bredcrumb

ನಟಿ ಸಮಂತಾಗೆ ಗುಡಿ ಕಟ್ಟಿದ ಅಭಿಮಾನಿ

By Umesh M
| Published: Friday, May 2, 2025, 17:29 [IST]

ನೆಚ್ಚಿನ ಸಿನಿಮಾ ತಾರೆಯರಿಗೆ ಅಭಿಮಾನಿಗಳು ದೇವಸ್ಥಾನ ಕಟ್ಟುವುದು ಹೊಸದೇನು ಅಲ್ಲ. ರಜನಿಕಾಂತ್, ಖುಷ್ಬು ಸೇರಿದಂತೆ ಕೆಲ ನಟ, ನಟಿಯರಿಗೆ ಅಭಿಮಾನಿಗಳು ಈಗಾಗಲೇ ಗುಡಿ ಕಟ್ಟಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಇದೀಗ ಆಂಧ್ರದಲ್ಲಿ ಸಮಂತಾನ ಅಭಿಮಾನಿಯೊಬ್ಬ ನೆಚ್ಚಿನ ನಟಿಗಾಗಿ ದೇಗುಲ ಕಟ್ಟಿಸಿದ್ದಾನೆ. ಆಕೆಯ ಹುಟ್ಟುಹಬ್ಬಕ್ಕೆ ಆಲಯ ಲೋಕಾರ್ಪಣೆ ಮಾಡಲಾಗಿದೆ.

Fan Builds Temple for Samantha Ruth Prabhu On her 38th Birthday In Andhra Pradesh
1/4

ಅಮಿತಾಬ್ ಬಚ್ಚನ್, ಸಚಿನ್, ರಜನಿಕಾಂತ್, ಖುಷ್ಬು, ಶ್ರೀದೇವಿ ಸೇರಿದಂತೆ ಕೆಲ ತಾರೆಯರಿಗೆ ಅಭಿಮಾನಿಗಳು ದೇಗುಲ ಕಟ್ಟಿಸಿದ್ದಾರೆ. ಇದೀಗ ನಟಿ ಸಮಂತಾಗೆ ಆಂಧ್ರದಲ್ಲಿ ಸಂದೀಪ್ ಎಂಬ ಅಭಿಮಾನಿ ದೇವಸ್ಥಾನ ನಿರ್ಮಿಸಿ ಆಕೆಯ ವಿಗ್ರಹ ಇಟ್ಟು ಪೂಜೆ ಮಾಡಿದ್ದಾನೆ.
Fan Builds Temple for Samantha Ruth Prabhu On her 38th Birthday In Andhra Pradesh
2/4

ಇತ್ತೀಚೆಗೆ ಸಮಂತಾ ಹುಟ್ಟುಹಬ್ಬ(ಏಪ್ರಿಲ್ 28) ದೇವಸ್ಥಾನದ ಲೋಕಾರ್ಪಣೆ ಮಾಡಲಾಗಿದೆ. ಅಕ್ಕ ಪಕ್ಕದ ಒಂದಷ್ಟು ಮಕ್ಕಳನ್ನು ಕರೆಸಿ ಸಂಭ್ರಮಾಚರಣೆ ಮಾಡಲಾಗಿದೆ. ಸಮಂತಾ ಸೀರೆ ಉಟ್ಟ ಗೆಟಪ್‌ನಲ್ಲಿರುವ ಮೂರ್ತಿಯನ್ನು ಇಟ್ಟು ಅಲಂಕರಿಸಲಾಗಿದೆ.
Fan Builds Temple for Samantha Ruth Prabhu On her 38th Birthday In Andhra Pradesh
3/4

ಕೇಕ್ ಕತ್ತರಿಸಿ ಸಮಂತಾ ಹುಟ್ಟುಹಬ್ಬ ಆಚರಿಸಲಾಗಿದೆ. ಅನಾಥರಿಗೆ ಅನ್ನದಾನ ಸಹ ಮಾಡಲಾಗಿದೆ. ಸಂದೀಪ್ ಅಭಿಮಾನ ಕಂಡು ಕೆಲವರು ಅಚ್ಚರಿ ಮೂಡಿಸಿದ್ದಾರೆ. ಮತ್ತೆ ಕೆಲವರು ನಟಿಯರಿಗೆ ದೇವಸ್ಥಾನ ಕಟ್ಟಿಸುವ ಬದಲು ನಿಮ್ಮ ಪೋಷಕರಿಗೆ ಕಟ್ಟಿಸಬೇಕಿತ್ತು ಎಂದು ಕಿವಿಮಾತು ಹೇಳುತ್ತಿದ್ದಾರೆ.
Fan Builds Temple for Samantha Ruth Prabhu On her 38th Birthday In Andhra Pradesh
4/4

ಈ ಹಿಂದೆ ಕೂಡ ಅಲ್ಲಿ ನಟಿ ಸಮಂತಾ ಮೂರ್ತಿ ಪೂಜೆ ಮಾಡಲಾಗಿತ್ತು. ಇದೀಗ ಚಿನ್ನದ ಬಣ್ಣದ ಮತ್ತೊಂದು ಮೂರ್ತಿಯಲ್ಲಿ ಅಲ್ಲಿ ತಂದು ಇರಿಸಿ ಹುಟ್ಟುಹಬ್ಬ ಆಚರಿಸಲಾಗಿದೆ.
X