By
Umesh M
| Published: Wednesday, January 22, 2025, 09:36 [IST]
ತೆಲುಗಿನ 'ಕಣ್ಣಪ್ಪ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಮಂಚು ವಿಷ್ಣು ಕಣ್ಣಪ್ಪನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಶಿವನ ಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಪ್ರಭಾಸ್, ಮೋಹನ್ ಲಾಲ್, ಕಾಜೋಲ್ ಅಗರ್‌ವಾಲ್ ಸೇರಿದಂತೆ ಹಲವರು ಚಿತ್ರದ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಶಿವನಾಗಿ ಅಕ್ಷಯ್ ಕುಮಾರ್ ಮಿಂಚಿದ್ದಾರೆ. ಅವರ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
1/4
'ಕಣ್ಣಪ್ಪ' ಚಿತ್ರದಲ್ಲಿ ಶಿವನಾಗಿ ಅಕ್ಷಯ್ ಕುಮಾರ್ ಮೋಡಿ | Akshay Kumar Character Look Poster From Kannappa Movie Goes Viral, See Pics - Filmibeat Kannada
/photo-gallery/akshay-kumar-character-look-poster-from-kannappa-movie-goes-viral-see-pics-fb100035.html
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡರ ಕಣ್ಣಪ್ಪ ಕಥೆಯನ್ನು ಮತ್ತೊಮ್ಮೆ ತೆರೆಗೆ ತರಲಾಗುತ್ತಿದೆ. ತೆಲುಗು ನಟ ಮಂಜು ವಿಷ್ಣು ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಇನ್ನು 'ಕಣ್ಣಪ್ಪ'ನ ಇಷ್ಟದೈವ ಶಿವನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರದ ಲುಕ್ ರಿವೀಲ್ ಆಗಿದೆ.
2/4
'ಕಣ್ಣಪ್ಪ' ಚಿತ್ರದಲ್ಲಿ ಶಿವನಾಗಿ ಅಕ್ಷಯ್ ಕುಮಾರ್ ಮೋಡಿ | Akshay Kumar Character Look Poster From Kannappa Movie Goes Viral, See Pics - Filmibeat Kannada
/photo-gallery/akshay-kumar-character-look-poster-from-kannappa-movie-goes-viral-see-pics-fb100035.html#photos-1
ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಕಲಾವಿದರನ್ನು ಸೇರಿಸಿಕೊಂಡು 'ಕಣ್ಣಪ್ಪ' ಚಿತ್ರ ಕಟ್ಟಿಕೊಡಲಾಗುತ್ತಿದೆ. ಮುಖೇಶ್ ಕುಮಾರ್ ಸಿಂಗ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಂಚು ವಿಷ್ಣು ತಂದೆ ಮೋಹನ್ ಬಾಬು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
3/4
'ಕಣ್ಣಪ್ಪ' ಚಿತ್ರದಲ್ಲಿ ಶಿವನಾಗಿ ಅಕ್ಷಯ್ ಕುಮಾರ್ ಮೋಡಿ | Akshay Kumar Character Look Poster From Kannappa Movie Goes Viral, See Pics - Filmibeat Kannada
/photo-gallery/akshay-kumar-character-look-poster-from-kannappa-movie-goes-viral-see-pics-fb100035.html#photos-2
'ಓ ಮೈ ಗಾಡ್' ಚಿತ್ರದಲ್ಲಿ ಅಕ್ಷಯ್ ಕುಮಾರ್ ಶ್ರೀಕೃಷ್ಣನ ಪಾತ್ರದಲ್ಲಿ ನಟಿಸಿದ್ದರು. 'ಓ ಮೈ ಗಾಡ್'-2 ಚಿತ್ರದಲ್ಲಿ ಶಿವನಾಗಿ ಕಾಣಿಸಿಕೊಂಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಅದನ್ನು ಬದಲಿಸಿದ್ದರು ಎನ್ನಲಾಗಿತ್ತು. ಅಂತೂ ಇಂತೂ ಶಿವನಾಗಿ ಮತ್ತೊಮ್ಮೆ ಅಕ್ಕಿ ನಟಿಸುವಂತಾಗಿದೆ.
4/4
'ಕಣ್ಣಪ್ಪ' ಚಿತ್ರದಲ್ಲಿ ಶಿವನಾಗಿ ಅಕ್ಷಯ್ ಕುಮಾರ್ ಮೋಡಿ | Akshay Kumar Character Look Poster From Kannappa Movie Goes Viral, See Pics - Filmibeat Kannada
/photo-gallery/akshay-kumar-character-look-poster-from-kannappa-movie-goes-viral-see-pics-fb100035.html#photos-3
'ಕಣ್ಣಪ್ಪ' ಚಿತ್ರವನ್ನು ಏಪ್ರಿಲ್ 25ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬರಲಿದೆ. ವರದರಾಜ್ ಚಿಕ್ಕಬಳ್ಳಾಪುರ ಕನ್ನಡ ವರ್ಷನ್ ಡಬ್ಬಿಂಗ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ.