bredcrumb

ಬ್ಲಾಕ್‌ಬಸ್ಟರ್ 'ಚಾವ' ಓಟಿಟಿ ರಿಲೀಸ್ ಡೇಟ್ ಫಿಕ್ಸ್!

By Umesh M
| Published: Monday, April 7, 2025, 15:26 [IST]

ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಐತಿಹಾಸಿಕ ಸಿನಿಮಾ 'ಛಾವ'. ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದ ಸಿನಿಮಾ ಇದೀಗ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಇದೇ ವಾರ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತದೆ ಎಂದು ಹೇಳಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ. ಇದೇ ವರ್ಷ ಫೆಬ್ರವರಿ 14ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ನೋಡ ನೋಡುತ್ತಲೇ ಕೋಟಿ ಕೋಟಿ ಕೊಳ್ಳೆ ಹೊಡೆಯಿತು. ಈಗಾಗಲೇ ಸಿನಿಮಾ 700 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ.

Chhaava OTT release: Vicky Kaushal starrer film expected to hit digital space on this date
1/4

ಬಾಲಿವುಡ್ ಸೂಪರ್ ಹಿಟ್ 'ಛಾವ' ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಭಾರೀ ಚರ್ಚೆ ನಡೀತಿದೆ. ಇದೇ ಏಪ್ರಿಲ್ 11ರಂದು ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಸಿಗುತ್ತದೆ ಎನ್ನಲಾಗ್ತಿದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ದೊಡ್ಡಮಟ್ಟದಲ್ಲಿ ಸಕ್ಸಸ್ ಕಂಡಿದೆ.
Chhaava OTT release: Vicky Kaushal starrer film expected to hit digital space on this date
2/4

ಛತ್ರಪತಿ ಶಿವಾಜಿ ಪುತ್ರ ಸಾಂಬಾಜಿಯ ಕಥೆಯನ್ನು 'ಛಾವ' ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಮಡೋಕ್ ಫಿಲ್ಮ್ಸ್ ಬ್ಯಾನರ್‌ ಅಡಿಯಲ್ಲಿ ಲಕ್ಷ್ಮಣ್ ಉಟೇಕರ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸಾಂಬಾಜಿ ಪಾತ್ರದಲ್ಲಿ ವಿಕ್ಕಿ ನಟಿಸಿ ಗೆದ್ದಿದ್ದಾರೆ.
Chhaava OTT release: Vicky Kaushal starrer film expected to hit digital space on this date
3/4

ಸಾಂಬಾಜಿ ಮಡದಿ ಯೇಸುಬಾಯಿ ಬೋನ್ಸಲೆ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಔರಂಗಜೇಬ್ ಪಾತ್ರದಲ್ಲಿ ಅಕ್ಷಯ್ ಖನ್ನಾ ಹುಬ್ಬೇರಿಸುವಂತೆ ನಟಿಸಿದ್ದಾರೆ. ಮರಾಠ ಸಾಮ್ರಾಜ್ಯವನ್ನು ದಾಳಿಕೋರರಿಂದ ಸಾಂಬಾಜಿ ರಕ್ಷಣೆ ಮಾಡಿದ ಕಥೆ ಚಿತ್ರದಲ್ಲಿದೆ.
Chhaava OTT release: Vicky Kaushal starrer film expected to hit digital space on this date
4/4

ಮೊಘಲ್ ದೊರೆ ಔರಂಗಜೇಬ್ ಮರಾಠ ಸಾಮ್ರಾಜ್ಯದ ಮೇಲೆ ಪದೇ ಪದೆ ದಾಳಿ ಮಾಡಿದ್ದು ಅದನ್ನು ಸಂಬಾಜಿ ಹಿಮ್ಮೆಟ್ಟಿಸಿದ ಕಥೆಯನ್ನು ನೋಡಬಹುದು. ಇನ್ನು ಮೋಸದಿಂದ ಸಾಂಬಾಜಿಯನ್ನು ಸೆರೆ ಹಿಡಿದು ಆತನಿಗೆ ಚಿತ್ರಹಿಂಸೆ ಕೊಟ್ಟು ಕೊಂದ ಕಥೆಯನ್ನು ಚಿತ್ರದಲ್ಲಿ ತೋರಿಸಿದ್ದಾರೆ. ಸಿನಿಮಾ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡಿದೆ.
X