ್ತ್ಡೇಗೂ 2 ದಿನ ಮೊದಲೇ ಕೊನೆಯುಸಿರೆಳೆದ ಖ್ಯಾತ ಕಂಟೆಂಟ್ ಕ್ರಿಯೇಟರ್ | Digital Creator Misha Agarwal Tragically Passes Away Just Days Before Her 25th Birthday - Filmibeat Kannada
/photo-gallery/digital-creator-misha-agarwal-tragically-passes-away-just-days-before-her-25th-birthday-fb102406.html#photos-3
ಫಾಲೋವರ್ಸ್‌ಗಳ ಈ ಕಾಮೆಂಟ್ ಅವರ ನೋವು ನೋಡಿ ಉತ್ತರವನ್ನು ಕೂಡ ನೀಡಿರುವ ಮಿಶಾ ಅವರ ಸಹೋದರಿ ಮುಕ್ತಾ ಅಗರ್ವಾಲ್, ಈ ಸುದ್ದಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಲೇಬೇಕಿತ್ತು ಅದಕ್ಕೆ ನೀವು ಅರ್ಹರು ಕೂಡ ಹೀಗಾಗಿ ಸುದ್ದಿಯನ್ನು ನಿಮಗೆ ತಲುಪಿಸಿದ್ದೇವೆ ಎಂದು ಹೇಳಿದ್ದಾರೆ.
5/5
ಬರ್ತ್ಡೇಗೂ 2 ದಿನ ಮೊದಲೇ ಕೊನೆಯುಸಿರೆಳೆದ ಖ್ಯಾತ ಕಂಟೆಂಟ್ ಕ್ರಿಯೇಟರ್ | Digital Creator Misha Agarwal Tragically Passes Away Just Days Before Her 25th Birthday - Filmibeat Kannada
/photo-gallery/digital-creator-misha-agarwal-tragically-passes-away-just-days-before-her-25th-birthday-fb102406.html#photos-4
ಅಂದ್ಹಾಗೇ ಮಿಶಾ ಅಗರ್ವಾಲ್ ಹಾಸ್ಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಎಲ್ಲರನ್ನು ನಗಿಸುತ್ತಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಮೂರುವರೆ ಲಕ್ಷ ಫಾಲೋವರ್ಸ್‌ಗಳನ್ನು ಮಿಶಾ ಅಗರ್ವಾಲ್ ಹೊಂದಿದ್ದರು. ಇನ್ನುGRWM { ಗೆಟ್ ರೆಡಿ ವಿತ್ ಮಿ } ಎಂದು ವಿಡಿಯೋಗಳನ್ನು ಕೂಡ ಮಿಶಾ ಶೇರ್ ಮಾಡುತ್ತಿದ್ದರು.