By
Umesh M
| Published: Tuesday, March 25, 2025, 10:36 [IST]
ಅಜಯ್ ದೇವಗನ್ ನಟಿಸಿದ ಸೂಪರ್ ಹಿಟ್ ಸಿನಿಮಾಗಳ ಪಟ್ಟಿಯಲ್ಲಿ 'ರೇಡ್' ಕೂಡ ಒಂದು. ಈ ಸಿನಿಮಾದ ಸೀಕ್ವೆಲ್ 'ರೇಡ್ 2' ರಿಲೀಸ್‌ಗೆ ರೆಡಿಯಾಗಿದೆ. ಇದು 2025ರ ಮೇ 1 ರಂದು ರಿಲೀಸ್ ಆಗಿದೆ. 'ರೇಡ್ 2'ನಲ್ಲೂ ಮೊದಲನೇ ಪಾರ್ಟ್ ನಂತೆಯೇ ಸ್ಟೋರಿ, ಡ್ರಾಮಾ, ಆಕ್ಷನ್ ಅನ್ನು ನಿರೀಕ್ಷೆ ಮಾಡಬಹುದು. ಅಜಯ್ ದೇವಗನ್ ಜೊತೆಗೆ ರಿತೇಶ್ ದೇಶ್‌ಮುಖ್ ಹಾಗೂ ವಾಣಿ ಕಪೂರ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
1/5
ಕಾರ್ಮಿಕರ ದಿನದಂದು ಮತ್ತೊಮ್ಮೆ ರೇಡ್ ಮಾಡಲು ಬರಲಿರೋ ಅಜಯ್ ದೇವಗನ್ | Ajay Devgn Returns As Amay Patnaik In Raid 2 Is Releasing On 1st May 2025 - Filmibeat Kannada
/photo-gallery/ajay-devgn-returns-as-amay-patnaik-in-raid-2-is-releasing-on-1st-may-2025-fb101684.html
ಬಾಲಿವುಡ್ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲೊಂದು 'ರೇಡ್ 2'. ಇದು 2018ರಲ್ಲಿ ತೆರೆಕಂಡಿದ್ದ 'ರೇಡ್' ಸಿನಿಮಾದ ಸೀಕ್ವೆಲ್. ಈ ಸಿನಿಮಾ 2025ರ ಮೇ 1ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ 'ರೇಡ್'ನ ಥ್ರಿಲ್, ಡ್ರಾಮ ಹಾಗೂ ಸಸ್ಪೆನ್ಸ್ ಅನ್ನು ಮತ್ತೆ ತೆರೆಮೇಲೆ ತರುತ್ತಿದೆ ಎಂದು ನಿರೀಕ್ಷಿಸಲಾಗಿದೆ. ಈ ಸಿನಿಮಾ ಟ್ಯಾಗ್ ಲೈನ್ ಕೂಡ ಅಷ್ಟೇ ಮಜವಾಗಿದೆ. "ಹೊಸ ನಗರ, ಹೊಸ ಫೈಲ್.. ಹಾಗೂ ಅಮೈ ಪಟ್ನಾಯಕ್ ಹೊಸ ರೇಡ್" ಎಂದು ಹೇಳಲಾಗಿದೆ.
2/5
ಕಾರ್ಮಿಕರ ದಿನದಂದು ಮತ್ತೊಮ್ಮೆ ರೇಡ್ ಮಾಡಲು ಬರಲಿರೋ ಅಜಯ್ ದೇವಗನ್ | Ajay Devgn Returns As Amay Patnaik In Raid 2 Is Releasing On 1st May 2025 - Filmibeat Kannada
/photo-gallery/ajay-devgn-returns-as-amay-patnaik-in-raid-2-is-releasing-on-1st-may-2025-fb101684.html#photos-1
ಅಜಯ್ ದೇವಗನ್ ಈ ಸಿನಿಮಾದಲ್ಲಿ ಐಆರ್‌ಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಭ್ರಷ್ಟರಿಗೆ ದು:ಸಪ್ನವಾಗಿ ಕಾಡುವ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಹೊಸ ಮಿಷನ್‌ನೊಂದಿಗೆ ಹೊಸದೊಂದು ನಗರದಲ್ಲಿ ರೇಡ್ ಮಾಡುವುದಕ್ಕೆ ಹೊರಟಿದ್ದಾರೆ. ಈ ಸಿನಿಮಾದಲ್ಲಿ ಇನ್ನೊಂದು ಪವರ್‌ಫುಲ್ ಪರ್ಫಾಮೆನ್ಸ್ ಅನ್ನು ನೀಡಲಿದ್ದಾರೆ.
3/5
ಕಾರ್ಮಿಕರ ದಿನದಂದು ಮತ್ತೊಮ್ಮೆ ರೇಡ್ ಮಾಡಲು ಬರಲಿರೋ ಅಜಯ್ ದೇವಗನ್ | Ajay Devgn Returns As Amay Patnaik In Raid 2 Is Releasing On 1st May 2025 - Filmibeat Kannada
/photo-gallery/ajay-devgn-returns-as-amay-patnaik-in-raid-2-is-releasing-on-1st-may-2025-fb101684.html#photos-2
'ರೇಡ್ 2'ನಲ್ಲಿ ಅಜಯ್ ದೇವಗನ್ ಜೊತೆಗೆ ರಿತೇಶ್ ದೇಶ್‌ಮುಖ್, ವಾಣಿ ಕಪೂರ್ ಹಾಗೂ ರಜತ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ತೆರೆಮೇಲೆ ಇನ್ನಷ್ಟು ಸಿನಿಮ್ಯಾಟಿಕ್ ಅನುಭವ ನೀಡಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
4/5
ಕಾರ್ಮಿಕರ ದಿನದಂದು ಮತ್ತೊಮ್ಮೆ ರೇಡ್ ಮಾಡಲು ಬರಲಿರೋ ಅಜಯ್ ದೇವಗನ್ | Ajay Devgn Returns As Amay Patnaik In Raid 2 Is Releasing On 1st May 2025 - Filmibeat Kannada
/photo-gallery/ajay-devgn-returns-as-amay-patnaik-in-raid-2-is-releasing-on-1st-may-2025-fb101684.html#photos-3
2018ರಲ್ಲಿ ರೇಡ್ ಸಿನಿಮಾವನ್ನು ರಾಜ್ ಕುಮಾರ್ ಗುಪ್ತಾ ನಿರ್ದೇಶನ ಮಾಡಿದ್ದರು. ತೆರೆಮೇಲೆ ಅದ್ಭುತವಾಗಿ ಕಥೆ ಹೇಳಿ ಪ್ರೇಕ್ಷಕರನ್ನು ಸೆಳೆದಿದ್ದರು. ಸಿನಿಮಾ ನೋಡುತ್ತಿದ್ದ ಜನರನ್ನು ಸೀಟಿನ ತುದಿಯಲ್ಲಿ ಕೂರುವಂತೆ ಮಾಡಿದ್ದರು. ಈಗ ರೇಡ್ 2 ಮೂಲಕ ಮತ್ತೊಂದು ಮಾಸ್ಟರ್ ಪೀಸ್ ನೀಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
5/5
ಕಾರ್ಮಿಕರ ದಿನದಂದು ಮತ್ತೊಮ್ಮೆ ರೇಡ್ ಮಾಡಲು ಬರಲಿರೋ ಅಜಯ್ ದೇವಗನ್ | Ajay Devgn Returns As Amay Patnaik In Raid 2 Is Releasing On 1st May 2025 - Filmibeat Kannada
/photo-gallery/ajay-devgn-returns-as-amay-patnaik-in-raid-2-is-releasing-on-1st-may-2025-fb101684.html#photos-4
ಆದಾಯ ತೆರೆಗೆ ವಂಚನೆ ಮಾಡಿದವರಿಗೆ ಬಿಸಿ ಮುಟ್ಟಿಸುವ ಪಾತ್ರದಲ್ಲಿ ಅಜಯ್ ದೇವಗನ್ ಮತ್ತಷ್ಟು ಪವರ್‌ಫುಲ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅದ್ದೂರಿ ಆಕ್ಷನ್ ಸೀಕ್ವೆನ್ಸ್, ಗ್ರಿಪ್ ಆಗಿರುವ ಕಥೆಯನ್ನು ನಿರೀಕ್ಷೆ ಮಾಡಬಹುದಾಗಿದೆ. ರೇಡ್ 2 ಸಿನಿಮಾದಲ್ಲಿ ಅಮೈ ಪಾಟ್ನಾಯಕ್ ಜರ್ನಿಯನ್ನು ನೋಡಬಹುದಾಗಿದೆ.