bredcrumb

ಅಜಿತ್ 'ಗುಡ್‌ ಬ್ಯಾಡ್ ಅಗ್ಲಿ' ಹೊಸ ದಾಖಲೆ

By Umesh M
| Published: Monday, April 21, 2025, 15:23 [IST]

ಅಜಿತ್ ನಟನೆಯ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲುವಿನ ಓಟ ಮುಂದುವರೆಸಿದೆ. ಮಿಶ್ರಪ್ರತಿಕ್ರಿಯೆ ಪಡೆದರೂ ಅಭಿಮಾನಿಗಳನ್ನು ರಂಜಿಸುವಲ್ಲಿ ಸಿನಿಮಾ ಯಶಸ್ಸು ಕಂಡಿದೆ. ಈಗಾಗಲೇ 210 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. ಚಿತ್ರದಲ್ಲಿ ವಿಂಟೇಜ್ ಅಜಿತ್ ಅವರನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ನೆಚ್ಚಿನ ನಟನನ್ನು ಅದಿಕ್ ರವಿಚಂದ್ರನ್ ತೆರೆಮೇಲೆ ಸೊಗಸಾಗಿ ತೋರಿಸಿ ಗೆದ್ದಿದ್ದಾರೆ. ಅಜಿತ್ ನಟನೆಯ ಎಲ್ಲಾ ಸಿನಿಮಾಗಳ ಬಾಕ್ಸಾಫೀಸ್ ಗಳಿಕೆ ಮೀರಿ 'ಗುಡ್ ಬ್ಯಾಡ್ ಅಗ್ಲಿ' ಗೆದ್ದಿದೆ. 

Ajith's Good Bad Ugly creates a box office storm, becoming his all-time best
1/4

ಅಜಿತ್ ನಟನೆಯ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಏಪ್ರಿಲ್ 10ಕ್ಕೆ ತೆರೆಗೆ ಬಂದಿತ್ತು. ಭಿನ್ನ ವಿಭಿನ್ನ ಅವತಾರಗಳಲ್ಲಿ ಅಜಿತ್ ಪ್ರೇಕ್ಷಕರನ್ನು ರಂಜಿಸಿದ್ದಾರೆ. AK ಆರ್ಭಟಕ್ಕೆ ಬಾಕ್ಸಾಫೀಸ್ ಶೇಕ್ ಆಗ್ತಿದೆ. ಸಿನಿಮಾ ತೆರೆಕಂಡ 11 ದಿನಕ್ಕೆ 200 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ.
Ajith's Good Bad Ugly creates a box office storm, becoming his all-time best
2/4

ತಮಿಳಿನಲ್ಲಿ ದಳಪತಿ ವಿಜಯ್ ಬಳಿಕ ಹೆಚ್ಚು ಕ್ರೇಜ್ ಹೊಂದಿರುವ ನಟ ಅಜಿತ್. ಆದರೆ ದೊಡ್ಡಮಟ್ಟದಲ್ಲಿ ಅವರ ಸಿನಿಮಾಗಳು ಸದ್ದು ಮಾಡುತ್ತಿರಲಿಲ್ಲ. ಆದರೆ 'ಗುಡ್ ಬ್ಯಾಡ್ ಅಗ್ಲಿ' ಅದನ್ನು ಸಾಬೀತು ಮಾಡಿ ತೋರಿಸಿದೆ. ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಐಪಿಎಲ್ ಆರ್ಭಟದ ನಡುವೆಯೂ ಸಿನಿಮಾ ಗಳಿಕೆ ಚೆನ್ನಾಗಿದೆ.
Ajith's Good Bad Ugly creates a box office storm, becoming his all-time best
3/4

ಅದಿಕ್ ರವಿಚಂದ್ರನ್ ನಿರ್ದೇಶದ ಆಕ್ಷನ್ ಕಾಮೆಡಿ ಸಿನಿಮಾ 'ಗುಡ್ ಬ್ಯಾಡ್ ಅಗ್ಲಿ'. ತೆಲುಗಿನ ಮೈತ್ರಿ ಮೂವಿಮೇಕರ್ಸ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದೆ. ಅಂದಾಜು 250 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಭರ್ಜರಿ ಬೆಲೆಗೆ ಚಿತ್ರದ ಓಟಿಟಿ ರೈಟ್ಸ್ ಕೂಡ ಮಾರಾಟವಾಗಿದೆ.
Ajith's Good Bad Ugly creates a box office storm, becoming his all-time best
4/4

ಎರಡು ತಿಂಗಳ ಹಿಂದೆ ಬಂದಿದ್ದ 'ವಿಡಾಮುಯರ್ಚಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಆದರೂ ಸಿನಿಮಾ ಗೆಲುವಿನ ದಡ ಸೇರಿತ್ತು. ಎರಡು ತಿಂಗಳ ಅಂತರದಲ್ಲಿ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಬಿಡುಗಡೆಯಾಗಿದೆ. 95 ಕೋಟಿ ರೂ.ಗೂ ನೆಟ್‌ಫ್ಲಿಕ್ಸ್ ಚಿತ್ರದ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ.
X