bredcrumb

ಅಗಲಿದ ಅಮ್ಮನೊಂದಿಗೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸಂಬಂಧ ಹೇಗಿತ್ತು?

By Umesh M
| Published: Monday, April 7, 2025, 15:37 [IST]

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಾಯಿ ನಿಧನರಾಗಿದ್ದಾರೆ. ಪಾಶ್ವವಾಯು ತಗುಲಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಅಮ್ಮ ಕಿಮ್ ಫರ್ನಾಂಡಿಸ್ ನಡುವೆ ಉತ್ತಮ ಬಾಂಧವ್ಯವಿತ್ತು. ಅದೆಷ್ಟೋ ಸನ್ನಿವೇಶಗಳಲ್ಲಿ ಇಬ್ಬರೂ ಜೊತೆಯಾಗಿ ಕಂಡಿದ್ದಾರೆ. ಮಗಳ ಸಂಭ್ರಮವನ್ನು ಕಿಮ್ ಫರ್ನಾಂಡಿಸ್ ಸಂಭ್ರಮಿಸಿದ್ದಾರೆ.

Bollywood Actress Jacqueline Fernandez Special Bond With Her Mother
1/6

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅಮ್ಮನನ್ನು ಕಳೆದುಕೊಂಡಿದ್ದಾರೆ. ತಾಯಿ ಜಾಕ್ವೆಲಿನ್ ಫರ್ನಾಂಡಿಸ್ ತಮ್ಮ 65ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಜಾಕ್ವೆಲಿನ್ ಹಾಗೂ ಅವರ ತಾಯಿ ಕಿಮ್ ಫರ್ನಾಂಡಿಸ್ ಜೊತೆ ಆತ್ಮೀಯ ಬಾಂಧವ್ಯವನ್ನು ಹೊಂದಿದ್ದರು. ತಮಗೆ ತಾಯಿ ನೀಡುತ್ತಿದ್ದ ಬೆಂಬಲವನ್ನು ಜಾಕ್ವೆಲಿನ್ ಫರ್ನಾಂಡಿಸ್ ಆಗಾಗ ಹೇಳಿಕೊಂಡಿದ್ದು ಇದೆ. ಜಾಕ್ವೆಲಿನ್ ತಾಯಿ ಬಹಳ ದಿನಗಳ ವರೆಗೂ ಬಹರೇನ್‌ನಲ್ಲಿ ವಾಸವಿದ್ದರು. ಕಿಮ್ ಫರ್ನಾಂಡಿಸ್ ಅಗಲಿಕೆಗೆ ಬಾಲಿವುಡ್ ಮಂದಿ ಸಂತಾಪ ಸೂಚಿಸುತ್ತಿದ್ದಾರೆ.
Bollywood Actress Jacqueline Fernandez Special Bond With Her Mother
2/6

ಜಾಕ್ವೆಲಿನ್ ಫರ್ನಾಂಡಿಸ್ ಇತ್ತೀಚೆಗೆ ತನ್ನ ತಾಯಿಯೊಂದಿಗಿರುವ ಫೋಟೊವನ್ನು ಹಂಚಿಕೊಂಡಿದ್ದರು. ಈ ಫೋಟೊಗಳ ಮೂಲಕ ಅವರ ನಡುವಿನ ಸಂಬಂಧ ಹೇಗಿದೆ ಅನ್ನೋದನ್ನು ಶೇರ್ ಮಾಡಿದ್ದರು.
Bollywood Actress Jacqueline Fernandez Special Bond With Her Mother
3/6

ಜಾಕ್ವೆಲಿನ್ ಫರ್ನಾಂಡಿಸ್ ಶೇರ್ ಮಾಡಿದ ಫೋಟೊಗಳು ಅವರ ಜಾಯ್‌ಫುಲ್ ಮೂವ್ಮೆಂಟ್ ಅನ್ನು ಹೈಲೈಟ್ ಮಾಡಿದ್ದರು. ತಾಯಿ ಹಾಗೂ ಮಗಳ ಬಾಂಧವ್ಯವನ್ನು ಸಾರಿ ಹೇಳಿದ್ದವು. ಇದರಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ತಾಯಿಯೊಂದು ಸಿಕ್ಕಾಪಟ್ಟೆ ಖುಷಿಯಾಗಿದ್ದು ಎದ್ದು ಕಾಣಿಸುತ್ತಿತ್ತು.
Bollywood Actress Jacqueline Fernandez Special Bond With Her Mother
4/6

ಜಾಕ್ವೆಲಿನ್ ವೃತ್ತಿ ಬದುಕಿಗೆ ಬೆನ್ನೆಲುವಾಗಿ ನಿಂತಿದ್ದರು. ಹೀಗಾಗಿ ಅಮ್ಮನ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದಾಗ ಮೆಚ್ಚುಗೆ ವ್ಯಕ್ತವಾಗಿದ್ದವು. ಕುಟುಂಬದೊಂದಿಗೆ ನಟಿಯ ನಂಟು ಹೇಗಿದೆ ಅನ್ನೋದನ್ನು ಸಾರಿ ಹೇಳಿದ್ದವು.
Bollywood Actress Jacqueline Fernandez Special Bond With Her Mother
5/6

ಜಾಕ್ವೆಲಿನ್ ಫರ್ನಾಂಡಿಸ್ ಆಗಾಗ ತನ್ನ ತಾಯಿಯ ಬಗ್ಗೆ ಮಾತಾಡುತ್ತಲೇ ಇದ್ದರು. ತನ್ನ ಜೀವನದಲ್ಲಿ ಅವರ ಪಾತ್ರ ಎಷ್ಟಿತ್ತು? ಅನ್ನೋದನ್ನು ಹೇಳಿಕೊಂಡಿದ್ದರು. ತಾಯಿ ನೀಡಿದ ಬೆಂಬಲ ಹಾಗೂ ಸ್ಪೂರ್ತಿಯನ್ನು ನೆನೆಯುತ್ತಿದ್ದರು.
Bollywood Actress Jacqueline Fernandez Special Bond With Her Mother
6/6

ಜಾಕ್ವೆಲಿನ್ ಹಾಗೂ ಅವರ ತಾಯಿ ಕಿಮ್ ಫರ್ನಾಂಡಿಸ್ ಬಾಂಡಿಂಗ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮ್ಮ ಮಗಳ ಫೋಟೊಗಳನ್ನು ನೋಡಿ ಅವರ ಫ್ಯಾನ್ಸ್ ಕೂಡ ಭಾವುಕರಾಗಿದ್ದಾರೆ.
X