bredcrumb

ಕಿಕ್ಕೇರಿಸಿದ ಭೂಮಿ ಪೆಡ್ನೇಕರ್ ನ್ಯೂ ಲುಕ್, ಸ್ಟ್ರಾಪ್‌ಲೆಸ್ ಡ್ರೆಸ್‌ನಲ್ಲಿ ಮಿಂಚಿದ ಬಾಲಿವುಡ್ ಬೆಡಗಿ..!

By Umesh M
| Published: Monday, April 28, 2025, 11:36 [IST]

ಕ್ಷೇತ್ರ ಯಾವುದೇ ಇರಲಿ ಚಾಲ್ತಿಯಲ್ಲಿ ಇದ್ದರಷ್ಟೇ ಬೆಲೆ. ಇಲ್ಲದೇ ಇದ್ದರೆ ಎಷ್ಟೇ ಜಾಣನಾದರೂ ಜಗತ್ತು ಕೋಣ ಎಂದೇ ಅಂದುಕೊಳ್ಳುತ್ತೆ. ಗೆದ್ದೆತ್ತಿನ ಬಾಲವನ್ನೇ ಹಿಡಿಯುತ್ತೆ. ಈ ಕಾರಣಕ್ಕೆ ಚಲಾವಣೆಯಲ್ಲಿರಲು ಅನೇಕರು ಅನೇಕ ತರಹದ ಸರ್ಕಸ್ ಗಳನ್ನ ಇಲ್ಲಿ ಮಾಡ್ತಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಂತೂ ನಾನಾ ತರಹದ ಕಸರತ್ತುಗಳನ್ನ ಅನೇಕರು ಮಾಡಲು ಮುಂದಾಗ್ತಾರೆ. ಇದಕ್ಕೆ ಭೂಮಿ ಪೆಡ್ನೇಕರ್ ಸದ್ಯದ ತಾಜಾ ಉದಾಹರಣೆ

Bhumi Pednekar Dazzles in Satin Splendor, Radiating Timeless Elegance with Every Step
1/5

ಭೂಮಿ ಪೆಡ್ನೇಕರ್.. ಒಂದ್ಕಾಲದ ಗಜಗಾಮಿನಿ. ಧಮ್ ಲಗಾಕೇ ಐಸಾ ಚಿತ್ರದ ಮೂಲಕ ಚಿತ್ರರಂಗವನ್ನ ಪ್ರವೇಶಿಸಿದ ಭೂಮಿ, ಸದ್ಯ ಎಲ್ಲರ ಗಮನ ಸೆಳೆಯಲು ನಾನಾ ಕಸರತ್ತು ಮಾಡುತ್ತಿದ್ದಾರೆ. ಇದಕ್ಕೆ ಇನ್ನೊಂದು ಕೈಗನ್ನಡಿ ಎಂಬಂತೆ ಸದ್ಯ ಭೂಮಿ ಸ್ಟ್ರಾಪ್‌ಲೆಸ್ ಐವರಿ ಸ್ಯಾಟಿನ್ ಗೌನ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ.
Bhumi Pednekar Dazzles in Satin Splendor, Radiating Timeless Elegance with Every Step
2/5

ಭೂಮಿ ಅವರ ಈ ಫೋಟೊಗಳು ಸದ್ಯ ಅನೇಕರ ಕಣ್ಣು ಕುಕ್ಕುತ್ತಿವೆ. ಕೆಲವರು ಭೂಮಿ ಅವರ ಸೌಂದರ್ಯವನ್ನು ಹಾಡಿ ಹೊಗಳುತ್ತಿದ್ದಾರೆ. ಇನ್ನೂ ಕೆಲವರು ಹೇಗಿದ್ದ ಭೂಮಿ ಹೇಗಾದರು ಎಂದು ಮರಗುತ್ತಿದ್ದಾರೆ.
Bhumi Pednekar Dazzles in Satin Splendor, Radiating Timeless Elegance with Every Step
3/5

ಸ್ಯಾಟಿನ್ ತರಹದ ಬಟ್ಟೆಯಿಂದ ಮಾಡಿದ ಸ್ಟ್ರಾಪ್‌ಲೆಸ್, ಫಾರ್ಮ್-ಫಿಟ್ಟಿಂಗ್ ಗೌನ್‌ನಲ್ಲಿ ಭೂಮಿ ಫೆಡ್ನೇಕರ್ ಕಂಗೊಳಿಸಿದ್ದು, ಗೌನ್‌ ಗೆ ಹೊಂದಿಕೆಯಾಗುವಂತೆ ಭೂಮಿ ಹಾಕಿಕೊಂಡ ನೆಕ್ಲೇಸ್‌ ಸದ್ಯ ಅನೇಕರ ಕಣ್ಮನ ಸೆಳೆಯುತ್ತಿದೆ.
Bhumi Pednekar Dazzles in Satin Splendor, Radiating Timeless Elegance with Every Step
4/5

ಇನ್ನುಳಿದಂತೆ ಭೂಮಿ ಪೆಡ್ನೇಕರ್ ಗೆ ಈಗ 34ರ ಹರೆಯ. ಬಾಲಿವುಡ್‌ಗೆ ಬಂದು 09 ವರ್ಷಗಳಾಗಿವೆ. ಈ 09 ವರ್ಷದಲ್ಲಿ ಭೂಮಿ ಪೆಡ್ನೇಕರ್ ಖಾಲಿ ಕುಳಿತ ಉದಾಹರಣೆ ಇಲ್ಲ. ಅದರಲ್ಲಿಯೂ 2019ರ ನಂತರ ವರ್ಷಕ್ಕೆ ಮೂರು ನಾಲ್ಕು ಸಿನಿಮಾಗಳನ್ನ ಮಾಡುತ್ತಾ ಬಂದವರು ಭೂಮಿ ಪೆಡ್ನೇಕರ್.
Bhumi Pednekar Dazzles in Satin Splendor, Radiating Timeless Elegance with Every Step
5/5

ಮಿಕ್ಕಂತೆ ಭೂಮಿ ಪೆಡ್ನೇಕರ್ ಕೈಯಲ್ಲಿ ಸದ್ಯಕ್ಕೆ ಕೇವಲ ಒಂದು ಸಿನಿಮಾ ಮಾತ್ರ ಇದೆ. ಎಲ್ಲರಿಗೆ ಗೊತ್ತಿರುವಂತೆ ಬಾಲಿವುಡ್ ನಲ್ಲಿ ಸದ್ಯಕ್ಕೆ ಹೊರಬರದ್ದೇ ಪಾರುಪತ್ಯ. ಸದ್ಯ ಭೂಮಿಯ ಈ ಅವತಾರ ಅನೇಕರ ಹೃದಯವನ್ನು ಗೆಲ್ಲುತ್ತಿದೆ.
X