bredcrumb

ಬಿಳಿ ಬಣ್ಣದ ಸೀರೆಯಲ್ಲಿ ಜ್ಯೋತಿ ಪೂರ್ವಜ್ ಮಿಂಚು

By Kannada Filmibeat Photos
| Published: Saturday, March 22, 2025, 18:20 [IST]

ಕರ್ನಾಟಕದ ಮಡಿಕೇರಿಯಲ್ಲಿ ಹುಟ್ಟಿ ಪುತ್ತೂರಿನಲ್ಲಿ ಓದಿ ಬೆಳೆದ ನಟಿ ಜ್ಯೋತಿ ಪೂರ್ವಜ್ ಈಗ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಸುಕು ಪೂರ್ವಜ್ ಜೊತೆ ಎರಡನೇ ಮದುವೆ ಆಗಿ ಸಿನಿಮಾ ಹಾಗೂ ವೆಬ್‌ ಸೀರಿಸ್‌ಗಳಲ್ಲಿ ಮಿಂಚುತ್ತಿದ್ದಾರೆ. ಸದಾ ಹಾಟ್ ಫೋಟೊಗಳನ್ನು ಪೋಸ್ಟ್ ಮಾಡುತ್ತಿದ್ದ ಚೆಲುವೆ ಸೀರೆ ಉಟ್ಟು ಕಂಗೊಳಿಸಿದ್ದಾರೆ. 

Actress Jyothi Poorvaj Serves Fiery Look In white Saree
1/5

ಕನ್ನಡ ಕಿರುತೆರೆ ನಟಿ ಜ್ಯೋತಿ ರೈ ಈಗ ಜ್ಯೋತಿ ಪೂರ್ವಜ್ ಆಗಿ ತೆಲುಗು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಸದ್ಯ ಹೊಸ ಫೋಟೊಶೂಟ್ ಮೂಲಕ ಗಮನ ಸೆಳೆದಿದ್ದಾರೆ.
Actress Jyothi Poorvaj Serves Fiery Look In white Saree
2/5

ತೆಲುಗು ನಿರ್ದೇಶಕ ಸುಕು ಪೂರ್ವಜ್ ಜೊತೆ ಜ್ಯೋತಿ 2ನೇ ಮದುವೆ ಆಗಿದ್ದಾರೆ. ಪತಿ ನಿರ್ದೇಶನದ 'ಕಿಲ್ಲರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಬಿಳಿ ಬಣ್ಣದ ಸೀರೆಯಲ್ಲಿ ಫೋಟೊಶೂಟ್ ಮಾಡಿಸಿದ್ದಾರೆ.
Actress Jyothi Poorvaj Serves Fiery Look In white Saree
3/5

ಜ್ಯೋತಿ ಕೆಂಪು ಬಣ್ಣದ ಬಾರ್ಡರ್ ಇರುವ ಸೀರೆ ಉಟ್ಟು ಕೆಂಪು ಬಣ್ಣದ ರವಿಕೆ ತೊಟ್ಟಿದ್ದಾರೆ. ಸಾಂಪ್ರದಾಯಕ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ಕಿವಿಯಲ್ಲಿ ಜುಮುಕಿ ಬಲಗೈಯಲ್ಲಿ ಬಳೆ, ಎಡಗೈಗೆ ವಾಚ್ ಧರಿಸಿ ಕಾಣಿಸಿಕೊಂಡಿದ್ದಾರೆ.
Actress Jyothi Poorvaj Serves Fiery Look In white Saree
4/5

ಭಿನ್ನ ವಿಭಿನ್ನ ಕೋನಗಳಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿರುವ ಜ್ಯೋತಿ ಪೂರ್ವಜ್ ಅಭಿಮಾನಿಗಳ ಮನಗೆದ್ದಿದ್ದಾರೆ. ಸೀರೆಯಲ್ಲೂ ನೀವು ಸಖರ್ ಹಾಟ್ ಎಂದು ಪಡ್ಡೆ ಹುಡುಗರು ಕಾಮೆಂಟ್ ಮಾಡಿದ್ದಾರೆ.
Actress Jyothi Poorvaj Serves Fiery Look In white Saree
5/5

ಕನ್ನಡದ ಹಲವು ಧಾರಾವಾಹಿಗಳಲ್ಲಿ ಜ್ಯೋತಿ ನಟಿಸಿದ್ದಾರೆ. 'ಗುಪ್ಪೆಡಂತ ಮನಸು' ತೆಲುಗು ಧಾರಾವಾಹಿಯಲ್ಲಿ ನಟಿಸಿ ಟಾಲಿವುಡ್‌ನಲ್ಲಿ ಮೋಡಿ ಮಾಡಿದರು.
X