bredcrumb

ರಿಷಬ್ ಶೆಟ್ಟಿ ಫ್ಯಾಮಿಲಿ ಮ್ಯಾನ್ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿಗಳು

By Kannada Filmibeat Photos
| Published: Wednesday, March 26, 2025, 12:34 [IST]

'ಕಾಂತಾರ' ಸಿನಿಮಾ ರಿಷಬ್ ಶೆಟ್ಟಿಗೆ ದೊಡ್ಡ ಮಟ್ಟದ ಹೆಸರು ತಂದು ಕೊಟ್ಟಿದೆ. ಇಲ್ಲಿಂದ ರಿಷಬ್ ಶೆಟ್ಟಿ ದೇಶಾದ್ಯಂತ ಜನಪ್ರಿಯರಾಗಿದ್ದಾರೆ. ಈ ಸಿನಿಮಾ ರಿಲೀಸ್ ಆದ್ಮೇಲೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರೂ, ಕುಟುಂಬದ ಕಡೆಗೆ ಗಮನ ಹರಿಸುವುದನ್ನು ಎಂದಿಗೂ ಕಡಿಮೆ ಮಾಡಿಲ್ಲ. ಸಿನಿಮಾದ ಜೊತೆ ಜೊತೆಗೆ ಕುಟುಂಬಕ್ಕೂ ಮೊದಲ ಆದ್ಯತೆ ನೀಡುತ್ತಿದ್ದರು. ಕುಟುಂಬದೊಂದಿಗೆ ರಿಷನ್ ಶೆಟ್ಟಿ ಕಳೆದ ಐದು ಕ್ಷಣಗಳು ಇಲ್ಲಿದೆ. 

Rishab Shetty family moments
1/5

ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್ 1' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹಾಗಂತ ಶೂಟಿಂಗ್ ಜೊತೆ ಜೊತೆಗೆ ಕುಟುಂಬಕ್ಕೂ ಸಮಯ ಕೊಟ್ಟಿದ್ದಾರೆ. ಇತ್ತೀಚೆಗೆ ರಿಷಬ್ ಶೆಟ್ಟಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಪತ್ನಿ ಹಾಗೂ ಮಕ್ಕಳೊಂದಿಗೆ ದೇವರ ಆಶೀರ್ವಾದ ಪಡೆದರು.
Rishab Shetty family moments
2/5

ರಿಷಬ್ ಶೆಟ್ಟಿ ಅದೆಷ್ಟೇ ಬ್ಯುಸಿಯಾಗಿದ್ದರೂ ತಮ್ಮ ಮಕ್ಕಳ ಸ್ಪೆಷಲ್ ದಿನಗಳನ್ನು ಮಾತ್ರ ಮಿಸ್ ಮಾಡಿಕೊಳ್ಳುವುದಿಲ್ಲ. ಬರ್ತ್‌ಡೇ ಸೇರಿದಂತೆ ಹಲವು ಪ್ರಮುಖ ದಿನಗಳನ್ನು ಪಾರ್ಟಿ ಮಾಡುವುದರಲ್ಲಿ ಕಳೆಯುವುದಿಲ್ಲ. ಬದಲಾಗಿ ತನ್ನ ಆತ್ಮೀಯ ಕುಟುಂಬದೊಂದಿಗೆ ಕಳೆಯುತ್ತಾರೆ. ಮಕ್ಕಳು ಕುಟುಂಬದೊಂದಿಗೆ ಹೆಚ್ಚು ಬೆರೆಯುವುದಕ್ಕೆ ಬಿಡುತ್ತಾರೆ.
Rishab Shetty family moments
3/5

ರಿಷಬ್ ಶೆಟ್ಟಿ ಶೂಟಿಂಗ್‌ನಲ್ಲಿ ಅದೆಷ್ಟೇ ಬ್ಯುಸಿಯಾಗಿದ್ದರೂ ತಮ್ಮ ಕುಟುಂಬದೊಂದಿಗೆ ಪ್ರವಾಸ ಮಾಡುತ್ತಾರೆ. ಅದು ಕರ್ನಾಟಕದ ಸುಂದರ ತಾಣಗಳೇ ಆಗಿರಬಹುದು ಇಲ್ಲವೇ ಬೇರೆ ರಾಜ್ಯಗಳಾಗಿರಬಹುದು. ಕುಟುಂಬದೊಂದಿಗೆ ಹೆಚ್ಚಾಗಿ ಸಮಯವನ್ನು ಕಳೆಯುವುದಕ್ಕೆ ಇಷ್ಟ ಪಡುತ್ತಾರೆ.
Rishab Shetty family moments
4/5

ಇನ್ನು ರಿಷಬ್ ಶೆಟ್ಟಿ ಹಬ್ಬಗಳ ಆಚರಣೆ ಮಾಡುವುದನ್ನು ಮರೆಯುವುದಿಲ್ಲ. ತಮ್ಮ ಭಾಗದ ಸಂಪ್ರದಾಯಗಳನ್ನು ತಪ್ಪದೆ ಪಾಲಿಸುತ್ತಾರೆ. ಹಾಗೇ ಪತ್ನಿ ಹಾಗೂ ಮಕ್ಕಳು ಕೂಡ ತಮ್ಮ ಸಂಪ್ರದಾಯ ಹಾಗೂ ಸಂಸ್ಕೃತಿಯ ಜೊತೆ ಕನೆಕ್ಟ್ ಆಗುವಂತಹ ವಾತಾವರಣ ಸೃಷ್ಟಿಸುತ್ತಾರೆ. ಇವರ ಇನ್‌ಸ್ಟಾಗ್ರಾಂನಲ್ಲಿ ಆಗಾಗ ಕುಟುಂಬದೊಂದಿಗೆ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ.
Rishab Shetty family moments
5/5

ರಿಷಬ್ ಶೆಟ್ಟಿ ಸ್ಟಾರ್ ಆದ್ಮೇಲೆ ತಮ್ಮ ಊರನ್ನು ಮರೆತಿಲ್ಲ. ತಾನು ಹುಟ್ಟಿದ ಊರಿನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಾರೆ. ತಮ್ಮ ಸಿನಿಮಾವನ್ನು ಹೆಚ್ಚಾಗಿ ಅಲ್ಲಿಯೇ ಶೂಟಿಂಗ್ ಮಾಡುತ್ತಾರೆ. ಈ ವೇಳೆ ರಿಷಬ್ ಶೆಟ್ಟಿ ಕುಟುಂಬ ಕೂಡ ಅವರೊಂದಿಗೆ ಊರಿನಲ್ಲಿಯೇ ಉಳಿದು ಕೊಳ್ಳುತ್ತೆ.
X