bredcrumb

ಅಜ್ಜಿ ಸೀರೆ ಉಟ್ಟು ಮಿಂಚಿದ ಪೂಜಾ

By Kannada Filmibeat Photos
| Published: Monday, April 28, 2025, 15:50 [IST]

ಬಾಲಿವುಡ್ ಬ್ಯೂಟಿ ಪೂಜಾ ಹೆಗ್ಡೆ ದಕ್ಷಿಣದ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಕನ್ನಡ ಚಿತ್ರದಲ್ಲಿ ನಟಿಸುವ ಆಸೆ ಕೂಡ ವ್ಯಕ್ತಪಡಿಸಿದ್ದಾರೆ. ಇನ್ನು 'ರೆಟ್ರೋ' ಚಿತ್ರದ ಮೂಲಕ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಈಗಾಗಲೇ 'ಕಣಿಮ' ಹಾಡಿನ ಮೂಲಕ ಮೋಡಿ ಮಾಡಿದ್ದಾರೆ. ಸದ್ಯ ಹಸಿರು ಬಣ್ಣದ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿ ಹಂಚಿಕೊಂಡಿದ್ದಾರೆ.

Pooja Hegde Shines Her Traditional Elegance With Green Saree
1/5

'ರೆಟ್ರೋ' ಚಿತ್ರದಲ್ಲಿ ನಟಿಸಿರುವ ಪೂಜಾ ಹೆಗ್ಡೆ ರೆಟ್ರೋ ಲುಕ್‌ನಲ್ಲೇ ದರ್ಶನ ಕೊಟ್ಟಿದ್ದಾರೆ. 70 ವರ್ಷಗಳ ಹಳೆಯ ತಮ್ಮ ಅಜ್ಜಿಯ ಸೀರೆ ಕಂಗೊಳಿಸಿದ್ದಾರೆ. ಫೋಟೊಗಳನ್ನು ಹಂಚಿಕೊಂಡಿದ್ದಾರೆ
Pooja Hegde Shines Her Traditional Elegance With Green Saree
2/5

ನನ್ನ ಅಜ್ಜಿ ಕಾಂಜೀವರಂ ಸೀರೆ ಉಟ್ಟುಕಳೆಯುತ್ತಿದ್ದ ದೃಶ್ಯಗಳು, ಮದುವೆಗೆ ಹೋಗಲು ಸಿದ್ಧವಾಗುವ ಮೊದಲು ಮನೆಯಲ್ಲಿದ್ದ ಮಲ್ಲಿಗೆಯ ತಾಜಾ ವಾಸನೆ ಮತ್ತು ಮೊದಲ ಮಳೆಯ ನಂತರ ಒದ್ದೆಯಾದ ಮಂಗಳೂರು ಮಣ್ಣಿನ ಸುವಾಸನೆ... ಓಹ್, ಸರಳವಾದ ವಸ್ತುಗಳಲ್ಲಿ ಎಷ್ಟು ಸೌಂದರ್ಯ ಎಂದು ಪೂಜಾ ಕ್ಯಾಪ್ಷನ್ ಕೊಟ್ಟಿದ್ದಾರೆ.
Pooja Hegde Shines Her Traditional Elegance With Green Saree
3/5

ಪರ್ಪಲ್ ಕಲರ್ ಬ್ಲೌಸ್ ಧರಿಸಿ, ಚಿನ್ನದ ಸರ, ಹಸಿರು ಗಾಜಿನ ಬಳೆ ತೊಟ್ಟು ಪೂಜಾ ಹೆಗ್ಡೆ ಮಿಂಚಿದ್ದಾರೆ. ಮಲ್ಲಿಗೆ ಮುಡಿದು, ಹಣೆಗೆ ಬಿಂದಿ ಇಟ್ಟು ಕಾಣಿಸಿಕೊಂಡಿದ್ದಾರೆ.
Pooja Hegde Shines Her Traditional Elegance With Green Saree
4/5

ಪೂಜಾ ಹೆಗ್ಡೆ ಕೈಯಲ್ಲಿ ಮಲ್ಲಿಗೆ ಹೂ ಹಿಡಿದು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಫೋಟೋಗಳು ವೈರಲ್ ಆಗಿ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡುತ್ತಿದ್ದಾರೆ.
Pooja Hegde Shines Her Traditional Elegance With Green Saree
5/5

ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ 'ರೆಟ್ರೋ' ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದೆ. 60, 70ರ ದಶಕದ ಕಥೆಯಲ್ಲಿ ಸೂರ್ಯ ಪತ್ನಿಯ ಪಾತ್ರದಲ್ಲಿ ಪೂಜಾ ನಟಿಸಿದ್ದಾರೆ.
X