bredcrumb

ಬೇಸಿಗೆ ಬಿಸಿಯಲ್ಲಿ ಬಾಲಿವುಡ್‌ ನಟಿಯರು ಥಂಡಾ ಥಂಡಾ ಕೂಲ್ ಕೂಲ್!

By Kannada Filmibeat Photos
| Published: Sunday, April 20, 2025, 12:45 [IST]

ಬೇಸಿಗೆಯ ಬಿಸಿ ಏರುತ್ತಿದ್ದಂತೆ ಸೆಲೆಬ್ರಿಟಿಗಳು ರಜೆಯ ಮೂಡಿಗೆ ಜಾರಿದ್ದಾರೆ. ಸ್ವಿಮ್ ಸೂಟ್‌ಗೆ ಧರಿಸಿ ಬೀಚ್‌ ಕಡೆಗೆ  ಮುಖ ಮಾಡಿದ್ದಾರೆ. ಬಾಲಿವುಡ್ ನಟಿಯರಂತೂ ಬೀಚ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಬಾಲಿವುಡ್‌ನ ಸ್ಟೈಲಿಶ್ ನಟಿಯರು ಸ್ವಿಮ್‌ನಲ್ಲಿ ಪೋಸ್ ಕೊಟ್ಟಿದ್ದು, ಆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. 

Alia Bhattbeach side outfit
1/4

ಆಲಿಯಾ ಭಟ್ ಬಾಲಿವುಡ್‌ನಲ್ಲಿ ಟಾಪ್ ನಟಿ. ಫ್ಯಾಷನ್ ಸೆನ್ಸ್‌ನಲ್ಲಿ ಈ ನಟಿಯನ್ನು ಮೀರಿಸುವವರು ಮತ್ತೊಬ್ಬರಿಲ್ಲವೇನೋ ಅಂತ ಅನಿಸುತ್ತೆ. ಸಿಂಪಲ್ ಆಗಿರುವ ಸ್ವಿಮ್ ಸೂಟ್ ಧರಿಸಿ ಬೀಚ್‌ನಲ್ಲಿ ಇಳಿದು ರಜೆಯಲ್ಲಿ ಮಜಾ ಮಾಡುತ್ತಿದ್ದಾರೆ. ಸ್ವಿಮ್ ಸೂಟ್‌ನಲ್ಲೂ ಆಲಿಯಾ ಭಟ್ ನೆಟ್ಟಿಗರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದಾರೆ.
Manushi Chhilla  beach side outfit
2/4

ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಸಿನಿಮಾಗಳಲ್ಲಿ ಹೆಚ್ಚು ಸಕ್ಸಸ್ ಸಿಗದೇ ಹೋದರೂ, ಈಕೆ ಔಟ್‌ಫಿಟ್‌ಗಳಿಗೆ ಅವರದ್ದೇ ಆದ ಫ್ಯಾನ್ ಫಾಲೋವಿಂಗ್ ಇದ್ದಾರೆ. ಈ ನಟಿಯ ಫ್ಯಾಷನ್ ಸೆನ್ಸ್ ಸಖತ್ ಆಗಿದೆ. ಬೇಸಿಗೆಯಲ್ಲಿ ಮಾನುಷಿ ಚಿಲ್ಲರ್ ಆಯ್ಕೆ ಮಾಡಿಕೊಂಡಿರುವ ಸ್ವಿಮ್ ಸೂಟ್‌ ಗಮನ ಸೆಳೆಯುತ್ತಿದೆ. ಮನುಷಿ ಚಿಲ್ಲರ್ ಮೊನೊಕಿನಿಯಲ್ಲಿ ಸಿಕ್ಕಾಪಟ್ಟೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
Kriti Sanon  beach side outfit
3/4

ಬಾಲಿವುಡ್‌ನ ಮತ್ತೊಬ್ಬ ನಟಿ ಕೃತಿ ಸನನ್ ರಜೆಯ ಮೂಡ್‌ನಲ್ಲಿ ಇದ್ದಾರೆ. ಬೋಲ್ಡ್ ಹಾಗೂ ಗ್ಲಾಮರಸ್ ರೋಲ್‌ಗಳಲ್ಲಿ ಕಾಣಿಸಿಕೊಳ್ಳುವ ನಟಿ ರಿಯಲ್ ಲೈಫ್‌ನಲ್ಲೂ ಅಷ್ಟೇ ಬಿಂದಾಸ್. ಕೂಲಿಂಗ್ ಗ್ಲಾಸ್ ಧರಿಸಿ, ಬೀಚ್ ಔಟ್‌ಫಿಟ್‌ನಲ್ಲಿ ಬಿಂದಾಸ್ ಆಗಿ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ. ಕೃತಿ ಸನನ್ ಈ ಫೋಟೊಗಳು ನೆಟ್ಟಿಗರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ.
Alia Bhatt, Manushi Chhillar, Kriti Sanon, Janhvi Kapoor beach side outfit
4/4

ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಮತ್ತೊಬ್ಬ ನಟಿ ಶ್ರೀದೇವಿಯ ಪುತ್ರಿ ಜಾಹ್ನವಿ ಕಪೂರ್. ಪಿಂಕ್ ಔಟ್‌ಫಿಟ್‌ನಲ್ಲಿ ಸಖತ್ ಬೋಲ್ಡ್‌ ಲುಕ್ ಕೊಟ್ಟಿದ್ದಾರೆ. ಪಿಂಕ್ ಮಿನಿ ಸ್ಕರ್ಟ್‌ನಲ್ಲಿ ಮಿಲಿಯನ್ ಹಾರ್ಟ್‌ಗಳ ಬೀಟ್ ಅನ್ನು ಹೆಚ್ಚು ಮಾಡಿದ್ದಾರೆ. ಜಾಹ್ನವಿಯ ಫ್ಲೋರಲ್ ಸ್ಕರ್ಟ್‌ ಟ್ರೆಂಡಿಂಗ್ ಆಗಿದೆ. ಒಟ್ನಲ್ಲಿ ಬಾಲಿವುಡ್‌ನಲ್ಲಿ ನಟಿಯರು ವೆಕೆಷನ್ ಮೂಡ್‌ನಲ್ಲಿ ಇದ್ದಾರೆ. ಒಬ್ಬೊಬ್ಬರು ಒಂದೊಂದು ಔಟ್‌ಫಿಟ್‌ನಲ್ಲಿ ರಜೆಯ ಮಜಾ ಮಾಡುತ್ತಿದ್ದಾರೆ.
X