bredcrumb

ಭೂಮಿ ಪೆಡ್ನೇಕರ್ ಹೊಸ ಅವತಾರಕ್ಕೆ ಫ್ಯಾನ್ಸ್ ಕ್ಲೀನ್ ಬೋಲ್ಡ್...!

By Umesh M
| Published: Monday, April 7, 2025, 15:30 [IST]

ಕ್ಷೇತ್ರ ಯಾವುದೇ ಇರಲಿ ಚಾಲ್ತಿಯಲ್ಲಿ ಇದ್ದರಷ್ಟೇ ಬೆಲೆ. ಇಲ್ಲದೇ ಇದ್ದರೆ ಎಷ್ಟೇ ಜಾಣನಾದರೂ ಜಗತ್ತು ಕೋಣ ಎಂದೇ ಅಂದುಕೊಳ್ಳುತ್ತೆ. ಗೆದ್ದೆತ್ತಿನ ಬಾಲವನ್ನೇ ಹಿಡಿಯುತ್ತೆ. ಈ ಕಾರಣಕ್ಕೆ ಚಲಾವಣೆಯಲ್ಲಿರಲು ಅನೇಕರು ಅನೇಕ ತರಹದ ಸರ್ಕಸ್ ಗಳನ್ನ ಇಲ್ಲಿ ಮಾಡ್ತಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಂತೂ ನಾನಾ ತರಹದ ಕಸರತ್ತುಗಳನ್ನ ಅನೇಕರು ಮಾಡಲು ಮುಂದಾಗ್ತಾರೆ. ಇದಕ್ಕೆ ಭೂಮಿ ಪೆಡ್ನೇಕರ್ ಸದ್ಯದ ತಾಜಾ ಉದಾಹರಣೆ

Bhumi Pednekar Rocks a Trendy and Cool Look in Her Outfit.
1/5

ಭೂಮಿ ಪೆಡ್ನೇಕರ್.. ಒಂದ್ಕಾಲದ ಗಜಗಾಮಿನಿ. ಧಮ್ ಲಗಾಕೇ ಐಸಾ ಚಿತ್ರದ ಮೂಲಕ ಚಿತ್ರರಂಗವನ್ನ ಪ್ರವೇಶಿಸಿದ ಭೂಮಿ, ಸದ್ಯ ಎಲ್ಲರ ಗಮನ ಸೆಳೆಯಲು ನಾನಾ ಕಸರತ್ತು ಮಾಡುತ್ತಿದ್ದಾರೆ. ಇದಕ್ಕೆ ಇನ್ನೊಂದು ಕೈಗನ್ನಡಿ ಎಂಬಂತೆ ಸದ್ಯ ಹೊಸ ಫೋಟೋಶೂಟ್‌ನ ಭೂಮಿ ಮಾಡಿಸಿಕೊಂಡಿದ್ದು, ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Bhumi Pednekar Rocks a Trendy and Cool Look in Her Outfit.
2/5

ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಭೂಮಿ ಅವರ ಈ ಫೋಟೊಗಳು ಸದ್ಯ ಅನೇಕರ ಕಣ್ಣು ಕುಕ್ಕುತ್ತಿವೆ. ಕೆಲವರು ಭೂಮಿ ಅವರ ಸೌಂದರ್ಯವನ್ನು ಹಾಡಿ ಹೊಗಳುತ್ತಿದ್ದಾರೆ. ಇನ್ನೂ ಕೆಲವರು ಹೇಗಿದ್ದ ಭೂಮಿ ಹೇಗಾದರು ಎಂದು ಮರಗುತ್ತಿದ್ದಾರೆ.
Bhumi Pednekar Rocks a Trendy and Cool Look in Her Outfit.
3/5

ಅರ್ಬನ್ ಚಿಕ್ ಶೈಲಿಯ ಉಡುಪಿನಲ್ಲಿ ಭೂಮಿ ಕಾಣಿಸಿಕೊಂಡಿದ್ದು, ಸದ್ಯ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಭೂಮಿ ಪೆಡ್ನೇಕರ್ ಅವರ ಅಭಿಮಾನಿಗಳ ಹೃದಯವನ್ನು ಕೂಡ ಗೆಲ್ಲುತ್ತಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹಲವರು ಭೂಮಿಯನ್ನು ಹಾಡಿ ಹೊಗಳಿದ್ದಾರೆ.
Bhumi Pednekar Rocks a Trendy and Cool Look in Her Outfit.
4/5

ಇನ್ನುಳಿದಂತೆ ಭೂಮಿ ಪೆಡ್ನೇಕರ್ ಗೆ ಈಗ 34ರ ಹರೆಯ. ಬಾಲಿವುಡ್‌ಗೆ ಬಂದು 09 ವರ್ಷಗಳಾಗಿವೆ. ಈ 09 ವರ್ಷದಲ್ಲಿ ಭೂಮಿ ಪೆಡ್ನೇಕರ್ ಖಾಲಿ ಕುಳಿತ ಉದಾಹರಣೆ ಇಲ್ಲ. ಅದರಲ್ಲಿಯೂ 2019ರ ನಂತರ ವರ್ಷಕ್ಕೆ ಮೂರು ನಾಲ್ಕು ಸಿನಿಮಾಗಳನ್ನ ಮಾಡುತ್ತಾ ಬಂದವರು ಭೂಮಿ ಪೆಡ್ನೇಕರ್.
Bhumi Pednekar Rocks a Trendy and Cool Look in Her Outfit.
5/5

ಮಿಕ್ಕಂತೆ ಭೂಮಿ ಪೆಡ್ನೇಕರ್ ಕೈಯಲ್ಲಿ ಸದ್ಯಕ್ಕೆ ಕೇವಲ ಒಂದು ಸಿನಿಮಾ ಮಾತ್ರ ಇದೆ. ಎಲ್ಲರಿಗೆ ಗೊತ್ತಿರುವಂತೆ ಬಾಲಿವುಡ್ ನಲ್ಲಿ ಸದ್ಯಕ್ಕೆ ಹೊರಬರದ್ದೇ ಪಾರುಪತ್ಯ. ಈ ಕಾರಣಕ್ಕೆ ಬಾಲಿವುಡ್‌ನವರ ಗಮನ ಸೆಳೆಯಲು, ಭೂಮಿ ಪೆಡ್ನೇಕರ್ ಮಾಡ್ತಿರುವ ಬಗೆ ಬಗೆಯ ಕಸರತ್ತುಗಳ ಪೈಕಿ ಇದು ಕೂಡ ಒಂದು ಎಂಬ ವಾದ ಅನೇಕರದ್ದು.
X