bredcrumb

ಕೇರಳದಲ್ಲಿ ಟೀ ಕೊಯ್ಲು ಮಾಡಿ ಸಂಭ್ರಮಿಸಿದ ಸಂಗೀತಾ ಶೃಂಗೇರಿ

By Umesh M
| Published: Friday, March 28, 2025, 00:21 [IST]

ಬಿಗ್‌ ಬಾಸ್ ಖ್ಯಾತಿಯ ಸಂಗೀತ ಶೃಂಗೇರಿ ಇತ್ತೀಚೆಗೆ ಸೈಲೆಂಟ್ ಆಗಿದ್ದಾರೆ. ಹೊಸ ಸೀರಿಯಲ್ ಅಥವಾ ಸಿನಿಮಾಗಳ ಬಗ್ಗೆ ಸುದ್ದಿಯಿಲ್ಲ. ಆದ್ರೀಗ ಕೇರಳ ಜಂಗಲ್ ರೆಸಾರ್ಟ್ ಒಂದರ ಪ್ಲಾಂಟೇಷನ್‌ನಲ್ಲಿ  ಟೀ ಕೊಯ್ಲು ಮಾಡಿ ಸಂಭ್ರಮಿಸಿದ್ದಾರೆ. ಪ್ರಕೃತಿಯೊಂದಿಗೆ ಎಂಜಾಯ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಈ ಪೋಟೋಗಳನ್ನು ತನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.   

Sangeetha Sringeri Tea Plucking images
1/5

ಸ್ಯಾಂಡಲ್‌ವುಡ್‌ ನಟಿ ಹಾಗೂ ಮಾಜಿ ಬಿಗ್‌ ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿ ಕೇರಳ ವಯನಾಡಿನ ಜಂಗಲ್‌ ರೆಸಾರ್ಟ್ ಒಂದಕ್ಕೆ ವಿಸಿಟ್ ಹಾಕಿದ್ದರು. ಅಲ್ಲಿ ಪ್ರಕೃತಿ ಸೌಂದರ್ಯಕ್ಕೆ ಮರುಳಾಗಿರುವ ನಟಿ ಹಸಿರು ಹಾಗೂ ಅದ್ಭುತ ತಾಣಗಳಲ್ಲಿ ಎಂಜಾಯ್ ಮಾಡಿದ್ದಾರೆ. ಇದೇ ವೇಳೆ ಅಲ್ಲಿ ಪ್ಲಾಂಟೇಷನ್‌ನಲ್ಲಿ ಟೀ ಕೊಯ್ಲು ಮಾಡಿ ಸಂಭ್ರಮಿಸಿದ್ದಾರೆ.
Sangeetha Sringeri Tea Plucking images
2/5

ಯಾರೇ ಕೇರಳಕ್ಕೆ ಪ್ರವಾಸಕ್ಕೆ ಹೋದರೂ ಅಲ್ಲೊಂದು ಸಂಪ್ರದಾಯವಿದೆ. ಅದನ್ನು ಮಾಡಿಯೇ ಬರುತ್ತಾರೆ. ಅಲ್ಲಿಗೆ ಹೋದ ಪ್ರವಾಸಿಗರು ಟೀ ಕೊಯ್ಲು ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಹಾಗೇ ಸಂಗೀತಾ ಶೃಂಗೇರಿ ಕೂಡ ಪ್ಲಾಂಟೇಷನ್‌ನಲ್ಲಿ ಟೀ ಕೊಯ್ಲನ್ನು ಎಂಜಾಯ್ ಮಾಡಿದ್ದಾರೆ. ಅಲ್ಲಿನ ತಾಜಾ ಗಾಳಿ ಹಾಗೂ ಟೀ ತೋಟದ ಸೌಂದರ್ಯವನ್ನು ಸವಿದಿದ್ದಾರೆ.
Sangeetha Sringeri Tea Plucking images
3/5

ಕೇರಳದ ವಯನಾಡಿನಲ್ಲಿ ಸಂಗೀತಾ ಶೃಂಗೇರಿ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ಟೀ ಕೊಯ್ಲು ಮಾಡುವವರ ಜೊತೆ ಸಂಭಾಷಣೆ ನಡೆಸಿದ್ದಾರೆ. ಅಲ್ಲಿನ ಟೀ ಪ್ರೊಡಕ್ಷನ್ ಪ್ರಕ್ರಿಯೆ ಹೇಗಾಗುತ್ತೆ? ಅನ್ನೋದನ್ನು ತಿಳಿದುಕೊಂಡಿದ್ದಾರೆ. ಈ ಪ್ರವಾಸದಲ್ಲಿ ಅಲ್ಲಿ ಟೀ ಪ್ರೊಡಕ್ಷನ್ ಹೇಗಾಗುತ್ತೆ ಅನ್ನೋ ಅನುಭವವನ್ನು ಪಡೆದುಕೊಂಡಿದ್ದಾರೆ.
Sangeetha Sringeri Tea Plucking images
4/5

ವೈಲ್ಡ್ ಪ್ಲಾನೆಟ್ ಜಂಗಲ್ ರೆಸಾರ್ಟ್‌ನಲ್ಲಿ ಸಂಗೀತಾ ಶೃಂಗೇರಿ ಟೀ ಕೊಯ್ಲು, ಜಂಗಲ್ ಸಫಾರಿಗಳು ಹಾಗೂ ಟ್ರೆಕಿಂಗ್ ಅಂತ ಎಂಜಾಯ್ ಮಾಡಿದ್ದಾರೆ. ವಯನಾಡು ಪ್ರಕೃತಿ ಪ್ರಿಯರಿಗೆ ಜನಪ್ರಿಯ ತಾಣ.
Sangeetha Sringeri Tea Plucking images
5/5

ಸಂಗೀತಾ ಶೃಂಗೇರಿ ಕೇರಳ ವಯನಾಡು ಪ್ರವಾಸ ಪ್ರಕೃತಿಯ ಜೊತೆಗೆ ಬೆರೆಯುವಂತೆ ಮಾಡಿದೆ. ಸ್ಥಳೀಯ ಸಂಪ್ರಾದಾಯ, ಪ್ರಕೃತಿಯ ಸೌಂದರ್ಯವನ್ನು ಸವಿಯುವಂತೆ ಮಾಡಿದೆ. ವಯನಾಡಿನಲ್ಲಿ ಸಖತ್ ಎಂಜಾಯ್ ಮಾಡಿದ್ದು ಅವರು ಪೋಸ್ಟ್ ಮಾಡಿರುವ ಫೋಟೊಗಳೇ ಹೇಳುತ್ತಿದೆ.
X