bredcrumb

ಮೋಹನ್ ಲಾಲ್ 'ಎಂಪುರಾನ್' ಓಟಿಟಿ ರಿಲೀಸ್ ಡೇಟ್?

By Umesh M
| Published: Thursday, April 10, 2025, 14:23 [IST]

ಮೋಹನ್ ಲಾಲ್ ನಟನೆಯ 'L2: ಎಂಪುರಾನ್' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಸಿನಿಮಾ ಮಾರ್ಚ್ 27ಕ್ಕೆ ತೆರೆಗಪ್ಪಳಿಸಿತ್ತು. ಒಂದಷ್ಟು ವಿವಾದ, ಸಂಕಷ್ಟದ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. 'ಲೂಸಿಫರ್' ಸೀಕ್ವಲ್ ಆಗಿರುವ ಚಿತ್ರ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಕೊಂಚ ವಿಫಲವಾಗಿದೆ. ಆದರೂ ಸಿನಿಮಾ ಮೊದಲ 10 ದಿನದಲ್ಲಿ 250 ಕೋಟಿ ರೂ. ಕಲೆಕ್ಷನ್ ಮಾಡಿದೆ. ಸದ್ಯ ಸಿನಿಮಾ ಓಟಿಟಿಗೆ ಬರೋದು ಯಾವಾಗ ಎನ್ನುವ ಚರ್ಚೆ ಶುರುವಾಗಿದೆ.

L2: Empuraan Ott Release: Mohanlal's Movie Likely To Stream From this date
1/5

ಬಾಕ್ಸಾಫೀಸ್‌ನಲ್ಲಿ 'ಎಂಪುರಾನ್' ಮೋಹನ್ ಲಾಲ್ ಆರ್ಭಟ ಜೋರಾಗಿದೆ. ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಮಾಸ್ ಪ್ರೇಕ್ಷಕರ ಮನಗೆದ್ದಿದೆ. 2 ವಾರಕ್ಕೆ ಸಿನಿಮಾ 250 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ.
L2: Empuraan Ott Release: Mohanlal's Movie Likely To Stream From this date
2/5

ಕರ್ನಾಟಕದಲ್ಲಿ ಕೂಡ 'ಎಂಪುರಾನ್' ದರ್ಬಾರ್ ಜೋರಾಗಿದೆ. ಮಾರ್ಚ್ 27ರಂದು ಬೆಳ್ಳಂ ಬೆಳಗ್ಗೆ ಸಿನಿಮಾ ಪ್ರದರ್ಶನ ಶುರುವಾಗಿತ್ತು. ಕೊಂಚ ಮಟ್ಟಿಗೆ ಸಿನಿಮಾ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದ್ದು ಸುಳ್ಳಲ್ಲ.
L2: Empuraan Ott Release: Mohanlal's Movie Likely To Stream From this date
3/5

ಐಪಿಎಲ್ ಆರ್ಭಟದ ನಡುವೆಯೂ 'ಎಂಪುರಾನ್' ಸಿನಿಮಾ ಸದ್ದು ಮಾಡ್ತಿದೆ. ಒಂದಷ್ಟು ವಿವಾದಗಳ ಬಳಿಕ ಚಿತ್ರದ ಕೆಲ ಸನ್ನಿವೇಶಗಳಿಗೆ ಕತ್ತರಿ ಬಿದ್ದಿತ್ತು. ಚಿತ್ರತಂಡಕ್ಕೆ ಇಡಿ ಸಂಕಷ್ಟು ಕೂಡ ಎದುರಾಗಿತ್ತು. ಅದ್ಯಾವುದೂ ಸಿನಿಮಾ ಪ್ರದರ್ಶನಕ್ಕೆ ತೊಂದರೆಯಾಗಲಿಲ್ಲ.
L2: Empuraan Ott Release: Mohanlal's Movie Likely To Stream From this date
4/5

ಖುರೇಷಿ ಅಬ್ರಾಮ್ / ಸ್ಟೀಫನ್ ನೆಡುಂಪಲ್ಲಿ ಆಗಿ ಮೋಹನ್ ಅಬ್ಬರಿಸಿದ್ದಾರೆ. 'ಲೂಸಿಫರ್' ಚಿತ್ರದಲ್ಲಿ ಪೊಲಿಟಿಕಲ್ ಡ್ರಾಮಾ ಚೆನ್ನಾಗಿತ್ತು. ಆದರೆ ಸೀಕ್ವೆಲ್‌ನಲ್ಲಿ ಆಕ್ಷನ್ ಜೋರಾಗಿ ಸದ್ದು ಮಾಡ್ತಿದೆ. ಪಾರ್ಟ್-3 ಸಿನಿಮಾ ಕೂಡ ಬರಲಿದೆ.
L2: Empuraan Ott Release: Mohanlal's Movie Likely To Stream From this date
5/5

'ಎಂಪುರಾನ್' ಸಿನಿಮಾ ಜಿಯೋ ಹಾಟ್‌ಸ್ಟರ್ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಬರುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಚಿತ್ರಮಂದಿರಗಳಲ್ಲಿ 50 ದಿನ ಪ್ರದರ್ಶನ್ ಪೂರೈಸಿದ ಬಳಿಕ ಓಟಿಟಿಯಲ್ಲಿ ಲಭ್ಯವಾಗಬಹುದು.
X