bredcrumb

2025ರಲ್ಲಿ ಈ ಫ್ರೆಶ್ ಜೋಡಿಯನ್ನು ನೋಡಲು ಬಯಸುತ್ತೀರಾ? ನಿಮಗೆ ಯಾರಿಷ್ಟ?

By Umesh M
| Published: Wednesday, April 16, 2025, 08:21 [IST]

2025ರಲ್ಲಿ ಬಾಲಿವುಡ್ ಸಿನಿಮಾ ಮಂದಿ ಈ ಫ್ರೆಶ್ ಜೋಡಿಗಳನ್ನು ತೆರೆಮೇಲೆ ನೋಡುವುದಕ್ಕೆ ಕಾತುರವಾಗಿದೆ. ಕೆಲವು ಸಿನಿಮಾಗಳು ಈ ಫ್ರೆಶ್ ಜೋಡಿಯಿಂದಲೇ ಗಮನ ಸೆಳೆಯುತ್ತಿದೆ. ಯಾಕಂದ್ರೆ, ಇದೇ ಮೊದಲ ಬಾರಿಗೆ ಈ ನಾಯಕ-ನಾಯಕಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಆ ಜೋಡಿಯ ಸಿನಿಮಾ ಯಾವುದು? ಅವರು ಯಾರು?   

Bollywood top 5 Most expected fresh pairs in 2025
1/5

2025ರಲ್ಲಿ ಮೇ 9ರಂದು ಬಾಲಿವುಡ್‌ನಲ್ಲಿ ಭೂಲ್ ಚುಕ್ ಮಾಫ್ ಎನ್ನುವ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾ ನಾಯಕ ಹಾಗೂ ನಾಯಕಿಯಿಂದ ಗಮನ ಸೆಳೆದಿದೆ. ರಾಜ್‌ಕುಮಾರ್ ಹಾಗೂ ವಾಮಿಕಾ ಗಬ್ಬಿ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಜೋಡಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದೆ. ಈ ಜೋಡಿಯ ಕೆಮಿಸ್ಟ್ರಿ ಬಗ್ಗೆ ಕುತೂಹಲವಿದೆ.
Bollywood top 5 Most expected fresh pairs in 2025
2/5

ಬಾಲಿವುಡ್‌ನ ಮತ್ತೊಂದು ಸಿನಿಮಾ 'ಅಬಿರ್ ಗುಲಾಲ್'. ಇದೊಂದು ರೊಮ್ಯಾಂಟಿಕ್ ಸಿನಿಮಾ ಆಗಿದ್ದು, ಮೇ 9ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಫವಾದ್ ಖಾನ್ ಹಾಗೂ ವಾಣಿ ಕಪೂರ್ ಇದೇ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜೋಡಿಯ ಅದ್ಬುತ ಪ್ರೇಮಕತೆಯನ್ನು ತೆರೆಮೇಲೆ ತರಲಿದ್ದಾರೆ ಅನ್ನೋ ನಿರೀಕ್ಷೆಯಿದೆ.
Bollywood top 5 Most expected fresh pairs in 2025
3/5

ಹಾರರ್ ಕಾಮಿಡಿ ಸಿನಿಮಾ 'ಥಮ' ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಅಕ್ಟೋಬರ್, 2025ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ನಾಯಕ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಜೋಡಿ ಮೋಡಿ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಪರೇಸ್ ರಾವಲ್ ಮತ್ತು ನವಾಜುದ್ದೀನ್ ಸಿದ್ಧಿಕಿ ಕೂಡ ನಟಿಸಿದ್ದಾರೆ.
Bollywood top 5 Most expected fresh pairs in 2025
4/5

ಬಾಲಿವುಡ್‌ನ ಮತ್ತೊಂದು ರೊಮ್ಯಾಂಟಿಕ್ ಸಿನಿಮಾ 'ತೆರೆ ಈಶ್ಕ್ ಮೇ'. 2025, ನವೆಂಬರ್ 28ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಧನುಷ್ ಹಾಗೂ ಕೃತಿ ಸನನ್ ಇದೇ ಮೊದಲ ಬಾರಿಗೆ ಈ ಜೋಡಿ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿ ತೆರೆಮೇಲೆ ಹೇಗಿರುತ್ತೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.
Bollywood top 5 Most expected fresh pairs in 2025
5/5

ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಜಾಹ್ನವಿ ಕಪೂರ್ ಇದೇ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಅದುವೇ 'ಪರಮ್ ಸುಂದರಿ'. ಈ ಸಿನಿಮಾ ಕೂಡ ಈ ಜೋಡಿಯ ಮೊದಲ ಸಿನಿಮಾ. ಇವರಿಬ್ಬರ ಆನ್‌ಸ್ಕ್ರೀನ್ ಕೆಮಿಸ್ಟ್ರಿಯನ್ನು ನೋಡುವುದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಈ ಎಲ್ಲಾ ಜೋಡಿಗಳು ಬಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳು. ಅದಕ್ಕೆ ಕಾರಣ ಈ ಜೋಡಿಗಳೇ.
X
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+