bredcrumb

ತಂಗಿ ಜೊತೆ ತಿರುಪತಿಗೆ ಆಶಿಕಾ ಭೇಟಿ

By Umesh M
| Published: Wednesday, April 30, 2025, 17:33 [IST]

ಕನ್ನಡ ನಟಿ ಆಶಿಕಾ ರಂಗನಾಥ್ ಸಹೋದರಿ ಅನುಷಾ ಜೊತೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸೀರೆ ಉಟ್ಟು ಸಹೋದರಿಯರಿಬ್ಬರೂ ತಿಮ್ಮಪ್ಪನ ಸನ್ನಿಧಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಆಶಿಕಾ ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಸದ್ಯ ಆಕೆಯ ಫೋಟೊಗಳಿಗೆ ಲೈಕ್ಸ್, ಕಾಮೆಂಟ್ಸ್ ಮಾಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Ashika Ranganath Visits tirumala Tirupati with Sister Anusha
1/5

ನಟಿ ಆಶಿಕಾ ರಂಗನಾಥ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಸಹೋದರಿ ಅನುಷಾ ಜೊತೆ ತಿರುಪತಿಯ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
Ashika Ranganath Visits tirumala Tirupati with Sister Anusha
2/5

ಹಳದಿ, ಬಿಳಿ, ಗುಲಾಬಿ ಬಣ್ಣದ ಸೀರೆ ಉಟ್ಟು ಆಶಿಕಾ ಕಂಗೊಳಿಸಿದ್ದಾರೆ. ಹಣೆಗೆ ನಾಮ ಇಟ್ಟು ಕೈಗಳಿಗೆ ಬಳೆ ತೊಟ್ಟು ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಶಾಲು ಧರಿಸಿ ದೇವಸ್ಥಾನದ ಆವರಣದಲ್ಲಿ ಆಶಿಕಾ ಸುತ್ತಾಡಿದ್ದಾರೆ.
Ashika Ranganath Visits tirumala Tirupati with Sister Anusha
3/5

ಅಕ್ಷಯ ತೃತೀಯ ಸಮಯದಲ್ಲಿ ಸಹೋದರಿಯರು ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ತಿಮ್ಮಪ್ಪನದ ದರ್ಶನ ಪಡೆದು ಆಶಿಕಾ-ಅನುಷಾ ಪುನೀತರಾಗಿದ್ದಾರೆ.
Ashika Ranganath Visits tirumala Tirupati with Sister Anusha
4/5

ಕನ್ನಡದಲ್ಲಿ 'ಗತವೈಭವ', ತಮಿಳಿನ 'ಸರ್ದಾರ್-2' ಹಾಗೂ ತೆಲುಗಿನ 'ವಿಶ್ವಂಭರ' ಚಿತ್ರಗಳಲ್ಲಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ. ಈಗಾಗಲೇ ಒಂದೆರಡು ತೆಲುಗು ಚಿತ್ರದಲ್ಲಿ ಮಿಂಚಿದ್ದಾರೆ.
Ashika Ranganath Visits tirumala Tirupati with Sister Anusha
5/5

'ಅಮಿಗೊಸ್' ಚಿತ್ರದ ಮೂಲಕ ಆಶಿಕಾ ಟಾಲಿವುಡ್ ಪ್ರವೇಶಿಸಿದ್ದರು. ಬಳಿಕ 'ನಾ ಸಾಮಿರಂಗ' ಚಿತ್ರದಲ್ಲಿ ನಾಗಾರ್ಜುನ ಜೊತೆ ನಟಿಸಿದ್ದರು.
X