bredcrumb

ದೆಹಲಿಯಲ್ಲಿ ದೇವರಕೊಂಡ ಕೂಲ್ ಕೂಲ್

By Umesh M
| Published: Thursday, April 24, 2025, 20:13 [IST]

ತೆಲುಗು ನಟ ವಿಜಯ್ ದೇವರಕೊಂಡ ಸೋಲಿನ ಸುಳಿಗೆ ಸಿಲುಕ್ಕಿದ್ದಾರೆ. 'ಲೈಗರ್' ಚಿತ್ರದಲ್ಲಿ ನಟಿಸಿ ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಕನಸು ನುಚ್ಚು ನೂರಾಗಿತ್ತು. ಸದ್ಯ ಸೋಲಿನಿಂದ ಎದ್ದು ಬರುವ ಲೆಕ್ಕಾಚಾರದಲ್ಲಿದ್ದಾರೆ. ಇನ್ನು ತಮ್ಮದೇ ರೌಡಿ ಬ್ರ್ಯಾಂಡ್ ಬಟ್ಟೆಯ ಮಳಿಗೆಗಳನ್ನು ಹೊಂದಿದ್ದಾರೆ ರಶ್ಮಿಕಾ ಸೇರಿ ಕೆಲವರು ಅದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಸಹ ಆಗಿದ್ದಾರೆ. ಅದೇ ಬ್ರ್ಯಾಂಡ್ ಜಾಹೀರಾತು ಚಿತ್ರೀಕರಣಕ್ಕಾಗಿ ಇದೀಗ ವಿಜಯ್ ದೆಹಲಿಗೆ ಹೋಗಿದ್ದಾರೆ.

Telugu Actor Vijay devarakonda Chills In Delhi, shares pics
1/4

ರೌಡಿ ಬ್ರ್ಯಾಂಡ್ ಸಮ್ಮರ್ ಕಲೆಕ್ಷನ್ ಚಿತ್ರೀಕರಣಕ್ಕಾಗಿ ನಟ ವಿಜಯ್ ದೇವರಕೊಂಡ ದೆಹಲಿಯಲ್ಲಿದ್ದಾರೆ. ಲಿನಿನ್ ಕೋ-ಆರ್ಡ್ಸ್ ಡ್ರೆಸ್ ಧರಿಸಿ ಒಂದಷ್ಟು ಫೋಟೊಗಳನ್ನು ಅವರು ಹಂಚಿಕೊಂಡಿದ್ದಾರೆ.
Telugu Actor Vijay devarakonda Chills In Delhi, shares pics
2/4

ಸನ್ ಗ್ಲಾಸ್ ತೊಟ್ಟು, ಕೈಯಲ್ಲಿ ಮೊಬೈಲ್ ಹಿಡಿದು ವಿಜಯ್ ದೇವರಕೊಂಡ ಪೋಸ್ ಕೊಟ್ಟಿದ್ದಾರೆ. ದೆಹಲಿಯಲ್ಲಿ ಆರಾಮಾಗಿ ಚಿಲ್ ಮಾಡುತ್ತಿದ್ದೇನೆ ಎಂದು ತೆಲುಗು ನಟ ಬರೆದುಕೊಂಡಿದ್ದಾರೆ.
Telugu Actor Vijay devarakonda Chills In Delhi, shares pics
3/4

ರೆಸಾರ್ಟ್‌ ಮಾದರಿ ದೊಡ್ಡ ಹೋಟೆಲ್‌ನಲ್ಲಿ ಹಸಿರು ಮರಗಳು, ಪ್ರಕೃತಿಯ ನಡುವೆ ತಮ್ಮ ರೂಮ್ ಬಳಿ ವಿಜಯ್ ದೇವರಕೊಂಡ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಜೋಕಾಲಿಯಲ್ಲಿ ಉಯ್ಯಾಲೆ ಆಡುತ್ತಾ ಕಾಣಿಸಿಕೊಂಡಿದ್ದಾರೆ.
Telugu Actor Vijay devarakonda Chills In Delhi, shares pics
4/4

ಕಳೆದ ವಾರ ನಟಿ ಯಾಮಿ ಗೌತಮ್ ಜೊತೆ ಸೇರಿ ವಿಜಯ್ ದೇವರಕೊಂಡ ಪ್ರಧಾನಿ ಮೋದಿ ಭೇಟಿ ಮಾಡಿದ್ದರು. ಸದ್ಯ 'ಕಿಂಗ್‌ಡಮ್' ಚಿತ್ರದಲ್ಲಿ ಅವರು ನಟಿಸುತ್ತಿದ್ದು ಸಿನಿಮಾ ಬಹಳ ಕುತೂಹಲ ಮೂಡಿಸಿದೆ.
X