bredcrumb

ರಿಯಾಲಿಟಿ ಶೋ ರಾಣಿಯ ಬೋಲ್ಡ್ ಅವತಾರಕ್ಕೆ ಫ್ಯಾನ್ಸ್ ಫಿದಾ..!

By Kannada Filmibeat Photos
| Published: Saturday, March 22, 2025, 10:44 [IST]

ಕಾಲಿವುಡ್‌ನಲ್ಲಿ 2010ರಲ್ಲಿ ತೆರೆಗೆ ಬಂದ ನೀಯುಮ್ ನಾನುಮ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು ಚೇತನಾ ಪಾಂಡೆ. ಆದರೆ ಆ ನಂತರ ಚಿತ್ರರಂಗ ಇವರ ಕೈ ಹಿಡಿಯಲಿಲ್ಲ. ಅದೃಷ್ಟ ಖುಲಾಯಿಸಲಿಲ್ಲ.  ಹೀಗಾಗಿ ಕಿರುತೆರೆಯತ್ತ ಮುಖ ಮಾಡಿದ ಚೇತನಾ ಆ ನಂತರ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದರು. ಪ್ಯಾರ್ ತುನೇ ಕ್ಯಾ ಕಿಯಾ, ಫಿಯರ್ ಫ್ಯಾಕ್ಟರ್ ಸೇರಿ ನಾಲ್ಕೈದು  ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರು.  ಕೆಲ ಆಲ್ಬಂ ಹಾಡುಗಳಲ್ಲಿ ಕೂಡ ಹೆಜ್ಜೆ ಹಾಕಿದರು. ಇಂಥಾ ಚೇತನಾ ಪಾಂಡೆ ಈಗೀಗ ತಮ್ಮ ಬೋಲ್ಡ್ ಅವತಾರಗಳ ಮೂಲಕ ಸುದ್ದಿಯಾಗುತ್ತಿದ್ದಾರೆ. ತಮ್ಮ ಸೌಂದರ್ಯದ ಮೂಲಕ ಎಲ್ಲರ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. 

Chetna Pande's Stylish Getaway at Qasr Al Sarab Desert Resort
1/5

ಸಪ್ತಸಾಗರದಾಚೆ ಬಾಲಿವುಡ್‌ನ ಬೆಡಗಿ ಚೇತನಾ ಪಾಂಡೆ ತಮ್ಮ ರಜೆಯ ದಿನಗಳಲ್ಲಿ ಮಜಾ ಮಾಡುತ್ತಿದ್ದಾರೆ. ಸ್ವಿಮ್ ಸೂಟ್ ಧರಿಸಿ ಈಜುಕೊಳಕ್ಕೆ ಇಳಿದಿದ್ದಾರೆ. ಪಡ್ಡೆಗಳ ಕಣ್ಮನ ಸೆಳೆಯುತ್ತಿದ್ದಾರೆ.
Chetna Pande's Stylish Getaway at Qasr Al Sarab Desert Resort
2/5

ಬ್ಲ್ಯಾಕ್ ಕಲರ್ ಈಜುಡುಗೆಯಲ್ಲಿ ಕಾಣಿಸಿಕೊಂಡಿರುವ ಚೇತನಾ ಪಾಂಡೆ ಅವರ ಈ ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕಲಾರಸಿಕರಿಂದ ನಾನಾ ರೀತಿಯ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ.
Chetna Pande's Stylish Getaway at Qasr Al Sarab Desert Resort
3/5

ಚೇತನಾ ಪಾಂಡೆ ಅವರ ಈ ಮನಮೋಹಕ ಫೋಟೊಗಳಿಗೆ ಮನ ಸೋತ ಅನೇಕರು ತಮ್ಮ ತಮ್ಮ ಕಲ್ಪನೆಗೆ ಅನುಸಾರವಾಗಿ ನಟಿಯ ಸೌಂದರ್ಯವನ್ನು ವರ್ಣಿಸಿದ್ದಾರೆ. ಇಷ್ಟೊಂದು ಸುಂದರವಾದ ನಟಿಗೆ ಹಿಂದಿ ಚಿತ್ರರಂಗ ಅವಕಾಶ ನೀಡುತ್ತಿಲ್ಲವೇಕೆ ಎನ್ನುವ ಪ್ರಶ್ನೆಯನ್ನು ಕೂಡ ಕೆಲವರು ಕೇಳಿದ್ದಾರೆ.
Chetna Pande's Stylish Getaway at Qasr Al Sarab Desert Resort
4/5

ಅಂದ್ಹಾಗೇ ಚೇತನಾ ಪಾಂಡೆ ಚಿತ್ರರಂಗಕ್ಕೆ ಬಂದು 15 ವರ್ಷಗಳಾಗಿವೆ. ಈ 15 ವರ್ಷಗಳಲ್ಲಿ ಚೇತನಾ ಕೇವಲ ಐದು ಚಿತ್ರಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಆ ಪೈಕಿ ಅಜಯ್ ದೇವಗನ್ ಮತ್ತು ಶಾರುಖ್ ಖಾನ್ ಅಭಿನಯದ ಚಿತ್ರಗಳು ಕೂಡ ಇವೆಯಾದರೂ ಚೇತನಾ ಪಾತ್ರಕ್ಕೆ ಚಿತ್ರದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇರಲಿಲ್ಲ.
Chetna Pande's Stylish Getaway at Qasr Al Sarab Desert Resort
5/5

ಇನ್ನು ಎರಡು ವೆಬ್ ಸರಣಿಗಳಲ್ಲಿ ಕೂಡ ಚೇತನಾ ಕಾಣಿಸಿಕೊಂಡಿದ್ದು 2020ರಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. 2021ರಲ್ಲಿ ಆಲ್ಬಂ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ್ದೇ ಕೊನೆ. ಆ ನಂತರ ಚೇತನಾ ಅಭಿನಯದ ಚಿತ್ರವಾಗಲಿ, ವೆಬ್ ಸರಣಿಯಾಗಲಿ ಅಥವಾ ಆಲ್ಬಂ ಹಾಡಾಗಲಿ ಯಾವುದು ಬಂದಿಲ್ಲ.
X