bredcrumb

ಬಾಲಿವುಡ್ ತಾರೆಯರ ಹೋಳಿ ಹಬ್ಬ ಹೇಗಿತ್ತು ಗೊತ್ತಾ? ಈ ಫೋಟೊಗಳನ್ನು ನೋಡಿ

By Kannada Filmibeat Photos
| Published: Friday, March 14, 2025, 23:15 [IST]

ಹೋಳಿ ಹಬ್ಬ ಅಂದ್ರೆ ಬಾಲಿವುಡ್ ಮಂದಿಗೆ ಸಂಭ್ರಮ. ಸೆಲೆಬ್ರೆಟಿಗಳು ತಮ್ಮ ಮನೆಯಲ್ಲಿಯೇ ಬಣ್ಣದ ಹಬ್ಬವನ್ನು ಸೆಲೆಬ್ರೆಟ್ ಮಾಡುತ್ತಾರೆ. ಈ ಬಾರಿ ಕೂಡ ಬಾಲಿವುಡ್ ಮಂದಿ ಬಣ್ಣದ ಹಬ್ಬವನ್ನು ಸಖತ್ ಆಗಿಯೇ ಎಂಜಾಯ್ ಮಾಡಿದ್ದಾರೆ. ಕತ್ರಿನಾ ಕೈಫ್, ವಿಕ್ಕಿ ಕೌಶಲ್, ವರುಣ್ ಧವನ್, ವಿಜಯ್ ವರ್ಮಾ, ತಮನ್ನಾ ಹಾಗೂ ಶಿಲ್ಪಾ ಶೆಟ್ಟಿ ಹೋಳಿ ಹಬ್ಬವನ್ನು ಸಖತ್ ಆಗಿಯೇ ಸೆಲೆಬ್ರೆಟ್ ಮಾಡಿದ್ದಾರೆ.   

Bollywood Holi Celebration
1/10

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಕುಟುಂಬದೊಂದಿಗೆ 2025ರ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಈ ವೇಳೆ ವಿಕ್ಕಿ ಕೌಶಲ್ ಸಹೋದರ ಹಾಗೂ ಕತ್ರಿನಾ ಕೈಫ್ ಸಹೋದರಿ ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ವಿಕ್ಕಿ ಕೌಶಲ್ ಇಡೀ ಕುಟುಂಬ ಬಣ್ಣದ ಹಬ್ಬವನ್ನು ಸಂಭ್ರಮಿಸಿದೆ.
Bollywood Holi Celebration
2/10

ರವೀನಾ ಟಂಡನ್ ಹೋಳಿ ಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡಿದ್ದಾರೆ. ಅಲ್ಲದೆ ಬಾಲಿವುಡ್ ಸೆಲೆಬ್ರೆಟಿಗಳಿಗೆ ತಮ್ಮ ಮನೆಯಲ್ಲಿ ಹೋಳಿ ಪಾರ್ಟಿ ಕೊಟ್ಟಿದ್ದಾರೆ. ಇವರ ಮನೆಯಿಂದ ಹೋಳಿ ಪಾರ್ಟಿಯಲ್ಲಿ ಸಂಭ್ರಮಿಸಿ ತೆರಳುತ್ತಿರುವ ವೇಳೆ ನಟಿ ತಮನ್ನಾ, ಪ್ರಾಗ್ಯಾ ಕಪೂರ್ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.
Bollywood Holi Celebration
3/10

ಬಾಲಿವುಡ್‌ನ ಮತ್ತೊಬ್ಬ ನಟಿ ಶಿಲ್ಪಾ ಶೆಟ್ಟಿ ಈ ವರ್ಷದ ಹೋಳಿ ಹಬ್ಬವನ್ನು ಸಖತ್ ಗ್ರ್ಯಾಂಡ್ ಆಗಿ ಸಂಭ್ರಮಿಸಿದ್ದಾರೆ. ಪುತ್ರ ವಿಯಾನ್ ಜೊತೆ ಬಣ್ಣಗಳನ್ನು ಹಬ್ಬದಲ್ಲಿ ಪ್ರೀತಿಯನ್ನು ಹಂಚಿದ್ದಾರೆ.
Bollywood Holi Celebration
4/10

ಬಾಲಿವುಡ್‌ನ ಯಂಗ್ ಅಂಡ್ ಎನರ್ಜೆಟಿಕ್ ಸ್ಟಾರ್ ವರುಣ್ ಧವನ್ ತಮ್ಮ ಸಹೋದರರ ಜೊತೆ ಹೋಳಿ ಹಬ್ಬವನ್ನು ಆಚರಿಸಿದ್ದಾರೆ.
Bollywood Holi Celebration
5/10

ಇತ್ತೀಚೆಗಷ್ಟೇ ತಮನ್ನಾ ಜೊತೆ ಬ್ರೇಕಪ್ ಮಾಡಿಕೊಂಡಿರುವ ವಿಜಯ್ ವರ್ಮಾ ಕೂಡ ರವೀನಾ ಟಂಡನ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಹೋಳಿ ಹಬ್ಬ ಎಂಜಾಯ್ ಮಾಡಿ ಸಿಂಗಲ್ ಆಗಿ ತೆರಳಿದ್ದಾರೆ.
Bollywood Holi Celebration
6/10

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಕೂಡ ಹೋಳಿ ಹಬ್ಬದಲ್ಲಿ ಮಿಂದೆದ್ದಿದ್ದಾರೆ. ಬಣ್ಣಗಳ ಹಬ್ಬದಲ್ಲಿ ಅವರ ಮುಖದಲ್ಲಿ ಎನರ್ಜಿ ಎದ್ದು ಕಾಣುತ್ತಿದೆ. ಹಬ್ಬದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Bollywood Holi Celebration
7/10

ಕೃತಿ ಸನನ್ ಮತ್ತು ಧನುಷ್ ಹೋಳಿ ಹಬ್ಬದಲ್ಲಿ ಸಂಭ್ರಮದಲ್ಲಿ ಮಿಂಚಿದ್ದಾರೆ. 'ತೇರೆ ಇಶ್ಕ್ ಮೇ' ಸಿನಿಮಾದ ಸೆಟ್‌ನಲ್ಲಿ ಕೃತಿ ಹಾಗೂ ಧನುಷ್ ನಿರ್ದೇಶಕರ ಹೋಳಿ ಹಬ್ಬವನ್ನು ಆಚರಿಸಿದ್ದಾರೆ.
Bollywood Holi Celebration
8/10

ಇನ್ನು ಜಟಾಧರ ಸಿನಿಮಾದ ಸೆಟ್‌ನಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಬಣ್ಣಗಳನ್ನು ಎರಚಿ ಸಂಭ್ರಮಿಸಿದ್ದಾರೆ. ತನ್ನ ಬಣ್ಣದ ಕೈಗಳನ್ನು ತೋರಿಸಿ ಸಂಭ್ರಮಿಸಿದ್ದಾರೆ. ಈ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Bollywood Holi Celebration
9/10

ಮತ್ತೊಬ್ಬ ಬಾಲಿವುಡ್ ನಟಿ ಶೆಹನಾಜ್ ಗಿಲ್ ಹೋಳಿ ಹಬ್ಬದಲ್ಲಿ ಮಿಂದೆದ್ದಿದ್ದಾರೆ. ತನ್ನ ತಾಯಿಯೊಂದಿಗೆ ಬಣ್ಣದ ಹಬ್ಬ ಆಚರಿಸಿದ್ದಾರೆ. ಈ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
X