bredcrumb

ಮೇಘಾ ಶೆಟ್ಟಿಯ 'ಬ್ಲ್ಯಾಕ್' ಮ್ಯಾಜಿಕ್‌ಗೆ ಪಡ್ಡೆ ಹುಡುಗರು ಫಿದಾ..!

By Kannada Filmibeat Photos
| Published: Sunday, April 20, 2025, 12:41 [IST]

 ಮೇಘಾ ಶೆಟ್ಟಿ ಚಿತ್ರರಂಗದಲ್ಲಿ ಬೆಳೆಯುತ್ತಿರುವ ನಟಿ. ಆಗಾಗ ತಮ್ಮ ಸ್ಟೈಲಿಷ್ ಲುಕ್ ನಿಂದ ಅಭಿಮಾನಿಗಳ ಮನಸನ್ನು ಕದಿಯುವ ಈ ಚೋರಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಅಪ್ಲೋಡ್ ಮಾಡುತ್ತಾ ಅಭಿಮಾನಿಗಳಿಗೆ ಬಹಳ ಖುಷಿಯನ್ನು ನೀಡುತ್ತಿರುತ್ತಾರೆ. ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ. ಮೊದಲಿಗೆ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಬಣ್ಣ ಹಚ್ಚಿದ ಮೇಘಾ ಶೆಟ್ಟಿ ಅನು ಸಿರಿಮನೆ ಎಂದೇ ಖ್ಯಾತಿ ಗಳಿಸಿದ್ದರು.  ಇಂಥಾ ಮೇಘಾ ಶೆಟ್ಟಿ ಸದ್ಯ ಹೊಸ ಫೋಟೊಶೂಟ್ ಮೂಲಕ ಕಣ್ಮನ ಸೆಳೆಯುತ್ತಿದ್ದಾರೆ. 

Actress Megha Shetty Looks Stunning in Black Dress
1/5

ಅನು ಸಿರಿಮನೆ ಎಂಬ ಪಾತ್ರದ ಮೂಲಕ ಎಲ್ಲರ ಮನಸ್ಸನ್ನೂ ಗೆದ್ದ ನಟಿ ಮೇಘ ಶೆಟ್ಟಿ. ಮೇಘ ಶೆಟ್ಟಿ ಸಾಕಷ್ಟು ಸಿನಿಮಾದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.ಆದರೆ ಅವರು ಮೊದಲು ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಎಲ್ಲರ ಮನೆ ಮಾತಾದ ನಟಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೇಘ ಶೆಟ್ಟಿ ಮಾಡರ್ನ್ ಡ್ರೆಸ್ ಗಳ ಮೊರೆ ಹೋಗುತ್ತಿದ್ದಾರೆ. ಹಾಗೆಯೇ ಇದೀಗ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಫೋಟೋ ನೋಡುಗರಿಗೆ ಬಹಳ ಖುಷಿ ತಂದಿದೆ.
Actress Megha Shetty Looks Stunning in Black Dress
2/5

ಕಪ್ಪು ಬಣ್ಣದ ಬಟ್ಟೆ ತೊಟ್ಟ ನಟಿ ನೋಡಲು ಬಹಳ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ. ಮೇಘಾ ಶೆಟ್ಟಿ ಫೋಟೋ ನೋಡಿದ ಅನೇಕ ಅಭಿಮಾನಿಗಳು ನೀವು ನೋಡಲು ತುಂಬಾ ಚೆನ್ನಾಗಿದ್ದೀರಾ, ಲುಕ್ಕಿಂಗ್ ಬ್ಯೂಟಿಫುಲ್ ಎಂದು ಕೊಂಡಾಡುತ್ತಿದ್ದಾರೆ. ಫೋಟೋಗೆ ಬಹಳಷ್ಟು ಕಾಮೆಂಟ್ ಗಳು ಬರುತ್ತಿದ್ದು ಅಭಿಮಾನಿಗಳ ಹೃದಯವನ್ನು ಈ ಫೋಟೊಗಳು ಗೆದ್ದಿವೆ.
Actress Megha Shetty Looks Stunning in Black Dress
3/5

ಕಪ್ಪು ಬಣ್ಣದ ಗೌನ್ ಧರಿಸಿದ ಮೇಘಾ ಶೆಟ್ಟಿ, ಕಿವಿಗೆ ಒಲೆಯನ್ನು ಧರಿಸಿಕೊಂಡು ಫೋಟೋ ಗೆ ಪೋಸ್ ನೀಡಿದ್ದಾರೆ. ಹಾಗೆಯೇ ಮುಖಕ್ಕೆ ಸಿಂಪಲ್ ಮೇಕಪ್ ಮಾಡಿ ಮತ್ತಷ್ಟು ಜನರಿಗೆ ಇಷ್ಟವಾಗಿದ್ದಾರೆ.
Actress Megha Shetty Looks Stunning in Black Dress
4/5

ಸೋಶಿಯಲ್ ಮೀಡಿಯಾದಲ್ಲಿ ಮೇಘಾ ಶೆಟ್ಟಿ ಸಖತ್ ಆಕ್ಟಿವ್ ಆಗಿದ್ದು ಆಗಾಗ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಮೇಘಾ ಶೆಟ್ಟಿ ಕಪ್ಪು ಬಣ್ಣದ, ಸ್ಲೀವ್ ಲೆಸ್, ಥೈ ಹೈ ಸ್ಲಿಟ್ ಶಾರ್ಟ್ ಡ್ರೆಸ್ ಧರಿಸಿದ್ದಾರೆ. ಈ ಡ್ರೆಸ್ ಮೇಘ ಶೆಟ್ಟಿಯ ಅಂದವನ್ನು ಮತ್ತಷ್ಟು ದುಪ್ಪಟ್ಟುಗೊಳಿಸಿದೆ.
Actress Megha Shetty Looks Stunning in Black Dress
5/5

ಇನ್ನುಳಿದಂತೆ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದವರು ಮೇಘಾ ಶೆಟ್ಟಿ. ಕನ್ನಡ ಕಿರುತೆರೆಯ ಮೂಲಕ ಕನ್ನಡಿಗರ ಮನೆ ಮಗಳಾದ ಈ ಅನು ಸಿರಿಮನೆ ಆ ನಂತರ ಬೆಳ್ಳಿತೆರೆಗೆ ಬಂದರು. ತ್ರಿಬಲ್ ರೈಡಿಂಗ್.. ದಿಲ್ ಪಸಂದ್.. ಕೈವ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಮೇಘಾ ಶೆಟ್ಟಿ ಸದ್ಯ ತಮಿಳು ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ತಮಿಳು ಚಿತ್ರರಂಗದ ನಾಯಕ ಕಂ ನಿರ್ದೇಶಕ ಶಶಿಕುಮಾರ್ ಈ ಚಿತ್ರದಲ್ಲ ಹೀರೋ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
X